Kodachadri trekking nearby places

Kodachadri trekkers paradise

ಕೊಡಚಾದ್ರಿ:

 

Kodachadri

ಕರ್ನಾಟಕ ಪಶ್ಚಿಮ ಘಟ್ಟಗಳ ತವರು. ಭಾರತದಲ್ಲಿ ಪಶ್ಚಿಮ ಘಟ್ಟಗಳು ಹಾದು ಹೋಗಿರುವ ರಾಜ್ಯಗಳೆಂದರೆ ಕರ್ನಾಟಕ ಮತ್ತು ಮಹಾರಾಷ್ಟ್ರ.

ಪಶ್ಚಿಮ ಘಟ್ಟಗಳಲ್ಲಿ ಮಳೆಯ ಪ್ರಮಾಣ ಹೆಚ್ಚು ಆದ್ದರಿಂದಲೇ ಅವು ಪ್ರಕೃತಿಗೆ ಹತ್ತಿರ . ಪ್ರಕೃತಿಗೆ ಹತ್ತಿರ ಎಂದರೆ ಸುಂದರ ಎಂದು ಅರ್ಥ . ಹಸಿರು ಇದ್ದಲ್ಲಿ ಸೌಂದರ್ಯ ಇರಲೇಬೇಕು . ಹಾಗೆಯೇ ಸೌಂದರ್ಯದ ರಾಶಿ ನಮ್ಮ ಕೊಡಚಾದ್ರಿ .

ಕೊಡಚಾದ್ರಿ ಇರುವುದು ಶಿವಮೊಗ್ಗ ಜಿಲ್ಲೆಯಲ್ಲಿ . ಶಿವಮೊಗ್ಗದಲ್ಲಿರುವ ಪ್ರವಾಸಿ ತಾಣಗಳು ಹಲವಾರು . ಜಲಪಾತಗಳು , ಬೆಟ್ಟಗುಡ್ಡಗಳು , ಐತಿಹಾಸಿಕ ಸ್ಥಳಗಳು. ಕೊಡಚಾದ್ರಿಯು ಇವುಗಳಲ್ಲಿ ಒಂದು .

ಕೊಡಚಾದ್ರಿ ಇರುವುದು ಶಿವಮೊಗ್ಗದಿಂದ 141 ಕಿ ಮೀ ದೂರ. ಕೊಡಚಾದ್ರಿಯು ಕರ್ನಾಟಕದಲ್ಲೇ 10ನೇ ಅತಿ ಎತ್ತರದ ಪರ್ವತ ಶ್ರೇಣಿ .

ಕೊಡಚಾದ್ರಿಯು “ಪ್ರಾಕೃತಿಕ ಪರಂಪರೆಯ ತಾಣ ” ಎಂದು ಯುನೈಟೆಡ್ nations ನಿಂದ ಗುರುತಿಸಲ್ಪಟ್ಟಿದೆ .

ಪ್ರತಿ ದಿನದ ಕೆಲಸದ ಒತ್ತಡದಿಂದ ಬೇಸತ್ತಿರುವವರಿಗೆ ಇದೊಂದು ಬ್ರೇಕ್ ಪಾಯಿಂಟ್.

ಕೊಡಚಾದ್ರಿ ಎಂದರೆ ಕಣ್ಮುಂದೆ ಬರೋದು ಟ್ರೆಕಿಂಗ್. ಬೆಟ್ಟದ ತುದಿಗೆ ಹೋಗಿ ನಿಂತರೆ ಮೋಡಗಳು ಕೈಗೆ ಸಿಗುತ್ತವೆಯೇನೋ ಅನ್ನುವಷ್ಟು ಹತ್ತಿರ .

ಕೊಡಾಚಾ ಅಥವಾ ಕೊಡಶಿ ಎಂದರೆ ಕುತಜ ಎಂಬ ಹೂವಿನಿಂದ ಕೂಡಿದ ಪರ್ವತ ಎಂದು . ಕುತಜ ಎಂದರೆ ಬೆಟ್ಟದ ಮಲ್ಲಿಗೆ ಎಂದು ಅರ್ಥ . ಆದ್ರಿ ಎಂದರೆ ಬೆಟ್ಟ ಎಂದು . ಆದ್ದರಿಂದ ಇದನ್ನು ಕೊಡಚಾದ್ರಿ ಎಂದು ಕರೆಯುತ್ತಾರೆ .

ಕೊಡಚಾದ್ರಿ ಇತಿಹಾಸ: ಕೊಡಚಾದ್ರಿ ದೇವಸ್ಥಾನ

ಕೊಲ್ಲೂರಿಗೆ ಹೊಂದಿಕೊಂಡಿರುವುದೇ ಕೊಡಚಾದ್ರಿ. ಹೌದು ಇದು ಕೊಲ್ಲೂರಿನಿಂದ ಕೇವಲ 21ಕಿ ಮೀ ದೂರ .

ಆದಿ ಶಂಕರರು ಇಲ್ಲಿ ಧ್ಯಾನ ಮಾಡಿದ್ದರು ಎಂದು ಇತಿಹಾಸ ಹೇಳುತ್ತದೆ.

ಕೊಲ್ಲೂರಿನಲ್ಲಿರುವ ಮೂಲಾಂಬಿಕೆಯ ದೇವಸ್ಥಾನವನ್ನು ಸ್ಥಾಪಿಸಿದವರು ಶಂಕರಾಚಾರ್ಯರು .

ಕೊಡಚಾದ್ರಿಯ ತುದಿ ಗೆ 2ಕಿ ಮೀ ಇರುವಂತೆಯೇ ಕಲ್ಲಿನ ಕಂಬಗಳಿಂದ ಕಟ್ಟಿದ ಒಂದು ಪುಟ್ಟ ದೇವಸ್ಥಾನವಿದ್ದು , ಅದನ್ನು “ಸರ್ವಜ್ಞಪೀಠ” ಎಂದು ಕರೆಯುತ್ತಾರೆ. ಇದನ್ನು ಆದಿ ಶಂಕರರ ನೆನಪಿಗೋಸ್ಕರ ಕಟ್ಟಲಾಗಿರುವ ದೇವಸ್ಥಾನ ಎಂದು ಹೇಳಲಾಗುತ್ತದೆ.

ಕೊಡಚಾದ್ರಿ ಟ್ರೆಕಿಂಗ್: Kodachadri trekking

Kodachadri

ನಿಮಗೆಲ್ಲರಿಗೂ ಗೊತ್ತೇ ಇದೆ . ಕೊಡಚಾದ್ರಿ ಫೇಮಸ್ ಆಗಿರೋದೇ ಟ್ರೆಕಿಂಗ್ ಗೆ .

ಕೊಡಚಾದ್ರಿ ಟ್ರೆಕಿಂಗ್ ಶುರು ಆಗೋದು ನಿಟ್ಟೂರಿನ ಹತ್ತಿರ ಇರುವ ನಾಗೋಡಿ ಎಂಬ ಹಳ್ಳಿಯಿಂದ. ಟ್ರೆಕಿಂಗ್ ಗೆ 3 ದಾರಿಗಳಿವೆ .

ದಾರಿ 1: ನಿಟ್ಟೂರಿನಿಂದ 5.5 ಕಿ ಮೀ ದೂರ sagida ಮೇಲೆ ಎಡಕ್ಕೆ ಮಣ್ಣಿನ ದಾರಿ ಸಿಗುತ್ತದೆ. ಇಲ್ಲಿಂದ ಮತ್ತೆ 5ಕಿ ಮೀ ಕಾಲುನಡಿಗೆಯಲ್ಲೇ ಹೋಗಬೇಕು. Public transport ನಲ್ಲಿ ನೀವು ಬಂದಿದ್ದಾರೆ ಇಲ್ಲಿಂದ ನಡೆದೇ ಹೋಗಬೇಕು. ನಿಮ್ಮದೇ private vehicle ಆದರೆ ಮತ್ತೆ 5ಕಿ ಮೀ vehicle ನಲ್ಲಿ ಹೋಗಿ ನಂತರ ಟ್ರೆಕಿಂಗ್ ಶುರು ಮಾಡಬಹುದು .

ದಾರಿ 2: ನೀವು shivamoggadinda ಬಂದಿದ್ದರೆ ನಿಟ್ಟೂರಿಗೆ 1.5ಕಿ ಮೀ ಇರುವ ಹಾಗೆಯೆ ಟ್ರೆಕ್ಕಿಬಿಗ್ ಸ್ಟಾರ್ಟಿಂಗ್ ಪಾಯಿಂಟ್ ಸಿಗುತ್ತದೆ. ಈ ದಾರಿಯಲ್ಲಿ ಹಿಡ್ಲುಮನೆ ಜಲಪಾತ ಸಿಗುತ್ತದೆ. 2.5ಕಿ ಮೀ ನಡೆದ ನಂತರ ಈ ಜಲಪಾತವನ್ನು ದಾಟಿಯೇ ಮುಂದೆ ಹೋಗಬೇಕು.

ಮಳೆಗಾಲದಲ್ಲಿ ಹಿಡ್ಲುಮನೆ ಜಲಪಾತ ತುಂಬಿ ಹರಿಯುವುದರಿಂದ ದಾಟಲು ಕಷ್ಟವಾಗಬಹುದು . ಆದ್ದರಿಂದ ಮಳೆಗಾಲದಲ್ಲಿ ಈ ದಾರಿಯನ್ನು avoid ಮಾಡಿದರೆ ಒಳ್ಳೆಯದು.

ನೀವು ಯಾವುದೇ ದಾರಿಯಲ್ಲಿ ಹೋದರು ಸಹ ಕಾಡಿನ ಮದ್ಯೆಯೇ ನಡೆದು ಹೋಗಬೇಕಾಗುತ್ತದೆ . ಕಾಡಿನ ದಾರಿಯಾದ್ದರಿಂದ ಕನ್ಫ್ಯೂಸ್ ಆಗುವುದು ಖಚಿತ. ಆದ್ದರಿಂದ ಜೊತೆಯಲ್ಲಿ ಗೈಡ್ ಇದ್ದಾರೆ ಒಳ್ಳೆಯದು.

Kodachadri trekking

ದಾರಿ 3: ಈ ದಾರಿಯು ಮೇಲಿನ 2 ದಾರಿಗಳಿಗಿಂದ ದೂರ . ಮಳೆಗಾಲದಲ್ಲಿ ಈ ದಾರಿಯನ್ನು ಆರಿಸಿಕೊಂಡರೆ ಒಳ್ಳೆಯದು . ಈ ದಾರಿ ಸುಮಾಯು 15ಕಿ ಮೀ ಇದೆ (ಒನ್ ಸೈಡ್) . ಈ ದಾರಿಯಲ್ಲಿ ಜೀಪ್ ವ್ಯವಸ್ಥೆ ಕೂಡ ಇದೆ. ಬೇಕೆಂದರೆ ನೀವು ಜೀಪ್ ಮೂಲಕ ಕೂಡ ಬೆಟ್ಟದ ವರೆಗೂ ಹೋಗಬಹುದು .

ಬೆಟ್ಟದ ತುದಿಗೆ 1.2ಕಿ ಮೀ ಇರುವ ಹಾಗೆಯೇ PWD guest house ಇದ್ದು ಕರ್ನಾಟಕ ಸರ್ಕಾರವು ಇದರ ನಿರ್ವಹಣೆ ಮಾಡುತ್ತಿದೆ . ಇಲ್ಲಿ ಉಳಿದುಕೊಳ್ಳುವ ಮತ್ತು ಊಟದ ವ್ಯವಸ್ಥೆಯು ಇದೆ.

ಜನವರಿ 2015 ರ ನಂತರ ಕೊಡಚಾದ್ರಿಯಲ್ಲಿ ಟೆಂಟ್ ಹಾಕುವುದು ಮತ್ತು ಕ್ಯಾಂಪ್ ಫೈರ್ ಹಾಕುವುದನ್ನು ನಿಷೇಧಿಸಲಾಗಿದೆ.

ಕೊಡಚಾದ್ರಿ ಪಶ್ಚಿಮ ಘಟ್ಟ : Kodachadri & Western ghats

Kodachadri trekking

ಕೊಡಚಾದ್ರಿ ಬೆಟ್ಟದ ಸುತ್ತಲೂ ದಟ್ಟ ಕಾದಿದ್ದು, ವರ್ಷಕ್ಕೆ 500-750 cms ಮಳೆಯಾಗುತ್ತದೆ .

ವರ್ಷದ 8 ತಿಂಗಳೂ ಇಲ್ಲಿ ಮಳೆಯಾಗುತ್ತದೆ . ಆದ್ದರಿಂದಲೇ ಕೊಡಚಾದ್ರಿ ಹಸಿರಾಗಿರುವುದು .

ಬೆಸ್ಟ್ ಟೈಮ್ ಟು ವಿಸಿಟ್ ಕೊಡಚಾದ್ರಿ:

ಅಕ್ಟೋಬರ್ ನಿಂದ ಫೆಬ್ರವರಿ ಕೊಡಚಾದ್ರಿ ಟ್ರೆಕಿಂಗ್ ಗೆ ಬರಲು ಸೂಕ್ತ ಸಮಯ . ಚಳಿಗಾಲವಾದ್ದರಿಂದ ವಾತಾವರಣ ಚೆನ್ನಾಗಿರುತ್ತದೆ . ಮಳೆಗಾಲದಲ್ಲಿ ಕೊಡಚಾದ್ರಿಗೆ ಬರುವುದನ್ನು avoid ಮಾಡುವುದು ಒಳ್ಳೆಯದು .

ಮಳೆಗಾಲದಲ್ಲಿ ಜಿಗಣೆಗಳು ಹೆಚ್ಚು . ನಿಮ್ಮ ರಕ್ತವನ್ನು ಹೀರುವುದಂತೂ ಖಚಿತ . ದಪ್ಪ ಶೂ ಮತ್ತು ಫುಲ್ ಪ್ಯಾಂಟ್ ಧರಿಸಿದರೆ ಉತ್ತಮ.

Also read about https://shimogasiri.com/9-interesting-facts-about-agumbe/

ಹತ್ತಿರದ ಆಕರ್ಷಣೆಗಳು : Nearby places to visit

waterfalls near Kodachadri

ಸರ್ವಜ್ಞಪೀಠ : ಆದಿ ಶಂಕರರು ಈ ಜಾಗದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ . ಕೊಲ್ಲೂರು ಮೂಕಾಂಬಿಕ ದೇವಿಯ ಮೂಲಸ್ಥಾನ ಇದಾಗಿದ್ದು , ಕೊಡಚಾದ್ರಿ ಬೆಟ್ಟದ ತುದಿಯಿಂದ 2ಕಿ ಮೀ ದೂರದಲ್ಲಿದೆ.
ಹಿಡ್ಲುಮನೆ ಜಲಪಾತ : ಕೊಡಚಾದ್ರಿಗೆ ಹೋಗುವ ದಾರಿಯಲ್ಲಿಯೇ ಈ ಜಲಪಾತವು ಸಿಗುತ್ತದೆ. ಇಲ್ಲಿಂದ 5 ಕಿ ಮೀ ನಡೆದರೆ ಕೊಡಚಾದ್ರಿ ತುದಿಯನ್ನು ತಲುಪಬಹುದು.
ಅರಶಿನಗುಂಡಿ ಜಲಪಾತ : ಇದು ಕೊಡಚಾದ್ರಿಯ ತಪ್ಪಲಿನಲ್ಲಿರುವ ಒಂದು ಪುಟ್ಟ ಜಲಪಾತ . ಕೊಲ್ಲೂರಿನಿಂದ 6 ಕಿ ಮೀ ದೂರದಲ್ಲಿದೆ .
ಬೆಳಕಲ್ಲು ತೀರ್ಥ: ಬೆಳಕಲ್ಲು ತೀರ್ಥ ಇರುವುದು ಕೊಡಚಾದ್ರಿಯ ತಪ್ಪಲಿನ ದಕ್ಷಿಣ ಭಾಗದಲ್ಲಿ . ಮುದೂರು , ಜಡ್ಕಲ್ ಹತ್ತಿರ. ಕೊಲ್ಲೂರಿನಿಂದ 15 ಕಿ ಮೀ ದೂರ .
ನಗರ ಕೋಟೆ : ಇದು ಇರುವುದು ಕೊಡಚಾದ್ರಿಯಿಂದ 25ಕಿ ಮೀ ಹೊಸನಗರದಲ್ಲಿ . ಇದು 18ನೇ ಶತಮಾನದ ಕೋಟೆ .

Places near Kodachadri

ಹುಂಚ : ಇದು ಕೊಡಚಾದ್ರಿಯಿಂದ 35ಕಿ ಮೀ ದೂರದಲ್ಲಿದ್ದು ಜೈನ ಬಸದ್ ಮತ್ತು ಪದ್ಮಾವತಿಯ ದೇವಸ್ಥಾನವಿದೆ . ಜಿನದತ್ತ ಎಂಬ ರಾಜನು ಈ ಪ್ರಾಂತ್ಯವನ್ನು ಆಳಿದ್ದನು . ಈ ದೇವಸ್ಥಾನಕ್ಕೆ 1400 ವರ್ಷಗಳ ಹಿಂದಿನ ಇತಿಹಾಸವಿದೆ.
ಸಿಗಂದೂರು : ಸಿಗಂದೂರು ಕ್ಷೇತ್ರ ಚೌಡೇಶ್ವರಿಯದ್ದು . ಇದು ಇರುವುದು ಶರಾವತಿ ನದಿಯ ಹಿನ್ನೀರಿನಲ್ಲಿ . ಸಿಗಂದೂರು ಚೌಡೇಶ್ವರಿ ಅತ್ಯಂತ ಶಕ್ತಿಶಾಲಿ ದೇವರು ಎಂಬಜೆದು ಭಕ್ತರ ನಂಬಿಕೆ. ಕೊಡಚಾದ್ರಿಯಿಂದ 42ಕಿ ಮೀ ದೂರದಲ್ಲಿದೆ .
ಹಸಿರುಮಕ್ಕಿ: ಇದು ಶರಾವತಿ ನದಿಯ ಹಿನ್ನೀರು ಅಂದರೆ backwater . ಇದರ ಉದ್ದ 60ಕಿ ಮೀ ಮತ್ತು ಅಗಲ 15ಕಿ ಮೀ .
ಕೊಲ್ಲೂರು: ಕೊಲ್ಲೂರು ತಾಯಿ ಮೂಕಾಂಬಿಕೆಯ ದೇವಸ್ಥಾನಕ್ಕೆ ಪ್ರಸಿದ್ದಿ . ಆದಿ ಶಂಕರರು ಸ್ಥಾಪಿಸಿದ ದೇವಸ್ಥಾನವಿದು. ಕೊಲ್ಲೂರು ಇರುವುದು ಕೊಡಚಾದ್ರಿಯಿಂದ 21 ಕಿ ಮೀ . ಕೊಡಚಾದ್ರಿಯಲ್ಲಿ ಧ್ಯಾನ ಮಾಡಿದ್ದ ಆದಿ ಶಂಕರರು ಕೊಲ್ಲೂರಿನಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿದ್ದರು .

Kollur & Sarvajna peetha

ಸೂರ್ಯಾಸ್ತಮಾನ : ಸಂಜೆಯ ಬೆಲೆ ಕೊಡಚಾದ್ರಿಯ ತುದಿಯಲ್ಲಿ ನಿಂತು ನೋಡಿದರೆ ಸೂರ್ಯಾಸ್ತಮಾನವನ್ನು ಸಹ ನೋಡಬಹುದು. ಮೋಡಗಳು ಇಲ್ಲದಿದ್ದರೆ ಕೊಡಚಾದ್ರಿಯ ತುದಿಯಿಂದ ಅರಬ್ಬೀ ಸಮುದ್ರವು ಸಹ ಕಾಣಿಸುತ್ತದೆ. ಸೂರ್ಯನು ಸಮುದ್ರದಲ್ಲಿ ಇಂಚಿಂಚು ಮುಳುಗುವ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು .
PWD guest house na ಹಿಂಭಾಗದಲ್ಲಿರುವ ‘ವೆಂಕಟರಾಯಣ ದುರ್ಗಾ’ ಬೆಟ್ಟದ ಮೇಲೆ ಬೆಳಗಿನ ಜಾವಾ ನಿಂತು ನೋಡಿದರೆ ಸೂರ್ಯ ಉದಯವಾಗುವ ದೃಶ್ಯ ಕೂಡ ನೋಡಬಹುದು .

ಕೊಡಚಾದ್ರಿ ಕಬ್ಬಿಣದ ಅದಿರು: Kodachadri Iron ore

ಕೊಡಸಿಗಾದ್ರಿ ಬೆಟ್ಟದ ಮಣ್ಣಿನಲ್ಲೇ magnetic properties ಇದೆ ಅಂತೆ . ಪಶ್ಚಿಮ ಘಟ್ಟ ಎಂದರೆ ಕೇಳಬೇಕಾ , ಖನಿಜಕ್ಕೂ ಕಡಿಮೆಯಿಲ್ಲ ಸೌಂದರ್ಯಕ್ಕೂ ಕಡಿಮೆಯಿಲ್ಲ . ಆದರೆ ಗಣಿಗಾರಿಕೆ ಮಾಡಿ ಬೆಟ್ಟ ಕಡಿಯುವುದರಿಂದ ಪ್ರಕೃತಿ ನಾಶವಾಗುತ್ತದೆ ಎನ್ನುವ ಕಾರಣಕ್ಕೆ ಗಣಿಗಾರಿಕೆ ನಿಲ್ಲಿಸಲಾಯಿತು

ಕೊಡಚಾದ್ರಿ ಹೋಂ ಸ್ಟೇ :

ಕೊಡಚಾದ್ರಿಗೆ ಹೊರಟಿದ್ದೀರಿ ಎಂದರೆ ಅಲ್ಲಿ accommodation ತೊಂದರೆ ಇಲ್ಲ . ಕೊಡಚಾದ್ರಿ ಬೆಟ್ಟ ಶುರುವಾಗುವ ಮುಂಚೆಯೇ ಬಹಳಷ್ಟು ಹೋಟೆಲ್ ಗಳು ಹೋಂಸ್ಟೇ ಗಳು ಇವೆ . ಅದರಲ್ಲಿ ಕೆಲವು ಹೋಂ ಸ್ಟೇ ಗಳ ಫೋನ್ ನಂಬರ್ ಇಲ್ಲಿ ಕೊಡಲಾಗಿದೆ .

Kodachadri Hallimane Homestay94823 52368,+91 9632549169 (Raveesh), +91 8762518343 (Bharath),+91 8762100913 (Sharath)
Pathalagere Homestay+91-9482325588

 

Parvatha Homestay9945321561, 9945321562

9480633755,08185253653

Simha Farms9449652173, 08185253738
Gudimane Homestay9900956760, 9980100975, 9980100576

 

ತಲುಪುವುದು :

ಕೊಡಚಾದ್ರಿ ಇರುವುದು ಶಿವಮೊಗ್ಗದಿಂದ 141 ಕಿ ಮೀ ದೂರ. ಹತ್ತಿರದ ರೈಲ್ವೆ ಸ್ಟೇಷನ್ ಎಂದರೆ ಕುಂದಾಪುರ ಮತ್ತು ಭಟ್ಕಳ್ ರೈಲ್ವೆ ಸ್ಟೇಷನ್. ಹತ್ತಿರದ ಏರ್ಪೋರ್ಟ್ ಎಂದರೆ ಮಂಗಳೂರು ಏರ್ಪೋರ್ಟ್ .

Bangalore to Kodachadri distance394kms
Mangalore to Kodachadri distance116kms
Shivamogga to Kodachadri distance141kms
Trekking timeOne day(up & down)
AreaWestern ghats
Permission requiredNo
Hotels & accommodationsEasily available
Entry feeNo
DistrictShivamogga
Best time to visitOct to Feb
AvoidVisit during monsoon
No. of routes3
Risk levelEasy to Moderate

2 thoughts on “Kodachadri trekking nearby places”

Leave a Comment

three × 4 =

ShimogaSiri

K R Puram

Shivamogga

Karnataka

577202

9611875511