TungaBhadra River Shimoga

TungaBhadra river Shimoga

ತುಂಗಭದ್ರಾ ನದಿ ಶಿವಮೊಗ್ಗ

Tunga River
ತುಂಗಾ ನದಿ

ನಮ್ಮ ತುಂಗಾ ನದಿ ನೀರು ಎಷ್ಟು ಸಿಹಿ ಅಂದ್ರೆ, ಪ್ರಪಂಚದಲ್ಲೇ ತುಂಗಾನದಿಯಷ್ಟು ಸಿಹಿಯಾದ ನೀರು ಮತ್ತೊಂದಿಲ್ಲ. ಈ ಮಾತನ್ನ ನಾನ್ ಹೇಳ್ತಾ ಇಲ್ಲ. ಫೇಮಸ್ ವಿಕಿಪೀಡಿಯಾದಲ್ಲಿ ದಾಖಲಾಗಿದೆ ಕೂಡ. ಅಷ್ಟಿಲ್ಲದೆ ಹೇಳುತ್ತಾರ ” ಗಂಗಾ ಸ್ನಾನ ತುಂಗಾ ಪಾನ” ಅಂತ. ಇಂತಹ ಸಿಹಿ ನೀರನ್ನು ಕುಡಿಯುತ್ತಿರುವ ನಾವೇ ಪುಣ್ಯವಂತರಲ್ಲವೇ? ಇನ್ನೊಂದು ವಿಷಯ ಏನಂದ್ರೆ ರಾಮಾಯಣದಲ್ಲಿ ಬರುವ ಪಂಪಾ ನದಿಯೇ ಈಗಿನ ನಮ್ಮ ತುಂಗಾ ನದಿ. ತುಂಗಾ ನದಿ ಮೂಲ ಏನು ಅಂತಾ ತಿಳ್ಕೋಬೇಕಾ!? ಕೆಳಗೆ ಓದಿ.

ತುಂಗ ಮತ್ತು ಭದ್ರಾ ನದಿ ಹುಟ್ಟುವುದು ಚಿಕ್ಕಮಗಳೂರು ಜಿಲ್ಲೆಯ ವರಾಹ ಪರ್ವತದಲ್ಲಿರುವ ಗಂಗಾಮೂಲದಲ್ಲಿ. ತುಂಗಾ ನದಿಯು ಈಶಾನ್ಯಕ್ಕೆ ಹರಿದು ಶೃಂಗೇರಿ , ತೀರ್ಥಹಳ್ಳಿ ಮತ್ತು ಶಿವಮೊಗ್ಗದಲ್ಲಿ ಹರಿಯುತ್ತದೆ. ಭದ್ರಾ ನದಿಯು ಮೊದಲು ಪೂರ್ವ ದಿಕ್ಕಿನಲ್ಲಿ ಹರಿದು ನಂತರ ಈಶಾನ್ಯಾಕ್ಕೆ ತಿರುಗಿ ಭದ್ರಾವತಿಯಲ್ಲಿ ಹರಿಯುತ್ತದೆ. ಪಶ್ಚಿಮಕ್ಕೆ ಹರಿಯುವ ನೇತ್ರಾವತಿ ನದಿಯು ಧರ್ಮಸ್ಥಳ ಮತ್ತು ಮಂಗಳೂರಿನಲ್ಲಿ ಹರಿದು ಅರೇಬಿಯನ್ ಸಮುದ್ರವನ್ನು ಸೇರುತ್ತದೆ.

ಕೂಡಲಿ ಶಿವಮೊಗ್ಗ
ಕೂಡಲಿ ಶಿವಮೊಗ್ಗ

ಶಿವಮೊಗ್ಗದಲ್ಲಿ ತುಂಗೆಯಾಗಿ ಭದ್ರಾವತಿಯಲ್ಲಿ ಭದ್ರೆಯಾಗಿ ಕೂಡಲಿಯಲ್ಲಿ ಸಂಗಮವಾಗುವ ಈ ನದಿಗಳು ಕ್ರಮಿಸುವ ದೂರ 147 ಕಿ ಮೀ ಮತ್ತು 171 ಕಿ ಮೀ. ಕೂಡಲಿಯಿಂದ 531 ಕಿಮೀ ಹರಿದು ನಂತರ ಗೊಂಡಿಮಲ್ಲ ಎಂಬಲ್ಲಿ ಕ್ರಿಷ್ಣಾ ನದಿಗೆ ಸೇರುತ್ತದೆ. ಗೊಂಡಿಮಲ್ಲ ಇರುವುದು ತೆಲಾಂಗಣ ರಾಜ್ಯದ ಮೆಹಬೂಬ್ ಜಿಲ್ಲೆಯ ಆಲಂಪುರ ಎಂಬಲ್ಲಿ. ಅಲ್ಲಿಂದ ಪೂರ್ವಕ್ಕೆ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ.
ತುಂಗಭದ್ರಾ ನದಿಗೆ 100ಕ್ಕೂ ಹೆಚ್ಚು ಉಪನದಿಗಳಿವೆ. ಶಿವಮೊಗ್ಗ , ಉತ್ತರ ಕನ್ನಡ ಮತ್ತು ಹಾವೇರಿಯಲ್ಲಿ ಹರಿಯುವ ವರದಾ ನದಿ, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರಿನಲ್ಲಿ ಹರಿಯುವ ಹಗರಿ(ವೇದವತಿ), ಕರ್ನೂಲ್ ನಲ್ಲಿ ಹರಿಯುವ ಹಂದ್ರಿ ಇದರ ಪ್ರಮುಖ ಉಪನದಿಗಳು.

ತುಂಗಾ ನದಿ- ಶೃಂಗೇರಿ
ತುಂಗಾ ನದಿ- ಶೃಂಗೇರಿ

ಇನ್ನು ನಮ್ಮ ತುಂಗಭದ್ರಾ ನದಿಯ ದಡದಲ್ಲಿ ಇರುವ ಪ್ರಮುಖ ಪುಣ್ಯ ಸ್ಥಳಗಳು

 

1.ಶೃಂಗೇರಿ ಶಾರದಾಪೀಠ- ಶ್ರೀ ಆದಿ ಶಂಕರಾಚಾರ್ಯರು ಸ್ಥಾಪಿಸಿದ್ದು
2.ಹರಿಹರೇಶ್ವರ ದೇವಸ್ಥಾನ-ಹರಿಹರ
3.ಜೋಗುಳಾಂಬ ದೇವಸ್ಥಾನ, ದಕ್ಷಿಣಕಾಶಿ-ಕುರ್ನೂಲ್
4.ವಿಜಯನಗರ ಸಾಮ್ರಾಜ್ಯವಾಗಿದ್ದ- ಹಂಪೆ

ತುಂಗಭದ್ರಾ ಡ್ಯಾಂ- ಹೊಸಪೇಟೆ
ತುಂಗಭದ್ರಾ ಡ್ಯಾಂ- ಹೊಸಪೇಟೆ

ತುಂಗಭದ್ರಾ ನದಿಗೆ ಕಟ್ಟಲಾಗಿರು ಡ್ಯಾಂಗಳು

1.ಗಾಜನೂರು ಡ್ಯಾಂ- ಶಿವಮೊಗ್ಗ (ತುಂಗಾ ನದಿಗೆ ಕಟ್ಟಿದ್ದು)https://shimogasiri.com/gajanuru-dam-shimoga/
2.ಲಕ್ಕವಳ್ಳಿ ಡ್ಯಾಂ(ಭದ್ರಾ ನದಿಗೆ ಕಟ್ಟಿದ್ದು)
3.ತುಂಗಭದ್ರಾ ಡ್ಯಾಂ- ಹೊಸಪೇಟೆ
4.ಕೋಟ್ಲಾ ವಿಜಯಭಾಸ್ಕರ ರೆಡ್ಡಿ ಪ್ರೋಜೆಕ್ಟ್- ಕುರ್ನೂಲ್

TungaBhadra River Shimoga

Tunga river water is considered to be the sweetest water in the world.

-Wikipedia

There is a saying in “Ganga snana Tunga paana”. That means Should take bath in holy river Ganga and drink the sweetest water of river Tunga.

Tunga river
Tunga river

Tunga & Bhadra both the rivers originate in Gangamoola, Chikmagalur district of Karnataka. From there river Tunga flows towards north-east in Shringeri, Thirthahalli & Shivamogga. River Bhadra first flows towards east then towards northeast in Bhadravathi town of Shivamogga district. Tunga & Bhadra rivers cover a distance of 147kms & 171kms before joining in Koodali, a village in Shivamogga district. From there the river gets the name as Tungabhadra.

Koodali TungaBhadra river Shimoga
Koodali Tungabhadra river Shimoga

From Koodali Tungabhadra river flows towards Telangana State joining River Krishna at Gondimalla. Gondimalla is in Alampur, Mahboob district, Telangana State. Tungabhadra has more than 100 tributaries. Varada flows in Shivamogga, Uttara Kannada & Haveri Districts, Hagari (river Vedavathi) in Chitradurga, Bellary, Koppala & Raichur districts of Karnataka and Handri in Kurnool are the main tributaries of river Tungabhadra. After joining with river Krishna in Gondimalla, Tungabhadra river flows towards the east and joins the Bay of Bengal.

https://shimogasiri.com/thirthahalli-tunga-bridge/  (100years old bridge)

There are important holy places which lie in the banks of the river Tungabhadra

  1. Sringeri Sharadapeetham- By Shri Adi Shankaracharya
  2. Harihareshwara temple- Harihara
  3. Jogulamba temple, Dakshina Kashi- Kurnool
  4. Vijayanagara empire- Hampi
  5. Raghavendra Swamy mutt- Mantralayam

There are major Dams being constructed to the river Tungabhadra

  1. Gajanuru Dam- Shivamogga ( for River Tunga)https://shimogasiri.com/gajanuru-dam-shimoga/
  2. Lakkavalli Dam- for River Bhadra
  3. Tungabhadra Dam-Hosapete
  4. Kotla Vijayabhaskara Reddy project- Kurnool.

 

Leave a Comment

ten − five =

ShimogaSiri

K R Puram

Shivamogga

Karnataka

577202

9611875511