Malgudi Days Shankar nag’s Dream came true in Shivamogga

Malgudi Days Shankar nag’s Dream came true in Shimoga

Malgudi days Shankar Nag's dream
Malgudi days Shankar Nag’s dream

ಶಂಕರನಾಗ್ ಕನಸು- ಮಾಲ್ಗುಡಿ ಡೇಸ್  ನನಸಾಗಿದ್ದು ಮಲೆನಾಡಿನಲ್ಲಿ. ನಮ್ಮ ಶಿವಮೊಗ್ಗ ದಲ್ಲಿ❤.ಮಾಲ್ಗುಡಿ ಅಂದ್ರೆ ನೆನಪಾಗೋದು ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿ ಬಂದ ಧಾರವಾಹಿ “ಮಾಲ್ಗುಡಿ ಡೇಸ್”. 1986 ರಲ್ಲಿ ದೂರದರ್ಶನ ಚಾನಲ್ ನಲ್ಲಿ ಪ್ರಸಾರವಾಗುತ್ತಿತ್ತು. ನಂತರದಲ್ಲಿ ಪ್ರಸಿದ್ಧ ಸೋನಿ ಚಾನಲ್ ನಲ್ಲೂ ಪ್ರಸಾರವಾಗಿತ್ತು. ಶಂಕರ್ ನಾಗ್ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ, ಅಂಥ ವ್ಯಕ್ತಿತ್ವ ಅವರದ್ದು. R K Narayan ಅವರು ಬರೆದ ಮಾಲ್ಗುಡಿ ಡೇಸ್ ಎಂಬ ಪುಸ್ತಕದ ಅನುಸಾರ ಮಾಡಿದ್ದ ಧಾರವಾಹಿ ಇದು. ಈ 90’s ಕಿಡ್ಸ್ ಅಂತಾರಲ, ಅವರಿಗೆಲ್ಲ ಈ ಮಾಲ್ಗುಡಿಡೇಸ್ ಗೊತ್ತು.

ಮಾಲ್ಗುಡಿ  ಮನೆ:

Malgudi house
Malgudi house

     ಈ ಧಾರವಾಹಿಯನ್ನು ಶೂಟ್ ಮಾಡಿರೋದು ಶಿವಮೊಗ್ಗ ಜಿಲ್ಲೆಯ, ಕರ್ನಾಟಕದ ಚಿರಾಪುಂಜಿ ಎಂದು ಪ್ರಸಿದ್ಧವಾಗಿರುವ ಆಗುಂಬೆಯಲ್ಲಿ. ತೀರ್ಥಹಳ್ಳಿಯಿಂದ ಆಗುಂಬೆಗೆ ಹೋಗೋ ರೋಡ್ ನಲ್ಲಿ ಈ ಮಾಲ್ಗುಡಿ ಡೇಸ್ ಮನೆ ಇರೋದು. ಮಾಲ್ಗುಡಿ ಡೇಸ್ ಪ್ರಾಜೆಕ್ಟ್ ನ ಮಾಡಬೇಕು ಎಂದು ಕೊಂಡಾಗ ಎಲ್ಲಿ ಶೂಟಿಂಗ್ ಮಾಡೋದು ಅಂತ ಎಲ್ರೂ ಯೋಚನೆ ಮಾಡ್ತಾ ಇದ್ರಂತೆ, ಆಗ ಶಂಕರನಾಗ್ ರವರು ಹೇಳಿದ್ರಂತೆ ತೀರ್ಥಹಳ್ಳಿ ಲೊಕೇಶನ್ ತುಂಬ ಚೆನ್ನಾಗಿದೆ. ಮಲೆನಾಡು, ಹಳ್ಳಿ ವಾತಾವರಣ, untouched by commercialization ಅಂತಾರಲ ಹಾಗೆ, ಎಲ್ಲಕಡೆ ಹಸಿರು, ಮಳೆನಾಡು, ಪ್ರಕ್ರುತಿ ಸೌಂದರ್ಯ ತುಂಬ ಚೆನ್ನಾಗಿದೆ ಅಲ್ಲೇ ಶೂಟ್ ಮಾಡೋಣ ಅಂದ್ರಂತೆ. ಆವಾಗ ಸಿಕ್ಕಿದ್ದೇ ಈ ಮಾಲ್ಗುಡಿ ಮನೆ.

Malgudi house
Malgudi house

ಕಸ್ತೂರಿ ಅಕ್ಕ ಈ ಮನೆಯ ಒನರ್, 1986 ರಲ್ಲಿ ಶೂಟಿಂಗ್ ಮಾಡಲಿಕ್ಕೆ ಅಂತ ಈ ಮನೆಯನ್ನ ಬಿಟ್ಟು ಕೊಟ್ಟಿದ್ದರು. ಈ ಮನೆ ಸುಮಾರು 100 ವರ್ಷ ಹಳೆಯದು. ವಿಶಾಲವಾದ ತೊಟ್ಟಿ ಮನೆ, ದೊಡ್ಡಮನೆ ಅಂತಾನೆ ಫೇಮಸ್. ದೊಡ್ಡಮನೆ ಕಸ್ತೂರಿ ಅಕ್ಕ ಅಂತಾನೆ ಈ ಮನೆ ಒನರ್ ನ ಕರೀತಾರೆ.

Also read Agumbe https://shimogasiri.com/9-interesting-facts-about-agumbe/

ಆಗುಂಬೆ ಶಿವಮೊಗ್ಗದಿಂದ 97 ಕಿ ಮೀ ದೂರದಲ್ಲಿದೆ. ಹಳ್ಳಿಯಾದ್ದರಿಂದ ಮೊದಲೆಲ್ಲಾ lodging ವ್ಯವಸ್ಥೆ ಇರಿತ್ತಿರಲಿಲ್ಲ. ಪ್ರವಾಸಕ್ಕೆ ಅಂತ ಬರೋರಿಗೆ ಈ ದೊಡ್ಡಮನೆಯೇ ಆಧಾರ, ಕಸ್ತೂರಿ ಅಕ್ಕಾನೇ ಇಲ್ಲಿನ ಕುಕ್. ಇವರು ಮಾಡೋ ಪಕ್ಕಾ ಮಲ್ನಾಡ್ ಅಡಿಗೆ ತುಂಬ ರುಚಿಯಾಗಿರುತ್ತದೆ. ಹಾಗೇನೆ ನಿಮಗೆ ಇಲ್ಲಿ ಇಷ್ಟೇ ದುಡ್ಡು ಕೊಡಿ ಅಂತ ಯಾರೂ ಕೇಳುವುದಿಲ್ಲ. ನಿಮ್ಮಿಂದ ಎಷ್ಟು ಸಾಧ್ಯಾನೋ ಅಷ್ಟು ಕೊಟ್ಟುಗೋಗಿ ಅಂತಾರೆ. ಅವರು ಮಾಡುತ್ತಿರುವ ಈ ಸೇವೆಯೊಂದಾಗಿ ಇಲ್ಲಿಗೆ ಈಗಲೂ ಜನ ಬರ್ತಾರೆ.ಇದು ತುಂಬ ಹಳೆಯ ಮನೆ ಆಗಿರೋದ್ರಿಂದ ಕೆಲವು ರೂಂಗಳು ಹಾಳಾಗಿವೆ. ಆದರೆ ಕಸ್ತೂರಿ ಅಕ್ಕ ಇರೋದ್ರಲ್ಲೇ ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

Malgudi Days Shankar nag's Dream came true in Shivamogga
Malgudi Days Shankar nag’s Dream came true in Shivamogga

ನಮ್ಮ ಶಿವಮೊಗ್ಗ ಎಷ್ಟು ಚಂದ ಅಲ್ವಾ. ಅಂಥಾ ದೊಡ್ಡ ಡೈರೆಕ್ಟರ್ ಶಂಕರನಾಗ್ ಕೂಡ ನಮ್ಮ ಊರನ್ನ ನೋಡಿ ಇಷ್ಟ ಪಟ್ಟಿದ್ದರು. ಅವರು ಇದ್ದಿದ್ದರೆ ಇಷ್ಟು ಹೊತ್ತಿಗೆ ಅದೆಷ್ಟು ಸಿನೆಮಾ ಶೂಟಿಂಗ್ ನಮ್ಮ ಶಿವಮೊಗ್ಗದಲ್ಲಿ ಆಗುತ್ತಿತ್ತೋ, ಅದೆಷ್ಟು ಪ್ರತಿಭೆಗಳು ಆಚೆ ಬಾರ್ತಾ ಇದ್ವೋ.?? ಮಾಲ್ಗುಡಿ ಡೇಸ್ ಅವರ ಕನಸಾಗಿತ್ತು. ಅದು ನನಸಾಯ್ತು ಕೂಡ. ಆದರೆ ಅವರ ಕನಸುಗಳು ಇನ್ನು ಬಹಳ ಇತ್ತು, ನನಸು ಮಾಡುವಷ್ಟರಲ್ಲಿ ಹೊರಟೇ ಬಿಟ್ಟರು. ಅದೇನು ಅಷ್ಟು urgent ಇತ್ತೋ ಏನೋ?

We miss you “Shankar Nag”.

Malgudi days- Dream:

Malgudi days- Dream of the great director came true in Namma Shivamogga. Ever heard of the name “Malgudi days”; Yes that’s Shankar Nag’s Dream “Malgudi Days”. Malgudi Days was being broadcasted in Doordharshan in 1986. Later it was broadcasted in Sony Entertainment television. There are not even a single kannadiga who doesnt like Shankar nag, such a great, inspiring, humble yet simple human he was. “Malgudi days” is the fictitious story of R K Narayan.  R K Narayan is an Indian writer known for his works set in the fictional South town of Malgudi. “Malgudi days” serial is based on his story. 

Malgudi days was well known by these so called 80’s & 90’s kids. This famous serial was shot in Malnad region i.e. Agumbe of Thirthahalli taluk, Shivamogga district. When Shankar Nag thought of doing the project, shooting spot was the main thing which makes huge difference in a movie or a serial, he thought of shooting in Thirthahalli, Malnad ergion, green village, a place untouched by commercialization, greenary around, nature’s beauty, cool weather in any season of the year. The main attraction of Malgudi days is the big house, Malgudi house, the house where Malgudi days shot.

Malgudi House Agumbe:

Malgudi house is in the route to Agumbe from Thirthahalli . Kasturi akka is the owner of the house. The house is around 100years old. This was the big house during that period in and around the village. Local people call it as “Dodmane” Kasturi akka is called Dodmane Kasturi akka.


Agumbe is 93kms from Shivamogga. Now one can reach here by bus easily. There are many private buses to ply this route. During old times, there were no facility of hotel & lodging for tourists who were visiting Agumbe. (Agumbe is called Karnataka’s chirapunji, which recieves the highest rainfall in Karnataka).

During that time, Kasturi akka, offered her house for the tourists to lodge and Kasturi akka is the cook here. She prepares tasty Malnad food. But she doesn’t demand any money for her services. She just accepts how much ever is given. As this is 100 years old house, now it is not as good as it was before, but Kasturi akka is maintaining it in a good way in her limits.

See, how beautiful our Shivamogga is, even the great director/actor ShankarNag liked.  Malgudi days was his dream, he fulfilled it in Agumbe. If he was alive, he would have shot many films though. Such a creative man, beyond making only movies, he was working towards a better Karnataka  by taking initiatives in social activities. Its been decades we lost him. 

We miss you ShankarNag

Leave a Comment

two × 4 =

ShimogaSiri

K R Puram

Shivamogga

Karnataka

577202

9611875511