Keladi & Ikkeri- Historic places in Shivamogga

Keladi & Ikkeri temples:

ಕೆಳದಿ:

Rameshwara temple-Keladi
Rameshwara temple-Keladi

ಕರ್ನಾಟಕದ ಇತಿಹಾಸದಲ್ಲಿ ಕೆಳದಿ ನಾಯಕರ ಪಾತ್ರ ಪ್ರಮುಖವಾದದ್ದು . ಮಲೆನಾಡಿನ , ಕರಾವಳಿಯ ಮತ್ತು ಕರ್ನಾಟಕದ ಈಗಿನ ಪಶ್ಚಿಮ ಘಟ್ಟಗಳಲ್ಲಿ ಆಡಳಿತವನ್ನು ನಡೆಸಿದ್ದ ಕೀರ್ತಿ ಕೆಳದಿ ನಾಯಕರದ್ದು. ಅದಲ್ಲದೆ ಕೇರಳದ ಉತ್ತರ ಭಾಗ ಮತ್ತು ಮಲಬಾರ್ ಪ್ರಾಂತ್ಯಗಳಲ್ಲಿಯೂ ಇವರ ಆಡಳಿತವಿತ್ತು.

ಕೆಳದಿಯನ್ನು ಆಳಿದವರು ಹಲವಾರು ನಾಯಕರೇ ಆದರೂ , ಶಿವಪ್ಪನಾಯಕನ ಕೊಡುಗೆ ಅಪಾರ.

Rameshwara temple-Keladi
Rameshwara temple-Keladi

ಶಿವಪ್ಪನಾಯಕನು ಕೆಳದಿಯನ್ನು 1645-1660 ರ ವರೆಗೆ ಆಳಿದನು. ಅವನು ಸಾಹಿತ್ಯ ಮತ್ತು ಲಲಿತಕಲೆಗಳಲ್ಲಿ ಆಸಕ್ತಿಯನ್ನು ಹೊಂದಿದ್ದನು.

ಬಿಜಾಪುರದ ಸುಲ್ತಾನರು, ಮೈಸೂರಿನ ರಾಜರು , ಪೋರ್ಚುಗೀಸರು ಮತ್ತು ಅಕ್ಕ ಪಕ್ಕ ಪ್ರಾಂತ್ಯದ ನಾಯಕರ ವಿರುದ್ಧ ಮಾಡಿದ ಪ್ರಚಾರದಿಂದ ಕೆಳದಿಯು ತನ್ನ ಸಾಮ್ರಾಜ್ಯವನ್ನು ಕರ್ನಾಟಕದಲ್ಲಿ ವಿಸ್ತರಿಸಲು ಸಾಧ್ಯವಾಯಿತು.

Keladi temple
Keladi temple

ಕೆಳದಿಯ ಪ್ರಮುಖ ಆಕರ್ಷಣೆ ರಾಮೇಶ್ವರ ಮತ್ತು ವೀರಭದ್ರ ದೇವಸ್ಥಾನಗಳು. ಈ ದೇವಸ್ಥಾನಗಳನ್ನು ಹೊಯ್ಸಳ ಮತ್ತು ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿದೆ.

ಕೆಳದಿ ಇರುವುದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಿಂದ ಕೇವಲ 8ಕಿ ಮೀ ದೂರ . ಕೆಳದಿ ಸಾಮ್ರಾಜ್ಯದ ವೈಭವವನ್ನು ನೋಡಬೇಕೆಂದರೆ ಇಲ್ಲಿಗೆ ಭೇಟಿ ನೀಡಬೇಕು.

ಇಲ್ಲಿಗೆ ತಲುಪುವುದು ಕೂಡ ತುಂಬಾ ಸುಲಭ . ಶಿವಮೊಗ್ಗದಿಂದ ಸಾಗರಕ್ಕೆ ಬಸ್ ಅನುಕೂಲ ಚೆನ್ನಾಗಿದ್ದು , ಸಾಗರದಿಂದ ಕೆಳದಿಗೆ ಹಲವಾರು ಬಸ್ ಗಳಿವೆ .

[table id=6 /]

ಇಕ್ಕೇರಿ:

Ikkeri
Ikkeri

ಇಕ್ಕೇರಿ ಇರುವುದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಿಂದ 3ಕಿಮೀ ದೂರದಲ್ಲಿ. ಇಕ್ಕೇರಿ ಅಂದರೆ ‘ಎರಡು ಕೇರಿ‘ ಎಂದು ಅರ್ಥ.

ಇಕ್ಕೆರಿಯು 120ವರ್ಷಗಳ ಕಾಲ ಕೆಳದಿಯ ರಾಜಧಾನಿಯಾಗಿತ್ತು. ನಂತರದಲ್ಲಿ ರಾಜಧಾನಿಯನ್ನು ‘ನಗರ’ ಮತ್ತು ನಂತರದಲ್ಲಿ’ಕವಲೇದುರ್ಗಕ್ಕೆ ‘ ಸ್ಥಳಾಂತರಿಸಲಾಯಿತು.

  https://shimogasiri.com/is-malnad-really-a-scenic-place-yes-visit-kavaledurga-fort/

Aghoreshwara temple-Ikkeri
Aghoreshwara temple-Ikkeri

ಇಕ್ಕೇರಿಯ ಪ್ರಮುಖ ಆಕರ್ಷಣೆ ಅಲ್ಲಿರುವ ‘ಅಘೋರೇಶ್ವರ’ ದೇವಸ್ಥಾನ. ಈ ದೇವಸ್ಥಾನವನ್ನು ಕಟ್ಟಿಸಿದವರು ಕೆಳದಿಯ ನಾಯಕರು.ವಿಜಯ ನಗರ, ಕರ್ನಾಟ ದ್ರಾವಿಡರ , ಚಾಲುಕ್ಯರ ಮತ್ತು ಹೊಯ್ಸಳರ ಮತ್ತು ಡೆಕ್ಕನ್ ಸುಲ್ತಾನರ ಶೈಲಿಯಲ್ಲಿ ಈ ದೇವಸ್ಥಾನವನ್ನುಕಟ್ಟಲಾಗಿದೆ.

Nandi-Ikkeri
Nandi-Ikkeri

ಅಘೋರೇಶ್ವರ ದೇವಸ್ಥಾನದ ಎದುರು ಬೃಹತ್ ನಂದಿ ವಿಗ್ರಹವಿದ್ದು ಬಹಳ ಅಪರೂಪದ ಗಾಜಿನ ರೀತಿಯಲ್ಲಿ ಹೊಳೆಯುವ ಗ್ರಾನೈಟ್ಕಲ್ಲಿನಿಂದ ನಿರ್ಮಿಸಲಾಗಿದೆ.

ಪುರಾತನ ವಾಸ್ತುಶಾಸ್ತ್ರ ಇಲಾಖೆಯು ಅದರ ನಿರ್ವಹಣೆಯನ್ನು ಮಾಡುತ್ತಿದೆ.

ಸಾಮಾನ್ಯವಾಗಿ ಕೆಳದಿ ಭೇಟಿ ನೀಡುವ ಪ್ರವಾಸಿಗರು ಇಕ್ಕೆರಿಗೂ ಸಹ ಬರುತ್ತಾರೆ. ಕೇವಲ ದೇವಸ್ಥಾನವಲ್ಲದೆ ರಾಜರ ಕಾಲದ ಹಳೆಯಶಿಲಾ ಶಾಸನಗಳನ್ನು ಸಹ ಇಲ್ಲಿ ಕಾಣಬಹುದು.

ಮಲೆನಾಡಿನ ಸಾಗರದ ನಡುವೆ ಇರುವ ಈ ಪುರಾತನ ಕಾಲದ ದೇವಸ್ಥಾನಗಳು ಕೆಳದಿ ಸಾಮ್ರಾಜ್ಯದ ಗತವೈಭವವನ್ನು ಸಾರುತ್ತವೆ .

Leave a Comment

one × three =

ShimogaSiri

K R Puram

Shivamogga

Karnataka

577202

9611875511