Sardar Patel Statue of Unity

ಸರ್ದಾರ್ ವಲ್ಲಭಬಾಯಿ ಪಟೇಲರ ಏಕತೆಯ ಪ್ರತಿಮೆ ಇಂದು  ಲೋಕಾರ್ಪಣೆಗೊಳ್ಳಲಿದೆ. ಪ್ರತಿಮೆಯ ಒಳಗೆ ಏನೇಲ್ಲಾಇದೆ ಗೊತ್ತಾ ? ಇಂದು ಅಂದರೆ ಅಕ್ಟೋಬರ್ 31 2018 ರಂದು  ನಮ್ಮ ದೇಶದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲರ143ನೇ ಜನ್ಮ ದಿನದಂದು ಅವರ ಈ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಮಾಡಲಿದ್ದಾರೆ. ಸರ್ದಾರ್ ಪಟೇಲರ ಪ್ರತಿಮೆಯ ವಿಶೇಷತೆಗಳು ಬಹಳಷ್ಟಿವೆ . ಏನೇನಿದೆ ಕೆಳಗೆ ಓದಿ . ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆಯು ಜಗತ್ತಿನಲ್ಲೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇರುವುದು ಎಲ್ಲಿ ? ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆ ಇರುವುದು ಗುಜರಾತ್ ನಲ್ಲಿ . ಈ ಪ್ರತಿಮೆಯು ರಾಜಪಿಪ್ಲ ಬಳಿ ಇರುವ ಸಾಧು ಬೆಟ್ ಎಂಬ ಜಾಗದಲ್ಲಿ ನರ್ಮದಾ ಡ್ಯಾಮ್ ಗೆ ಮುಖ ಮಾಡಿಕೊಂಡಿದೆ. ಪ್ರತಿಮೆಯನ್ನು ಕಟ್ಟಲು ಅದರಸುತ್ತಮುತ್ತಲಿನ ಜಾಗ ಸೇರಿ 20000 sq m ಭೂಮಿಯನ್ನು ಬಳಸಿಕೊಂಡಿದ್ದಾರೆ . ಈ ಪ್ರತಿಮೆಯ ಸುತ್ತ 12000 sq kmಅಳತೆಯ ಒಂದು ಕೆರೆಯನ್ನು ಸಹ ಕಟ್ಟಲಾಗಿದೆ . ಇದರ ಎತ್ತರ 182ಮೀ ಅಂದರೆ 597 ಅಡಿ ಯಾವಾಗ ಶುರು ಮಾಡಿದ್ದು ? ಭಾರತದಲ್ಲೇ ದೊಡ್ಡ ನಿರ್ಮಾಣ ಸಂಸ್ಥೆಯಾದ Larsen n tubro companyಯು ಪ್ರತಿಮೆಯನ್ನು ನಿರ್ಮಿಸುವ ಹಕ್ಕನ್ನುಪಡೆದುಕೊಂಡಿತು.ಅ2ಕ್ಟೋಬರ್ 31 2013 ರಂದು ಪ್ರತಿಮೆಯ ನಿರ್ಮಾಣ ಕಾರ್ಯ ಆರಂಭವಾಯಿತು . ನಮ್ಮ ಈಗಿನಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯ ಮಂತ್ರಿಯಾಗಿದ್ದಾಗ ಮಂಜೂರಾಗಿದ್ದ ಈ ಪ್ರತಿಮೆಯನ್ನುಪೂರ್ಣಗೊಳಿಸಲು 5 ವರ್ಷಗಳ ಗಡುವನ್ನು ನೀಡಿದ್ದರು . ಅದೇ ಸಮಯದಲ್ಲಿ ಅಕ್ಟೋಬರ್ 2018 ರ ಮಧ್ಯದಲ್ಲೇಪ್ರತಿಮೆಯ ನಿರ್ಮಾಣ ಪೂರ್ಣಗೊಂಡಿದೆ. ತಗುಲಿದ ವೆಚ್ಚ : ಸರ್ದಾರ್ ವಲ್ಲಭಬಾಯಿ ಪ್ರತಿಮೆಯನ್ನು ನಿರ್ಮಿಸಲು ಭಾರತ ಸರ್ಕಾರವು ಅಂದಾಜು ಮಡಿದ ವೆಚ್ಚ 3001 ಕೋಟಿರೂಪಾಯಿಗಳು. ಆದರೆ L & T ಕಂಪನಿಯು ಅಕ್ಟೋಬರ್ 31 2013 ರ ಬಿಡ್ ನಲ್ಲಿ 2989ಕೋಟಿ ರುಪಾಯಿಗೆಕಾಂಟ್ರಾಕ್ಟ್ ಅನ್ನು ಪಡೆದುಕೊಂಡಿತು ಮತ್ತು ಪ್ರತಿಮೆಯ ನಿರ್ಮಾಣ ಕಾರ್ಯ ಆರಂಭವಾಯಿತು ಪ್ರತಿಮೆಯ ನಿರ್ಮಾಣ ಮಾಡಲು ಏನನ್ನು ಬಳಸಿದ್ದಾರೆ ಗೊತ್ತಾ ? ತಿಳಿದರೆ ಆಶ್ಚರ್ಯ ಪಡುತ್ತೀರಿ ಪ್ರತಿಮೆಯನ್ನು ತಯಾರಿಸಲು ಬೇಕಾದ ಕಬ್ಬಿಣವನ್ನು ಭಾರತದಾದ್ಯಂತ ರೈತರು ಉಪಯೋಗಿಸಿದ ಕಬ್ಬಿಣದಸಲಕರಣೆಗಳನ್ನು ಸಂಗ್ರಹಿಸಿ ಪ್ರತಿಮೆಯನ್ನು ತಯಾರು ಮಾಡಬೇಕು ಎಂಬುದು ಪ್ಲಾನ್ ಆಗಿತ್ತು. ಭಾರತದ 5ಲಕ್ಷ ಜನ ರೈತರು ಅವರು ಉಪಯೋಗಿಸಿದ ಕಬ್ಬಿಣದ ವಸ್ತುಗಳನ್ನು ದಾನ ಮಾಡುತ್ತಾರೆ ಎಂದುಊಹಿಸಲಾಗಿತ್ತು ಮತ್ತು 5000 ಟನ್ ಗಳಷ್ಟು ಕಬ್ಬಿಣವನ್ನು ಸಂಗ್ರಹಿಸಲಾಯಿತು.   Also read https://shimogasiri.com/varadahalli-shridhara-swamy-ashrama-sagara/ ಆದರೆ ನಂತರದಲ್ಲಿ ಅದನ್ನು ಪ್ರತಿಮೆ ಮಾಡಲು ಉಪಯೋಗಿಸದೆ ಪ್ರಾಜೆಕ್ಟ್ ನ ಬೇರೆ ಬೇರೆ ಕೆಲಸಗಳಿಗೆಬಳಸಿಕೊಳ್ಳಲಾಯಿತು. ಸರ್ದಾರ್ ವಲ್ಲಭಬಾಯಿ ಪಟೇಲರ ಏಕತೆಯ ಪ್ರತಿಮೆ ಬೇಕು ಎಂದು ಪಿಟಿಷನ್ ಗೆ ಸಹಿ ಮಾಡಿದವರು ಎಷ್ಟು ಜನಗೊತ್ತಾ ? ಬರೋಬ್ಬರಿ 20ದಶಲಕ್ಷ ಜನ. ಹೌದು ಪ್ರಪಂಚದಲ್ಲೇ ಹೆಚ್ಚು ಜನರು ಸಹಿ ಮಾಡಿದ ಪಿಟಿಷನ್ ಇದು. ಪ್ರತಿಮೆಯಲ್ಲಿ ಏನೇನಿದೆ? ಪ್ರತಿಮೆಯ ಹೊರ   ಭಾಗವನ್ನು ತಾಮ್ರದ ಕೋಟಿಂಗ್ ನಿಂದ ಮಾಡಲಾಗಿದೆ. ಪ್ರತಿಮೆಯ ಒಳಗೆ ಲಿಫ್ಟ್ ಸೌಲಭ್ಯ ಸಹಇದ್ದು, 3ಲೆವೆಲ್ ಗಳಿವೆ. ಭಾರತ ದೇಶಕ್ಕೆ ಪಟೇಲರ ಕೊಡುಗೆ ಮತ್ತು ಅವರ ಬಗೆಗಿನ ಮ್ಯೂಸಿಯಂ ಮತ್ತುಮೆಮೋರಿಯಲ್ ಗಾರ್ಡನ್ ಇದೆ. 500 ಅಡಿ ಎತ್ತರದಲ್ಲಿ observation desk ಅನ್ನು ಮಾಡಲಾಗಿದ್ದು ಸುಮಾರು 200 ಜನರು ನಿಂತುನೋಡಬಹುದಾಗಿದೆ ಮತ್ತು ಅಲ್ಲಿ ನಿಂತು ನೋಡಿದರೆ ಸಾತ್ಪುರ ಮತ್ತು ವಿಂಧ್ಯಾಚಲ ಪರ್ವತ ಶ್ರೇಣಿ ಮತ್ತಿ 212ಕಿ ಮೀಉದ್ದವಿರುವ ಸರ್ದಾರ್ ಸರೋವರ ರೆಸೆರ್ವಾಯರ್ ಮತ್ತು 12ಕಿ ಮೀ ಉದ್ದವಿರುವ ಗುರುಡೇಶ್ವರ ರೆಸೆರ್ವಾಯರ್ ನಮನಮೋಹಕ ದೃಶ್ಯವನ್ನು ನೋಡಬಹುದು. ಪ್ರತಿಮೆಯನ್ನು ತಲುಪಲು 5ಕಿ ಮೀ ಬೋಟ್ ನಲ್ಲಿ ಹೋಗಬೇಕು. ಅದಲ್ಲದೆ ಫುಡ್ ಸ್ಟಾಲ್ ಗಳು, ಗಿಫ್ಟ್ ಶಾಪ್ ಗಳುಮತ್ತು ಇನ್ನು ಹಲವು ರಿಟೇಲ್ ಶಾಪ್ ಗಳು ಇಲ್ಲಿವೆ . ದುಬೈ ನ ಬುರ್ಜ್ ಖಲೀಫಾವನ್ನು ನಿರ್ವಹಿಸಿದ Meinhardt group ಈ ಸರ್ದಾರ್ ಪ್ರತಿಮೆಯನ್ನು superviseಮಾಡುತ್ತಿದೆ. ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆಯನ್ನು ಡಿಸೈನ್ ಮಾಡಿದವರು ಯಾರು ಗೊತ್ತಾ? ರಾಮ್ ವಿ ಸುತಾರ್ – ಇವರು ಮಹಾರಾಷ್ಟ್ರದ ಧೂಳಿಯ ಜಿಲ್ಲ್ರಯ ಗೊಂಡೂರಿನಲ್ಲಿ 19 ಫೆ. 1925 ರಲ್ಲಿ ಜನಿಸಿದರು.ಇವರ ಶಿಲ್ಪ ರಚನೆಗೆ  1999ರಲ್ಲಿ ಪದ್ಮಶ್ರೀ , 2016 ರಲ್ಲಿ ಪದ್ಮವಿಭೂಷಣ ಮತ್ತು 2018 ಅಕ್ಟೋಬರ್ ನಲ್ಲಿ ಟಾಗೋರ್ಪ್ರಶಸ್ತಿ ದೊರಕಿದೆ .   Sardar  Vallabhabayi Patel- Statue of … Read moreSardar Patel Statue of Unity

ShimogaSiri

K R Puram

Shivamogga

Karnataka

577202

9611875511