ಶಿವಮೊಗ್ಗ ಅಂದ್ ತಕ್ಷಣ ನೆನಪಾಗೊದು ಜೊಗ್ ಫಾಲ್ಸ್, ಆದರೆ ಈಗ ಶಿವಮೊಗ್ಗ ಜೊಗ್ ಫಾಲ್ಸ್ ಗೆ ಮಾತ್ರ ಫೆಮಸ್ ಅಲ್ಲ. ಶಿವಮೊಗ್ಗ ಇವಾಗ ಕಾರ್ಪೊರೇಶನ್ ಸಿಟಿ. ಶಿವಮೊಗ್ಗ ಕಾರ್ಪೊರೆಶನ್ ಆಗಿದ್ದು 2009ರಲ್ಲಿ. ಶಿವಮೊಗ್ಗನ ಕೊನೆಯದಾಗಿ ಆಳಿದವನು ಶಿವಪ್ಪನಾಯಕ, ಅದೂ ಕ್ರಿ ಶ ೧೬೦೦ ರಲ್ಲಿ. ಶಿವಮೊಗ್ಗ ನ ಮಲೆನಾಡಿನ ಹೆಬ್ಬಾಗಿಲು ಅಂತ ಕರೀತಾರೆ. ಶಿವಮೊಗ್ಗ ಸಿಟಿನಲ್ಲಿ ಕೆಲವು ಜಾಗಗಳಿವೆ ಅದೆಲ್ಲ ಇಲ್ಲಿಯವರಿಗೆ ಮಾತ್ರ ಅಲ್ಲ ಹೊರಗಡೆ ಇಂದ ನಮ್ಮೂರಿಗೆ ಬರೊ ಜನಾಕ್ಕೂ ಕೂಡ ಇಷ್ಟ ಆಗತ್ತೆ. ಒಂದೊಂದಾಗಿ ಯಾವುದು ಅಂತ ನೊಡೊಣ. * ಶಿವಪ್ಪನಾಯಕನ ಅರಮನೆ-ಇದು ಶಿವಪ್ಪನಾಯಕನ ಬೇಸಿಗೆ ಆರಮನೆ. ಇಲ್ಲಿ ಹೊದ್ರೆ ಸುಮಾರು ಒಂದರಿಂದ ಎರಡು ಘಂಟೆ ಅರಮನೆ ನೊಡ್ ಬಹುದು.ಇಲ್ಲಿ ರಾಜರ ಕಾಲದ ಶಿಲ್ಪಕಲೆ ಮತ್ತು ಶಿಲೆಗಳನ್ನು ಕಾಣಬಹುದು. * ಸೆಕ್ರೆಡ್ ಹಾರ್ಟ್ ಚರ್ಚ್- ಬಿ ಹೆಚ್ ರೊಡ್ ನಲ್ಲಿ ಇರೊ ಈ ಚರ್ಚ್ ಭಾರತದಲ್ಲೆ ಎರಡನೆಯ ಅತೀದೊಡ್ಡದು. ಈ ಚರ್ಚ್ ಗೆ ಸಂಬಂಧ ಪಟ್ಟ ಸ್ಕೂಲ್ಸ್ ಮತ್ತು ಕಾಲೆಜ್ ಗಳು ಇಲ್ಲಿದೆ. * ಇನ್ನು ಗಾಂಧಿ ಬಜಾರ್-ಶಿವಮೊಗ್ಗದ ಮೈನ್ ಮಾರ್ಕೆಟ್ ಏರಿಯಾ. ಇಲ್ಲಿ ಎಲ್ಲಾ ರೀತಿಯ ವಸ್ತುಗಳು ಕಡಿಮೆ ಕಾಸ್ ನಲ್ಲಿ ಸಿಗತ್ತೆ. ಹಬ್ಬದ್ ಟೈಮ್ ನಲ್ಲಂತು ಕಾಲಿಡಕ್ಕೆಜಾಗ ಇರೊದಿಲ್ಲ. ಆದ್ರು ಜನ ಬಿಡಲ್ಲ ಸರ್ಕಸ್ ಮಾಡಿಯಾದ್ರು ಖರೀದಿ ಮಾಡ್ತಾರೆ. ಬಟ್ಟೆ, ತರ್ಕಾರಿ, ಹೂವು ಎಲ್ಲಾ ಹೊಲ್ ಸೆಲ್ ರೆಟ್ ನಲ್ಲಿ ಸಿಗತ್ತೆ. * ದೇವಸ್ಥಾನ ಗಳಿಗೆ ಇಲ್ಲಿ ಬರ ಇಲ್ಲ. ಅಲ್ಲ ದೇವಸ್ಥಾನಗಳಿಗೆ ಎಲ್ಲು ಬರ ಇಲ್ಲ ಬಿಡಿ ಯಾಕಂದ್ರೆ ಜನಕ್ಕೆ ದೇವರ ಮೇಲೆ ಭಕ್ತಿ ಜಾಸ್ತಿ. ಕೊಟೆ ಆಂಜನೇಯ ದೇವಸ್ಥಾನ ಇದು ಶಿವಮೊಗ್ಗ ನಲ್ಲಿ ತುಂಬ ಫೆಮಸ್. ಶನಿವಾರ ಬಂತು ಅಂದ್ರೆ ಬರೀ ಹುಡುಗ್ರು ಹುಡ್ಗಿರೆ ತುಂಬಿರ್ತಾರೆ. ಈ ಆಂಜನೇಯ ತುಂಬ ಪವರ್ ಫುಲ್ ಮತ್ತು ಇದಕ್ಕೆ 400 ವರ್ಷಗಳ ಇತಿಹಾಸ ಇದೆ ಅಂತಾರೆ. ಇದ್ರ ಹಿಂದೆ ಭೀಮೆಶ್ವರ ದೇವಸ್ಥಾನ ಕೂಡ ಇದೆ. ಇಲ್ಲಿ ದೂರ್ವಾಸ ಮುನಿಗಳು ಶಿವನ ಆರಾಧನೆ ಮಾಡ್ತಾ ಇದ್ರಂತೆ ಹಾಗಾಗಿ ಇದನ್ನ ದೂರ್ವಾಸ ಕ್ಷೇತ್ರ ಅಂತಾನು ಕರೀತಾರೆ.ಇಲ್ಲಿ ಗಣಪತಿ ಗಲಾಟೆ ಗಣಪತಿ ಅಂತಾನೆ ಫೆಮಸ್. ಗಲಾಟೆ ಮಾಡ್ದೆ ಗಣಪತಿ ವಿಸರ್ಜನೆ ಆಗೊದೆ ಇಲ್ಲ. ಈ ಟೈಮ್ ನಲ್ಲಿ ಶಿವಮೊಗ್ಗ ಪೂರ್ತಿ ಪೊಲೀಸ್ ನೊರೆ ಇರ್ತಾರೆ.ಈ ದೆವಸ್ಥಾನದ್ ಎದ್ರಿಗೆ ಸಿಗೊ ಮಸಾಲೆ ಮಂಡಕ್ಕಿ ಕೂಡ ಸೂಪರ್. ಇಲ್ಲಿಂದ ಒಂದ್ ಅರ್ಧ ಕಿಲೊಮೀಟರ್ ಇರ್ ಬಹುದು ದೊಡ್ದ ಗಣಪತಿ ದೇವಸ್ಥಾನ ಇದೆ. ರಾಮಣ್ನ ಶೆಟ್ಟಿ ಪಾರ್ಕ್ ಅಂತ ಫೆಮಸ್,ಇಲ್ಲಿ ಗಣಪತಿ ಹಬ್ಬ ತುಂಬ ಜೋರು. ಶಿವಮೊಗ್ಗ ಜನ, ಶಿವಮೊಗ್ಗ ಸುತ್ತಮುತ್ತಲಿನ ಜನ ಎಲ್ರು ಬರ್ತಾರೆ ಹಬ್ಬದ್ ಟೈಮ್ ನಲ್ಲಿ.ಇದ್ರ ಹತ್ತಿರದಲ್ಲೆ ಲಕ್ಷ್ಮೀನಾರಾಯಣ ದೇವಸ್ಥಾನ, ಚಿದಂಬರ ದೇವಸ್ಥಾನ ಮತ್ತು ಭವಾನಿಶಂಕರ ದೇವಸ್ಥಾನ ಕೂಡ ಇದೆ. ನೊಡಿದ್ರಾ ಒಂದೆ ಕಡೆ ಎಷ್ಟು ದೇವಸ್ಥಾನ ಇದೆ. * ಟ್ರಾಫಿಕ್ ವಿಚಾರಕ್ಕೆ ಬಂದ್ರೆ ನಮ್ಮೂರು ಪೀಸ್ ಫುಲ್. ಟ್ರಾಫಿಕ್ ಜಾಮ್ ಆಗೊದು ತುಂಬನೆ ಕಡಿಮೆ. . ಮೈನ್ ರೋಡ್ ಗಳು ಅಂದ್ರೆ ನೆಹರು ರೊಡ್, ಬಿ ಹೆಚ್ ರೊಡ್ ಸವಳಂಗ ರೊಡ್. ಬ್ರಾಂಡೆಡ್ ಶೊರೂಂಗಳು, ಜುವೆಲ್ಲರಿ ಶೊರೂಂಗಳು, ಬ್ಯಾಂಕ್ ಗಳು ಎಲ್ಲಾ ಇಲ್ಲೆ ಇರೊದು. * ಊಟ ತಿಂಡಿ ವಿಚಾರಕ್ಕೆ ಬಂದ್ರೆ ನಮ್ ಮಲ್ನಾಡ್ ಅಕ್ಕಿ ರೊಟ್ಟಿ ಕಾಯಿ ಚಟ್ನಿ ತುಂಬ ಫೆಮಸ್. ಹೋಟೆಲ್ ಗಳಂತು ಫೆಮಸ್ಸೊ ಫೆಮಸ್. ಮೀನಾಕ್ಷಿ ಭವನ್ ದೊಸೆ ಮತ್ತು ಪಡ್ದು ಸೂಪರ್ ಆಗಿರತ್ತೆ. ಜನ ಬೆಳಿಗ್ಗೆ ಬೆಳಿಗ್ಗೆ ಬರ್ತಾರೆ ಇಲ್ಲಿಗೆ ತಿಂಡಿ ತಿನ್ನೋಕೆ ಡಿವಿ ಎಸ್ ಪಾನೀಪೂರಿ, ನ್ಯಾಷನಲ್ ಕಾಲೇಜ್ ಪಾನಿಪೂರಿ,ಭಟ್ರು ಪಾನಿಪೂರಿ ತುಂಬ ತುಂಬ ಫೆಮಸ್. * ಎಜುಕೇಶನ್ಅಂತ ಹೆಲೊದಾದ್ರೆ ಇಲ್ಲಿ ಒಳ್ಲೊಳ್ಲೆ ಸ್ಕೂಲ್ಸ್ ಕಾಲೇಜಸ್ ಇದೆ. ಎನ್ ಇ ಎಸ್, ಡಿ ವಿ ಎಸ್, ಸೆಕ್ರೆಡ್ ಹಾರ್ಟ್ ಮತ್ತು ಇನ್ನೂ ಅನೇಕ ಇಸ್ಟಿಟ್ಯೂಶನ್ಸ್ ಇದೆ.ಇಂಜಿನಿಯರಿಂಗ್ ಕಾಲೇಜ್, ಮೆಡಿಕಲ್ ಕಾಲೇಜ್, ಡೆಂಟಲ್ ಕಾಲೇಜ್, ಆಯುರ್ವೇದಿಕ್ ಕಾಲೇಜ್ ಎಲ್ಲಾ ಇದೆ. ಬೇರೆ ಕಡೆಗಳಿಂದ ಓದಲಿಕ್ಕೆ ಅಂತಾನೆ ಇಲ್ಲಿಗೆ ವಿದ್ಯಾರ್ಥಿಗಳು ಬರ್ತಾರೆ. * ಕವಿಗಳು, ಬರಹಗಾರರಿನೇನು ಕಡಿಮೆ ಇಲ್ಲಾ ನಮ್ಮೂರು. ರಾಷ್ಟಕವಿ ಕುವೆಂಪು ಶಿವಮೊಗ್ಗದ ತೀರ್ಥಹಳ್ಲಿಯವರು. ಕೆ ಎಸ್ ಶಿವರುದ್ರಪ್ಪ, ನಾ ಡಿಸೋಜ, ಯು ಆರ್ ಅನಂತಮೂರ್ತಿ, ಪಿ ಲಂಕೇಶ್, ಎಮ್ ಕೆ ಇಂದಿರ, ಕೆ ವಿ ಸುಬ್ಬಣ್ಣ( ಇವರು ನಾಟಕ ತರಬೇತಿ ಸಂಸ್ಥೆ ನೀನಾಸಂ ನ ಸಂಸ್ಥಾಪಕರು. 1972 ರಲ್ಲಿ ಆರಂಭವಾದ ಈ ಸಂಸ್ಥೆಯಲ್ಲಿ ಕನ್ನಡ ಸಿನೆಮಾ ದಲ್ಲಿ ಸೂಪರಸ ಸ್ಟಾರ್ ಗಳಾಗಿರೊ ಬಹಳ ಮಂದಿ ಇಲ್ಲಿ ತರಬೇತಿ ಪಡೆದಿದ್ದಾರೆ) * ಶಿವಮೊಗ್ಗದಲ್ಲಿರೊ ಗೌರ್ಮೆಂಟ್ ಹಾಸ್ಪಿಟಲ್ ಬ್ರಿಟೀಷರ ಕಾಲದ್ದು. ಮೆಗ್ಗಾನ್ ಅನ್ನೊ ಬ್ರಿಟೀಷ್ ಅಧಿಕಾರಿ ಹೆಸರಲ್ಲಿ ಈ ಹಾಸ್ಪಿಟಲ್ ಈಗಲೂ ಇದೆ ಮತ್ತು ಶಿವಮೊಗ್ಗದ,ಸುತ್ತಮುತ್ತಲಿನ ಜನರಿಗೆ ಫ್ರೀ ಟ್ರೀಟ್ಮೆಂಟ್ ಸಿಗ್ತಾ ಇದೆ. ಅಲ್ಲದೆ ಪ್ರೈವೇಟ್ ಹಾಸ್ಪಿಟಲ್ಸ್ ಕೂಡ ಇದೆ. ನಂಜಪ್ಪ ಹಾಸ್ಪಿಟಲ್, ಸಹ್ಯಾದ್ರಿ ನಾರಾಯಣ ಹಾಸ್ಪಿಟಲ್, ಮೆಟ್ರೊ ಹಾಸ್ಪಿಟಲ್ ಹೀಗೆ ಇನ್ನು ಇವೆ. ದುಡ್ದು ಸ್ವಲ್ಪ ಜಾಸ್ತಿ ಇರೊರು ಇಲ್ಲಿಗೆ ಹೊಗ್ತಾರೆ. * ಹಾಗೇನೆ ಶಿವಮೊಗ್ಗ ಅಡಿಕೆ ತುಂಬನೆ ಫೆಮಸ್. ಇಲ್ಲಿ ಅಡಿಕೆ ಬೆಳೆಯೋದು ಜಾಸ್ತಿ. ಹೊರ ದೇಶಗಳಿಗೆ ಎಕ್ಸ್ಪೊರ್ಟ್ ಕೂಡ ಮಾಡ್ತಾರೆ *ಬಸ್ ಮತ್ತು ರೈಲ್ ಫೆಸಿಲಿಟಿ ಬಗ್ಗೆ ತಲೆ ಕೆಡ್ಸ್ಕೊಳೋದೆ ಬೇಡ. ಕರ್ನಾಟಕದಲ್ಲಿ ಶಿವಮೊಗ್ಗದಿಂದ ಬೇರೆ ಊರಿಗೆ ಮತ್ತು ಬೇರೆ ಕಡೆಗಳಿಂದ ಶಿವಮೊಗ್ಗಕ್ಕೆ ಬಸ್ ಫೆಸಿಲಿಟಿ ತುಂಬ ಚೆನ್ನಾಗಿದೆ. ರೈಲ್ ಕೂಡ ಅಷ್ಟೆ ಬೆಂಗಳೂರಿಗೆ ಸುಮಾರು ಟ್ರೈನ್ ಗಳಿವೆ. ಚಿಕ್ಕಮಗಳೂರು, ಮೈಸೂರು ಹಾಗೆ ಶಿವಮೊಗ್ಗ ಮೂಲಕ ಹೋಗೊ ಸುಮಾರು ಟ್ರೈನ್ ಗಳು ಸಿಗತ್ತೆ. … Read moreshivamogga in one page