Shivamogga marikamba jatre

ಪ್ರತೀ 2 ವರ್ಷಕ್ಕೊಮ್ಮೆ ನಡೆಯುವ ಕೋಟೆ ಶ್ರೀ ಮಾರಿಕಾಂಬ ಜಾತ್ರೆಯು ಈ ವರ್ಷ ಫೆ20 ರಿಂದ 24ರ ವರೆಗೆ , 5 ದಿನ ನಡೆಯಲಿದೆ. ಫೆ 20ರ ಬೆಳಿಗ್ಗೆ 5 ಗಂಟೆಗೆ ಬಿಬಿ ರಸ್ತೆಯಲ್ಲಿನ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಿ, ಆ ಸಮಾಜದ ಮುತ್ತೈದೆಯರು ಗಾಂಧಿಬಜಾರ್ ನಲ್ಲಿರುವ ಮಾರಿಕಾಂಬೆಯ ತವರು ಮನೆಯಲ್ಲಿ ಉಡಿ ತುಂಬಿ ಪೂಜೆ ಸಲ್ಲಿಸುತ್ತಾರ. ಅಂದು ರಾತ್ರಿ 10 ಗಂಟೆಯವರೆಗೂ ಸಾವಿರಾರು ಮುತ್ತೈದೆಯರು ಮಡಿಲಕ್ಕಿ ನೀಡಿ ಉಡಿ ತುಂಬುವರು. ನಂತರ ಮಾರಿಕಾಂಬೆಯನ್ನು ರಥದಲ್ಲಿ ಕೂರಿಸಿ ಗದ್ದುಗೆಗೆ ತರಲಾಗುತ್ತದೆ. ತವರು ಮನೆಯಿಂದ ಗಂಡನ ಮನೆಗೆ ಬರುವಾಗ ತಾಯಿ ಮಾರಿಕಾಂಬೆಯ ಮುಖದಲ್ಲಿ ಬದಲಾವಣೆಯಾಗುತ್ತದೆ ಎಂದು ಜನರ ನಂಬಿಕೆ. ತವರು ಮನೆಯಲ್ಲಿದ್ದಾಗ ಶಾಂತ ರೀತಿಯಲ್ಲಿರು ಮಾರಿಕಾಂಬೆಯು ಗಂಡನ ಮನೆಗೆ ತೆರಳಬೇಕಾದ ಸಮಯದಲ್ಲಿ ಉಗ್ರ ರೂಪವನ್ನು ತಾಳುತ್ತಾಳೆ ಎಂದು ನಂಬಿಕೆ.

ಶೂದ್ರ ಜನಾಂದವನು ಮೊಸದಿಂದ ಬ್ರಾಹ್ಮಣಳಾದ ಮಾರಿಕಾಂಬೆಯನ್ನು ಮದುವೆಯಾಗುತ್ತಾನೆ. ವಿಷಯ ತಿಳಿದ ನಂತರದಲ್ಲಿ ಕೋಪಗೊಂಡ ಮಾರಿಕಾಂಬೆಯು ಕಾಳಿ ಅವತಾರವನ್ನು ತಾಳಿ ತನ್ನ ಗಂಡನನ್ನೇ ಸಂಹರಿಸತ್ತಾಳೆ. ತನ್ನ ಗಂಡ ತನಗೆ ಮೊಸ ಮಾಡಿದ ಎಂದು ಕೋಪಗೊಂಡ ಮಾರಿಕಾಂಬೆಯು ತವರು ಮನೆಯಲ್ಲಿದ್ದಾಗ ಶಾಂತರೂಪಿಯಾಗಿಯೂ ಗಂಡನ ಮನೆಗೆ ಬರುವಾಗ ಉಗ್ರಳಾಗಿಯೂ ಬದಲಾಗುತ್ತಾಳೆ. ಈ ಕಥೆಯ ಆಧಾರದ ಮೇಲೆ ಮಾರಮ್ಮನ ಜಾತ್ರೆಯ ದಿನದಂದು ಕೋಣ ಬಲಿ ಕೊಡಲಾಗುತ್ತಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ಕೋಣ ಬಲಿಯನ್ನು ನಿಲ್ಲಿಸಲಾಗಿದೆ, ಬದಲಿಗೆ ಕುರಿ ಅಥವಾ ಮೇಕೆಯನ್ನು ಬಲಿ ಕೊಡಲಾಗುತ್ತದೆ

Leave a Comment

one × 5 =

ShimogaSiri

K R Puram

Shivamogga

Karnataka

577202

9611875511