Thirthahalli Tunga Bridge

Thirthahalli Tunga Bridge

ತೀರ್ಥಹಳ್ಳಿ ತುಂಗಾ ಸೇತುವೆ:

Thirthahalli Tunga Bridge
Thirthahalli Tunga Bridge

ತೀರ್ಥಹಳ್ಳಿ ಅಂದ ತಕ್ಷಣ ನೆನಪಾಗೋದು ಹಸಿರು , ಮಳೆ, ತಂಪು ವಾತಾವರಣ , ತುಂಗಾ ನದಿ, ನಿರ್ಮಲ ಪ್ರದೇಶ. ತೀರ್ಥಹಳ್ಳಿ ಇರುವುದು ಶಿವಮೊಗ್ಗದಿಂದ ಕಿ ಮೀ . ಶಿವಮೊಗ್ಗದಿಂದ ಒಂದು ಘಂಟೆಯ ಹಾದಿ.

ತೀರ್ಥಹಳ್ಳಿಯಲ್ಲಿ ಹರಿಯುವುದು ತುಂಗಾ ನದಿ . ಕುರುವಳ್ಳಿ ಮತ್ತು ತೀರ್ಥಹಳ್ಳಿಗೆ ಕಟ್ಟಿರುವುದೇ ಈ ತುಂಗಾ ಸೇತುವೆ . ಇದನ್ನು ತೀರ್ಥಹಳ್ಳಿ ಬ್ರಿಡ್ಜ್ , ಜಯಚಾಮರಾಜೇಂದ್ರ ಬ್ರಿಡ್ಜ್ ಎಂತಲೂ ಕರೆಯುತ್ತಾರೆ.

https://shimogasiri.com/tungabhadra-river-shivamogga-district/

(Thirthahalli tourist places)

Thirthahalli Tunga Bridge
Thirthahalli Tunga Bridge

ಈ ಸೇತುವೆಯ ವಿಶೇಷತೆ ಏನು ಅಂದ್ರೆ ಇದು 75ವರ್ಷ ಹಳೆಯದು . ಹೌದು ತುಂಗಾ ನದಿಗೆ ಕಟ್ಟಲಾಗಿರುವ ಅತಿ ಹಳೆಯ ಸೇತುವೆ ಈ ತುಂಗಾ ಸೇತುವೆ. ಇದರ ಮತ್ತೊಂದು ವಿಶೇಷತೆ ಎಂದರೆ ಇದರ ಡಿಸೈನ್ ಮತ್ತು supervising ಮಾಡಿದ್ದು ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರು.

ತುಂಗಾ ಸೇತುವೆಯನ್ನು ಆರ್ಕ್ ರೀತಿಯಲ್ಲಿ ಕಟ್ಟಲಾಗಿದ್ದು , ಕಂಬಗಳನ್ನು ಬ್ರಿಡ್ಜ್ ನ ಎರಡೂ ಕಡೆಗೆ ಸೇರಿಸಿ ಕಟ್ಟಲಾಗಿದೆ. ಸಿಡ್ನಿಯ harbour bridge ಅನ್ನು ಈ ಬ್ರಿಡ್ಜ್ ಹೋಲುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದಕ್ಕೂ ಅದಕ್ಕೂ ಸ್ವಲ್ಪ ವ್ಯತ್ಯಾಸ ಇದೆ.

Thirthahalli Tunga Bridge
Thirthahalli Tunga Bridge

How it was built: Thirthahalli Tunga Bridge

ತೀರ್ಥಹಳ್ಳಿಯ ಈ ಸೇತುವೆಯನ್ನು ಜಯಚಾಮರಾಜೇಂದ್ರ ಸೇತುವೆ ಎಂತಲೂ ಕರೆಯುತ್ತಾರೆ, ಕಾರಣ 1943 ರಲ್ಲಿ ಪೂರ್ಣಗೊಂಡ ಈ ಸೇತುವೆಯನ್ನು ಪ್ರಾರಂಭ ಮಾಡಿದ್ದು ಮೈಸೂರಿನ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರು. ಆದ್ದರಿಂದ ಅವರ ಹೆಸರನ್ನು ಈ ಸೇತುವೆಗೆ ಇಡಲಾಗಿದೆ.

Shivamogga Thirthahalli Road
Shivamogga Thirthahalli Road

ಈ ವಿಶೇಷವಾದ ಸೇತುವೆಯನ್ನು ನೋಡಲಿಕ್ಕೆ ಅಂತಾನೆ ವೀಕೆಂಡ್ ನಲ್ಲಿ ಜನ ಬರ್ತಾರೆ. ನೀವು ಬರೋದಾದ್ರೆ ಈ ವೀಕೆಂಡ್ ಪ್ಲಾನ್ ಮಾಡಿ . ಶಿವಮೊಗ್ಗದಿಂದ ತೀರ್ಥಹಳ್ಳಿ ರೋಡ್ ನಲ್ಲಿ ಜೀವನದಲ್ಲಿ ಒಮ್ಮೆಯಾದರೂ travel ಮಾಡಬೇಕು , ಸ್ವರ್ಗಕ್ಕೆ ದಾರಿ ಅನ್ನೋ. ತರ ಇದೆ ನಮ್ಮೂರು. ರಸ್ತೆಯ ಒಂದು ಬದಿ ತುಂಗಾ ನದಿ ಹರಿಯುತ್ತದೆ. ಮತ್ತೊಂದು ಬದಿ ದಟ್ಟ ಕಾಡು.

ಶಂಕರ್ ನಾಗ್ ರವರ ಮಾಲ್ಗುಡಿ ಡೇಸ್ ಶೂಟಿಂಗ್ ಆಗಿದ್ದು ಇದೇ ತೀರ್ಥಹಳ್ಳಿಯಲ್ಲಿ . ಶೂಟಿಂಗ್ ಗೆ ಬಳಸಿಕೊಂಡ ಮನೆ ಈಗಲೂ ಸಹತೀರ್ಥಹಳ್ಳಿಯಲ್ಲಿದೆ . ತೀರ್ಥಹಳ್ಳಿಗೆ ಹೋದರೆ ಒಮ್ಮೆ ಅದನ್ನು ನೋಡಿ ಬನ್ನಿ.

https://shimogasiri.com/malgudi-days-shankar-nags-dream-came-true-in-shivamogga/

Shivamogga Thirthahalli Road
Shivamogga Thirthahalli Road

ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಬಹಳಷ್ಟು ಪ್ರೈವೇಟ್ ಬಸ್ ಗಳು ಇವೆ . ಆದರೆ ನನ್ನ suggestion ಅಂದ್ರೆ ನಿಮ್ಮ ಸ್ವಂತ vehicle ನಲ್ಲಿ ಬನ್ನಿ. ಕಾರಣ Best place to take photos & photography.

ಹತ್ತಿರದ ರೈಲ್ವೆ ಸ್ಟೇಷನ್ ಅಂದ್ರೆ ಶಿವಮೊಗ್ಗ ರೈಲ್ವೆ ಸ್ಟೇಷನ್. ಬೆಂಗಳೂರು mattu ಮೈಸೂರಿನಿಂದ ಬಹಳಷ್ಟು ಟ್ರೈನ್ಗಳಿವೆ .

ಹತ್ತಿರದ airport ಅಂದರೆ ಮಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್.

ಈ ಮಳೆಗಾಲ ತೀರ್ಥಹಳ್ಳಿನ ಮಿಸ್ ಮಾಡ್ಕೋ ಬೇಡಿ.

3 thoughts on “Thirthahalli Tunga Bridge”

  1. ನಿಜಕ್ಕೂ ಸುಂದರವಾದ ಸೇತುವೆ. ವಿವರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

Leave a Comment

11 − 3 =

ShimogaSiri

K R Puram

Shivamogga

Karnataka

577202

9611875511