koodali Tunga-Bhadra Sangama Shivamogga

Koodali Tunga-Bhadra Sangama Shimoga:

ಕೂಡಲಿ:

ಕೂಡಲಿ ಶಿವಮೊಗ್ಗದಲ್ಲಿರುವ ಒಂದು ಚಿಕ್ಕ ಹಳ್ಳಿ . ಚಿಕ್ಕ ಹಳ್ಳಿಯಾದರೂ ಇದರ ಕೀರ್ತಿ ದೊಡ್ಡದು. ಕಾರಣ ಇಲ್ಲಿ ಸಂಗಮವಾಗುವತುಂಗಾ ಮತ್ತು ಭದ್ರ ನದಿಗಳು. ಹೌದು ತುಂಗಾ ಮತ್ತು ಭದ್ರ ನದಿಗಳ ಸಂಗಮವಾಗುವುದು ಇದೆ ಸ್ಥಳದಲ್ಲಿ. ಆದ್ದರಿಂದಲೇ ಕೂಡಲಿಎಂದು ಹೆಸರು ಬಂದಿದೆ. ತುಂಗಾ ಭದ್ರ ನದಿಗಳು ಪವಿತ್ರ ನದಿಗಳು ಎಂದೇ ಹೆಸರು ಪಡೆದಿವೆ. ಈ ಎರಡು ನದಿಗಳು ಸಂಗಮವಾಗುವನೀರಿನಲ್ಲಿ ಸ್ನಾನ ಮಾಡಿದರೆ ಮಾಡಿದ ಪಾಪ ಕರ್ಮಗಳು ತೊಳೆದು ಹೋಗುತ್ತದೆ ಎಂದು ಇಲ್ಲಿನ ಸ್ಥಳೀಯರ ನಂಬಿಕೆ.


Also visit https://shimogasiri.com/shri-lakshmi-narasimha-swamy-temple-bhadravathi/

ಕೂಡಲಿಯಲ್ಲಿ ಶಾರದಾಂಬೆಯ ದೇವಸ್ಥಾನವಿರುವುದರಿಂದ ಇಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಸಹ ಮಾಡಿಸುತ್ತಾರೆ. ಇದನ್ನುದಕ್ಷಿಣದ ವಾರಾಣಸಿ ಎಂತಲೂ ಕರೆಯುತ್ತಾರೆ.

ಕೂಡಲಿಯಲ್ಲಿರುವುದು 12ನೇ ಶತಮಾನದ ರಾಮೇಶ್ವರ, ಸಂಗಮೇಶ್ವರ , ಚಿಂತಾಮಣಿ ನರಸಿಂಹ ಸ್ವಾಮಿ  , ಋಷ್ಯಾಶ್ರಮ ಸ್ವಾಮಿದೇವಸ್ಥಾನಗಳು. ಈ ದೇವಸ್ಥಾನಗಳು ನಿರ್ಮಾಣವಾಗಿರುವುದು ಹೊಯ್ಸಳರ ಕಾಲದಲ್ಲಿ. ದೇವಸ್ಥಾನದ ಹತ್ತಿರ ಇರುವ ಕೆಲವು ಹಳೆಯಶಾಸನಗಳನ್ನು ಓದಿದರೆ ಈ ದೇವಸ್ಥಾನಗಳು ನಿರ್ಮಾಣವಾದ ಕಾಲವನ್ನ ತಿಳಿಯಬಹುದು. “ಪ್ರಹ್ಲಾದನು” (ಹಿರಣ್ಯಕಶ್ಯಪು ಮತ್ತುಕಯಾದುವಿನ ಮಗ ) ಈ ದೇವಸ್ಥಾನದ ಭಕ್ತನಾಗಿದ್ದನು ಎಂದು ಇತಿಹಾಸ ಹೇಳುತ್ತದೆ.

ಕೂಡಲಿ ಇರುವುದು ಶಿವಮೊಗ್ಗದಿಂದ 14ಕಿ ಮೀ ದೂರದಲ್ಲಿ. ತುಂಗಾ ಮತ್ತು ಭದ್ರ ನದಿಗಳು ಇಲ್ಲಿ ಸಂಗಮವಾಗಿ ಮುಂದೆ ಒಟ್ಟಾಗಿಹರಿಯುತ್ತವೆ. ಈ ಎರಡು ನದಿಗಳು ಸೇರುವ ಜಾಗದಲ್ಲಿ  ಒಂದು ನಂದಿ ವಿಗ್ರಹವಿದೆ.

ಕೂಡಲಿ ಮಠ:

ಕೂಡಲಿಯಲ್ಲಿ  ಎರಡು ಮಠಗಳಿವೆ. ಒಂದು ಶಂಕರ ಮಠ ಮತ್ತೊಂದು ಶ್ರೀ ಅಕ್ಷೋಭ್ಯ ತೀರ್ಥ ಮಠ.

 ಶಂಕರ ಮಠವನ್ನುಸ್ಥಾಪಿಸಿದವರು ಶೃಂಗೇರಿ ಸ್ವಾಮಿಗಳು. ಇಲ್ಲಿನ ಶಂಕರ ಮಠದ ಸ್ಥಾಪನೆಯ ಹಿಂದೆ ಒಂದು ಕಥೆ ಇದೆ. 15ನೇ ಅಥವಾ 16ನೇಶತಮಾನದಲ್ಲಿ ಶೃಂಗೇರಿಯ ಸ್ವಾಮಿಗಳು ತೀರ್ಥಯಾತ್ರೆಗೆಂದು ಕಾಶಿಗೆ ಹೋಗಿದ್ದರಂತೆ. ಬಹಳ ದಿನಗಳ ಕಾಲ ಮರಳಿ ಬರದೇ ಇದ್ದಕಾರಣ ಸ್ವಾಮಿಗಳ ಶಿಷ್ಯರಾದ ಮರಿಸ್ವಾಮಿಗಳು ಪೀಠಾರೋಹಣ ಮಾಡಿದ್ದರು. ಇದಾದ ಸ್ವಲ್ಪ ದಿನಗಳ ನಂತರ ಹಿಂತಿರುಗಿದ ಹಿರಿಸ್ವಾಮಿಗಳು ವಿಷಯ ತಿಳಿದು ಶೃಂಗೇರಿಯನ್ನು ಬಿಟ್ಟು ಕೂಡಲಿಗೆ ಬಂದು ಇಲ್ಲಿ ಶಂಕರ ಮತವನ್ನು ಸ್ಥಾಪಿಸಿದರು. ನಂತರ ಮೈಸೂರಿನಮಹಾರಾಜರಾದ ಕೃಷ್ಣರಾಜ ಒಡೆಯರ್ರವರ ಸಹಾಯದಿಂದ ಈ ಮಠವು ಒಳ್ಳೆಯ ಹೆಸರು ಮಾಡಿತು. ಶಂಕರಾಚಾರ್ಯರಸಿದ್ದಂತವನ್ನು ಇಲ್ಲಿ ಹೇಳಿಕೊಡಲಾಗುತ್ತಿತ್ತು.

ಶ್ರೀ ಆರ್ಯ ಅಕ್ಷೋಭ್ಯ ತೀರ್ಥ ಮಠ :ಶ್ರೀ ಅಕ್ಷೋಭ್ಯ ತೀರ್ಥ (ಮದ್ವಾಚಾರ್ಯರ ಪ್ರತಿಪಾದಿ ) ರವರು 13ನೇ ಅಥವಾ 14ನೇ ಶತಮಾನದಲ್ಲಿ ಈ ಮತವನ್ನು ಸ್ಥಾಪಿಸಿದರು.ಈ ಮಠದಲ್ಲಿ ಸಂಸ್ಕೃತ ಮತ್ತು ಮದ್ವಾಚಾರ್ಯರ ಸಿದ್ದಂತಗಳನ್ನು ಪಾಲಿಸಲಾಗುತ್ತದೆ.

ಇಲ್ಲಿನ ಸ್ವಾಮೀಜಿಗಳನ್ನು ಭೇಟಿ ಮಾಡಬೇಕೆಂದರೆ ಮೊದಲೇ ಅನುಮತಿ ಪಡೆಯಬೇಕು.

ಶಿವಮೊಗ್ಗದಿಂದ ಕೇವಲ 14ಕಿ ಮೀ ಇರುವ ಈ ಪವಿತ್ರ ಕ್ಷೇತ್ರ ಕೂಡಲಿ, ತುಂಗಾ ಮತ್ತು ಭದ್ರ ನದಿಗಳು ಸಂಗಮಿಸುವ ಸ್ಥಳವಾಗಿದೆ.ಶಿವಮೊಗ್ಗದಿಂದ ಇಲ್ಲಿಗೆ ಬಸ್ ಅನುಕೂಲ ಚೆನ್ನಾಗಿದ್ದು, ಮಳೆಗಾಲದಲ್ಲಿ ಬಂದರೆ ಈ ಎರಡು ನದಿಗಳು ತುಂಬಿ ಹರಿಯುವುದನ್ನುನೋಡಬಹುದು.

 

ಭಾರತದ ಪುರಾತನ ವಸ್ತುಶಾಸ್ತ್ರ  ಇಲಾಖೆಯು ಕೂಡಲಿಯಲ್ಲಿರುವ ಹೊಯ್ಸಳರ ಕಾಲದ ದೇವಸ್ಥಾನವನ್ನು ನಿರ್ವಹಿಸುತ್ತಿದೆ. ಆದರೆಒಂದು ದುಃಖದ ವಿಷಯ ಎಂದರೆ ಕೆಲವು ಹಳೆಯ ಶಾಸನಗಳು ಮತ್ತು ದೇವರ ಮೂರ್ತಿಗಳನ್ನು ಹಾಗೆ ಬಿಸಾಡಲಾಗಿದೆ. ವಸ್ತುಶಾಸ್ತ್ರಇಲಾಖೆಯು ಇದರ ಬಗ್ಗೆ ಗಮನ ಹರಿಸಬೇಕಾಗಿದೆ.

ನೋಟ್ :

ನದಿಗಳು ಸಂಗಮಿಸುವ ಜಾಗಕ್ಕಿಂತ ಮುಂದೆ ಹೋಗಿ ಈಜುವುದು ಸ್ನಾನ ಮಾಡುವುದು ಅಪಾಯಕರ . ಸಂಗಮದಜಾಗದಲ್ಲಿರುವ ನಂದಿ ವಿಗ್ರಹವನ್ನು ದಾಟಿ ಹೋಗದೆ ಇದ್ದಾರೆ ಒಳಿತು.

 

 

 

 

Leave a Comment

four × 2 =

ShimogaSiri

K R Puram

Shivamogga

Karnataka

577202

9611875511