Best coffee Shop in Shimoga
Best Coffee Shop in Shimoga ಶರಾವತಿ ಕಾಫಿ ವರ್ಕ್ಸ್ , ಶಿವಮೊಗ್ಗ ಮಲೆನಾಡಿನ ಅಡಕೆ ಫೇಮಸ್ , ಮಲೆನಾಡಿನಲ್ಲಿ ಕಾಫಿ ಕೂಡ ಫೇಮಸ್ . ಜಡಿ ಮಳೆಗೆ ಬಿಸಿ ಬಿಸಿ ಕಾಫಿ ಎಷ್ಟು ಹಿತ ಅಲ್ವ.ಯಾರದ್ದಾದ್ರು ಮನೆಗ್ ಹೋದ್ರೆ ಸಾಕು ಅವ್ರ್ ಬಾಯಿಂದ ಬರೋ ಮೊದಲನೇ ಮಾತು ಕಾಫಿ ಕುಡಿತೀರಾ ??? ಅಲ್ವಾ ?? ಕುದಿಯೋ ನೀರಿಗೆ ಕಾಫಿ ಫುಡಿ ಹಾಕಿ ಡಿಕಾಕ್ಷನ್ ಮಾಡಿ ಹಾಲು ಸಕ್ಕರೆ ಹಾಕಿ ಕಾಫಿ ಕುಡಿದ್ರೆ ತಲೇಲಿರೋ ಟೆನ್ಶನ್ ಎಲ್ಲಾ ಹಾಗೆಮಾಯಾ. ಇವಾಗಿನ ಕಾಫಿಡೇ ಕಾಫೀಲಿ ಏನ್ರಿ ಇದೆ . ಕೋಲ್ಡ್ ಕಾಫಿ ಅಂತೆ ಕ್ಯಾಪುಚಿನೊ ಅಂತೇ . ಅದು ಒಂದು ಕಾಫಿನ . ನಿಜವಾದ ಕಾಫಿಮಜಾ ಇರೋದು ಫಿಲ್ಟರ್ ಕಾಫಿ ನಲ್ಲಿ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಇರುವ ವಿಶೇಷತೆಗಳು ಹಲವಾರು. ಅದರಲ್ಲೇ ಮಲೆನಾಡಿನ ಕಾಫಿ ಕೂಡ ಒಂದುವಿಶೇಷನೇ. ಶರಾವತಿಕಾಫಿ ವರ್ಕ್ಸ್ ಇದು ಇರುವುದು ಶಿವಮೊಗ್ಗದ ಕೆ ಆರ್ ಪುರಂ ನಲ್ಲಿ . ಅಮೀರ್ ಅಹ್ಮದ್ ಸರ್ಕಲ್ ಇಂದ ಒಂದು ಕಿ ಮೀ ಒಂದೇರೋಡ್. ಶರಾವತಿ ಕಾಫಿ ವರ್ಕ್ಸ್ ಶಿವಮೊಗ್ಗದಲ್ಲಿ ವರ್ಲ್ಡ್ ಫೇಮಸ್. 1972ರಲ್ಲಿ ಶುರುವಾದ ಶರಾವತಿ ಕಾಫಿ ವರ್ಕ್ಸ್ , 46ವರ್ಷಗಳಿಂದಗ್ರಾಹಕರಿಗೆ ಉತ್ತಮವಾದ ಕಾಫಿ ಪುಡಿಯನ್ನು ಮಾರಾಟ ಮಾಡುತ್ತಿದೆ. ಪಿ ಎಸ್ ಚಿದಂಬರ್ ರವರು ಇದರ ಮಾಲೀಕರು. ಇವರು46ವರ್ಷಗಳಿಂದ ಈ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. 46ವರ್ಷಗಳ ಕಾಲ ಒಂದೇ ಬಿಸಿನೆಸ್ ಅನ್ನು ನಡೆಸಿಕೊಂಡು ಬರುವುದು ಸುಲಭವಲ್ಲ. Quality ಇಲ್ಲ ಅಂದ್ರೆ ಜನ ಬರೋದಿಲ್ಲ.ಆದರೆ ಅಷ್ಟು ವರ್ಷಗಳಿಂದ ಈ ಕಾಫಿ ವರ್ಕ್ಸ್ ಇದೆ ಅಂದ್ರೆ ನೀವೇ ಯೋಚ್ನೆ ಮಾಡಿ ಇಲ್ಲಿನ ಕಾಫಿ ಪುಡಿ ಎಷ್ಟು ಚೆನ್ನಾಗಿರುತ್ತದೆ ಎಂದು. ಬೇರೆ ಬೇರೆ ಜಾತಿಯ ಕಾಫಿ ಬೀಜಗಳನ್ನು ಹದವಾಗಿ ಹುರಿದು , ಎಷ್ಟು ಬೇಕೋ ಅಷ್ಟು ಚಿಕೋರಿಯನ್ನು ಮಿಕ್ಸ್ ಮಾಡಿ , ಕಾಫಿಪುಡಿಯನ್ನು ತಯಾರಿಸುತ್ತಾರೆ. ಇಲ್ಲಿ ಸಿಗುವ ಕಾಫಿ ಪುಡಿ ಯಾವಾಗಲು ಫ್ರೆಶ್ . ನಿಮಗೆ ಬೇಕು ಅಂದ್ರೆ ತಕ್ಷಣ ಅಲ್ಲೇ ತಯಾರಿಸಿ ಕೊಡುತ್ತಾರೆ. ಮಾರ್ಕೆಟ್ ನಲ್ಲಿ ಬೇರೆ ಬೇರೆ ಕಂಪನಿಯ ಕಾಫಿ ಪುಡಿ ಅಂತೂ ಸಿಗುತ್ತೆ ಆದ್ರೆ ಅದು ಯಾವುದು ಇಷ್ಟು ಫ್ರೆಶ್ ಆಗಿರಲ್ಲ. ಈ ರೋಡ್ ನಲ್ಲಿನೀವು ಪಾಸ್ ಆದ್ರೆ ಸಾಕು ಕಾಫಿಯ ಘಮ ನಿಮ್ಮ ಮೂಗಿಗೆ ಬರುತ್ತೆ. ನೀವು ಶಿವಮೊಗ್ಗದಲ್ಲೇ ಇರೋರಾದ್ರೆ ಇಲ್ಲಿನ ಕಾಫಿ ಕುಡಿದು ನೋಡಿ , ಮತ್ತೆ ಇಲ್ಲಿಗೆ ಬಂದು ಕಾಫಿ ಪುಡಿ ತಗೋತೀರಾ ಅದಂತೂguarantee. ಮಾರ್ಕೆಟ್ ನಲ್ಲಿ ಸಿಗೋ ಬೇರೆ ಕಾಫಿ ಪುಡಿಗಳಿಗೆ ಹೋಲಿಸಿದರೆ ಇಲ್ಲಿ rate ಕೂಡ reasonable ಆಗಿದೆ. ಮದುವೆ ಮತ್ತು ಶುಭಸಮಾರಂಭಗಳಿಗೂ ಸಹ ಇಲ್ಲಿ ಕಾಫಿ ಪುಡಿನ ಆರ್ಡರ್ ಕೊಟ್ಟು ಮಾಡಿಸಿಕೊಂಡು ಹೋಗುತ್ತಾರೆ. ಜನ ಬೇರೆ ಬೇರೆ ಊರಿನಿಂದ ಬಂದು ಇದೇ ಕಾಫಿ ಪುಡಿ ಬೇಕು ಅಂತ ಖರೀದಿ ಮಾಡ್ತಾರೆ . ಇಲ್ಲಿ ಕಾಫಿ ಪುಡಿ ಫಾರಿನ್ ನಲ್ಲಿ ಕೂಡಫೇಮಸ್. ಬೇರೆ ದೇಶಗಳಲ್ಲಿರುವ ನಮ್ಮ ಶಿವಮೊಗ್ಗದ ಜನ ಇಲ್ಲಿ ಬಂದಾಗ ಕೆಜಿ ಗಟ್ಟಲೆ ಕಾಫಿ ಪುಡಿ ಖರೀದಿ ಮಾಡ್ತಾರೆ. ಬೇರೆದೇಶಕ್ಕೆ ಹೋದರೇನು ನಮ್ಮ ರುಚಿನ ನಾವು ಬಿಡೋಲ್ಲ ಅಲ್ವ ಹಾಗೇನೆ. ಕಾಫಿ ಕುಡಿಯೋದೇ ತಲೇಲಿರೋ ಟೆನ್ಶನ್ ಹೋಗಿ ಮೈಂಡ್ ಫ್ರೆಶ್ ಆಗ್ಲಿ ಅಂತ . ಹಾಗಾದರೆ ಒಳ್ಳೆ ಕಾಫಿನೇ ಕುಡೀರಿ , ಇಲ್ಲಿಗೆ ಒಮ್ಮೆಭೇಟಿ ನೀಡಿ. Instant ಕಾಫೀ ಅಂತೆಲ್ಲ ಕುಡಿಯೋಕೆ ಹೋಗ್ಬೇಡಿ. ಅದಕ್ಕಿಂತ ವಿಷ ನಮ್ಮ ಆರೋಗ್ಯಕ್ಕೆ ಇನ್ನೊಂದಿಲ್ಲ. ಇದು ಸಲಹೆ ಅಷ್ಟೇ. ವಿಳಾಸ : ಶರಾವತಿ ಕಾಫಿ ವರ್ಕ್ಸ್ ವಂದನಾ ಟಾಕಿಸ್ ಎದುರು ಕೆ ಆರ್ ಪುರಂ ಶಿವಮೊಗ್ಗ ಫೋ: 9980450091