Achakanya falls Shimoga | Waterfalls Shimoga

Achakanya falls Shimoga ಅಚಕನ್ಯಾ ಜಲಪಾತ  ಅಚಕನ್ಯಾ ಜಲಪಾತ ಒಂದು ಪುಟ್ಟ ಜಲಪಾತ ಮತ್ತು ಸುಂದರವೂ ಹೌದು . ಕಾಡಿನ ಮಧ್ಯೆ ಇರುವ ಈ ಜಲಪಾತವುತೀರ್ಥಹಳ್ಳಿಯಿಂದ (ಹೊಸನಗರಕ್ಕೆ ಹೋಗುವ ದಾರಿಯಲ್ಲಿ ) 10ಕಿ ಮೀ ದೂರದಲ್ಲಿರುವ  ಅರಳುಸುರುಳಿ ಎಂಬ ಹಳ್ಳಿಯಲ್ಲಿದೆ . ಜಲಪಾತದಿಂದ ಬೀಳುವುದು ಶರಾವತಿ ನದಿಯ ನೀರು . ಇದರ ಎತ್ತರ 6.1 ಮೀ , ಪುಟ್ಟ ಜಲಪಾತವಾದರೂ ನೋಡಲು ಬಹಳಸುಂದರ . ಟ್ರೆಕಿಂಗ್ ಮಾಡಲು ಇಷ್ಟಪಡುವವರಿಗೆ , ಅಚಕನ್ಯಾ ಜಲಪಾತವು ಕೂಡ ಒಂದೊಳ್ಳೆ ಟ್ರೆಕಿಂಗ್  ಸ್ಪಾಟ್ .  ಈ ಜಲಪಾತವು ಕಾಡಿನ ಮಧ್ಯದಲ್ಲಿರುವುದರಿಂದ ಹುಡುಕಲು ಸ್ವಲ್ಪ ಕಷ್ಟ . ಸ್ಥಳೀಯರ ಸಹಾಯ ಪಡೆದುಕೊಂಡರೆ ಒಳ್ಳೆಯದು . ಇಲ್ಲಿಯಾವುದೇ ರೀತಿಯ ಸೈನ್ ಬೋರ್ಡ್ ಆಗಲಿ ಇಲ್ಲ . ಸ್ವಲ್ಪ ಕಷ್ಟವಾದರೂ ಇಂತಹ ಸುಂದರವಾದ ಜಲಪಾತವನ್ನು ನೋಡಲುಟ್ರೆಕಿಂಗ್ ಮಾಡಿದರೆ loss ಇಲ್ಲ . ಅದಲ್ಲದೆ ಬೇರೆ ಬೇರೆ ಜಾತಿಯ ಸಸ್ಯ ಮತ್ತು ಮರಗಳನ್ನು ಸಹ ಕಾಣಬಹುದು , ಸಾಕಷ್ಟುವಿಶೇಷವಾದ ಪಕ್ಷಿಗಳು ಸಹ ಕಾಣಸಿಗುತ್ತವೆ . Best time to visit Achakanya falls Shimoga ಅಚಕನ್ಯಾ ಜಲಪಾತಕ್ಕೆ ಬರಲು Best time ಅಂದ್ರೆ ಮಳೆಗಾಲ , ಮಳೆಗಾಲದಲ್ಲಿ ಜಲಪಾತವು ತುಂಬಿ ಹರಿಯುತ್ತದೆ  . July to October ಜಲಪಾತಕ್ಕೆ ಟ್ರೆಕಿಂಗ್ ಮಾಡಲು ಸರಿಯಾದ ಸಮಯ. ಹೇಗೆ ತಲುಪುವುದು : ಈ ಜಲಪಾತಕ್ಕೆ ಶಿವಮೊಗ್ಗದಿಂದ ಹೋಗುವುದು ಸುಲಭ , ಏಕೆಂದರೆ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಬೇಕಾದಷ್ಟು ಬಸ್ ಸೌಲಭ್ಯವಿದೆ.ಅಲ್ಲಿಂದ ಅರಳುಸುರುಳಿ ಹಳ್ಳಿಗೆ ಬಸ್ ಮತ್ತು ಆಟೋಗಳೂ ಸಿಗುತ್ತವೆ . ಅರಳುಸುರುಳಿಯಲ್ಲಿ ಇಳಿದು ಕಾಲ್ನಡಿಗೆಯಲ್ಲಿ ಸಾಗಬೇಕು . ಪ್ರೈವೇಟ್ ವೆಹಿಕಲ್ ನಲ್ಲಿ ಹಿದರೆ ಜಲಪಾತಕ್ಕೆ ಒಂದು ಕಿ ಮೀ ಇರುವವರೆಗೂ ಹೋಗಬಹುದು . ಆ ಕೊನೆಯ ಒಂದು ಕಿಲೋ ಮೀಟರ್ಅನ್ನು ನಡೆದುಕೊಂಡೇ ಹೋಗಬೇಕು .  ರೈಲ್ : ಶಿವಮೊಗ್ಗದ ರೈಲ್ವೆ ಸ್ಟೇಷನ್ ಅಚಕನ್ಯಾ ಜಲಪಾತಕ್ಕೆ ಅತ್ತಿರದ ರೈಲ್ವೆ ಸ್ಟೇಷನ್ , ಬೆಂಗಳೂರಿನಿಂದ ಮತ್ತು ಮೈಸೂರಿನಿಂದಬಹಳಷ್ಟು ಟ್ರೈನ್ಗಳಿವೆ . ಮಂಗಳೂರು ಏರ್ಪೋರ್ಟ್ ಜಲಪಾತಕ್ಕೆ ಹತ್ತಿರದ ಏರ್ಪೋರ್ಟ್ . Achakanya falls Shimoga Achakanya falls, a rarely heard name and hidden beautiful falls in Thirthahalli taluk Shivamogga district. Being known to very fewer people, it has its own … Read moreAchakanya falls Shimoga | Waterfalls Shimoga

ShimogaSiri

K R Puram

Shivamogga

Karnataka

577202

9611875511