Kavaledurga Fort Shimoga

Kavaledurga Fort Shimoga:

ಕವಲೇದುರ್ಗದ ಕೋಟೆ:

Kavaledurga fort Information
Kavaledurga fort Information

ಕವಲೇ ದುರ್ಗದ ಕೋಟೆಯನ್ನು 9ನೇ ಶತಮಾನದಲ್ಲಿ ಕಟ್ಟಲಾಯಿತು. ಚೆಲುವರಂಗಪ್ಪ ಎಂಬ ಕೆಳದಿಯ ನಾಯಕನು ಜೀರ್ಣೋದ್ದಾರ ಮಾಡಿಸಿದನು. ಇದನ್ನು ಭುವನಗಿರಿ ಅಥವಾ ಭುವನಗಿರಿ ಕೋಟೆ ಎಂತಲೂ ಕರೆಯುತ್ತಿದ್ದರು. ಕವಲೇದುರ್ಗವು ಮೊದಲು ವಿಜಯನಗರದ ಅರಸರ ಹಿಡಿತದಲ್ಲಿತ್ತು , ನಂತರದಲ್ಲಿ ವೆಂಕಪ್ಪನಾಯಕ ಎಂಬ ರಾಜನು (1582-1629) ಕೋಟೆಯನ್ನು ಕಟ್ಟಿ ಭದ್ರಗೊಳಿಸಿದನು ಮತ್ತು ಮಹತ್ತಿನ ಮಠ ಒಂದನ್ನು ಸಹ ಸ್ಥಾಪಿಸಿದನು ಎನ್ನುವುದು ಇತಿಹಾಸ.

Kavaledurga fort Entrance
Kavaledurga fort Entrance

ವಾಸ್ತುಶಿಲ್ಪ: 

ಕವಲೇದುರ್ಗದ ಕೋಟೆ ಇರುವುದು ತೀರ್ಥಹಳ್ಳಿ ಇಂದ 17ಕಿಮೀ ದೂರ. ಬೆಟ್ಟದ ಮೇಲಿರುವ ಈ ಕೋಟೇಯು 1541ಮೀ ಎತ್ತರದಲ್ಲಿದೆ . ಈ ಕೋಟೆಯಲ್ಲಿ 7ಹಂತಗಳಿದ್ದು ಕೆಲವು ಭಾಗಗಳು ಮಾತ್ರ ಚೆನ್ನಾಗಿವೆ. ಉಳಿದುಕೊಂಡ ಭಾಗಗಳಲ್ಲಿ ಲಕ್ಷ್ಮೀನಾರಾಯಣ ದೇವಸ್ಥಾನ ಮತ್ತು ಮೈಲಾರೇಶ್ವರ ದೇವಸ್ಥಾನವಿದೆ . ಕೋಟೆಯ 2ನೇ ಹಂತದಲ್ಲಿ “ನಗಾರಿ ಬಾಗಿಲು ” ಸಹ ಇದೆ. ಬೆಟ್ಟದ ಮೇಲಿರುವ ಲಕ್ಷ್ಮೀನಾರಾಯಣ ದೇವಸ್ಥಾನವು ಇನ್ನು ಗಟ್ಟಿಯಾಗಿದೆ. ಇಲ್ಲಿಂದ ಮುಂದೆ ಹೋದರೆ “ದರ್ಬಾರ್ ಹಾಲ್ ” ಮತ್ತು ರಾಣಿಯರ ಈಜು ಕೊಳವನ್ನು ನೋಡಬಹುದು. 9ನೇ ಶತಮಾನದಲ್ಲಿ ಕಟ್ಟಿರುವ ಈ ಕೋಟೆಯಲ್ಲಿ ಆಗಿನ ಕಾಲದ ಸುಂದರವಾದ ವಾಸ್ತುಶಿಲ್ಪವನ್ನು ನೋಡಬಹುದು.

Kashi Vishwanatha temple-Kavaledurga
Kashi Vishwanatha temple-Kavaledurga
Lakshmi Narayana & Mylareshwara temples
Lakshmi Narayana & Mylareshwara temples

ಕೋಟೆಯ ಬಹುತೇಕ ಭಾಗವು ಹಾಳಾಗಿದ್ದು ಬೆಟ್ಟದ ಮೇಲಿಂದ ಮಲೆನಾಡಿನ ಪ್ರಕೃತಿಯ ವಿಹಂಗಮ ನೋಟವನ್ನು ನೋಡಬಹುದು. ಕೋಟೆಯ ಆವರಣದಲ್ಲಿ ಇರುವ ದೊಡ್ಡದಾದ ಒಂದು ಕಲ್ಲಿನ ಕಂಬವಿದ್ದು ಅದರ ಎದುರಿಗೆ ‘ಶಿಖರೇಶ್ವರ ದೇವಸ್ಥಾನ’ ಇದೆ. ಶಿಖರದ ಮೇಲಿರುವುದರಿಂದ ಇದಕ್ಕೆ ಈ ಹೆಸರು ಬಂದಿರಬಹುದು. ಈ ದೇವಸ್ಥಾನವನ್ನು ನೋಡಬೇಕೆಂದರೆ ಬೆಟ್ಟವನ್ನು ಹತ್ತಿಯೇ ಬರಬೇಕು . ಕೋಟೆಯ 3ನೇ ಹಂತದಲ್ಲಿ ಕಾಶಿ ವಿಶ್ವನಾಥನ ದೇವಸ್ಥಾನವಿದ್ದು,ದೇವಸ್ಥಾನದ ಎದುರಿಗೆ 2ಕಲ್ಲಿನ ಧ್ವಜಸ್ತಂಭವನ್ನು ನೋಡಬಹುದು. ಈ ದೇವಸ್ಥಾನದ ಎದುರಿಗೆ ತುಲಾಭಾರ ಮಂಟಪವು ಸಹ ಇದೆ .

ಕೋಟೆಯನ್ನು ಸೂಕ್ಷ್ಮವಾಗಿ ಶೋಧಿಸುತ್ತಾ ಹೋದರೆ ಒಂದು ಗುಹೆಯ ಒಳಗಿನಿಂದ ವರ್ಷ ಪೂರ್ತಿ ನೀರು ಬರುವುದನ್ನು ನೋಡಬಹುದು , ಇದನ್ನು ‘ಗಧಾ ತೀರ್ಥ‘ ಎಂದು ಕರೆಯುತ್ತಾರೆ . ಮಹಾಭಾರತದ ಭೀಮನ ಗಧೆಯ ಹಿಡಿತದಿಂದ ಈ ನೀರು ಬರುತ್ತಿರುವುದು ಎಂದು ಹೇಳುತ್ತಾರೆ . ಕೋಟೆಯ ಆವರಣದಲ್ಲೂ ಒಂದೆರಡಿ ಚಿಕ್ಕ ಕೊಳಗಳು ಸಹ ಇವೆ . ಇನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಆದಿಶೇಷನ ಕಲ್ಲಿನ ಮೂರ್ತಿಯನ್ನು ಸಹ ನೋಡಬಹುದು. ಕೋಟೆಯಲ್ಲಿ ‘ತುಪಾಕಿ ಬುರ್ಜು ‘ಎಂಬ ಜಗವುಡ್ಡು ಬಹುಶಃ ಯುದ್ಧಕ್ಕೆ ಬೇಕಾದ ಮದ್ದು ಗುಂಡುಗಳನ್ನು ಸಂಗ್ರಹಿಸುವ ಜಾಗವಿದ್ದಿರಬಹುದು .

ಭಾರತದ ಪುರಾತನ ವಸ್ತು ಶಾಸ್ತ್ರ ಇಲಾಖೆಯು ಅಳಿವಿನ ಅಂಚಿನಲ್ಲಿರುವ ಕೋಟೆಯನ್ನು ಉಳಿಸುವ ಕ್ರಮಗಳನ್ನು ಸಹ ಕೈಗೊಳ್ಳುವ ಸುದ್ದಿಯು ಸಹ ಇದೆ. ಇತಿಹಾಸ ಹೇಳುವ ಪ್ರಕಾರ ಹಲವಾರು ಋಷಿಮುನಿಗಳು ಇಲ್ಲಿ ತಪಸ್ಸನ್ನು ಮಾಡಿದ್ದರಂತೆ .

Also read one of the top 20 Bird Sanctauries in India https://shimogasiri.com/mandagadde-bird-sanctuary-shivamogga/

ಇಲ್ಲಿಗೆ ತಲುಪುವುದು ಹೇಗೆ ?

ಟ್ರೆಕಿಂಗ್ ಮಾಡುವವರಿಗೆ ಕವಲೇದುರ್ಗದ ಕೋಟೆಯು ಒಂದೊಳ್ಳೆ ಸ್ಥಳ . ಬೆಟ್ಟದ ಕೆಳಗೆ ನಿಂತು ನೋಡಿದರೆ ಬೆಟ್ಟದ ಮೇಲೆ ಒಂದು ಕೋಟೆ  ಇರುವುದೆ ಎನ್ನುವ ಅನುಮಾನ ಮೂಡುತ್ತದೆ , ಅಷ್ಟು ಭದ್ರವಾಗಿ ಕಟ್ಟಿದ ಕೋಟೆ ಅದು. ಬೆಟ್ಟದ ತಳದಲ್ಲಿ ಹೊಲಗದ್ದೆ ಇದ್ದು ಕೋಟೆ ದಾರಿಯನ್ನು ಸ್ಥಳೀಯರ ಸಹಾಯದಿಂದ ತಿಳಿಯಬಹುದು. ಟ್ರೆಕಿಂಗ್ ಗೆ ಹಿಡಿಯುವ ಸಮಯ 3ರಿಂದ 4ಗಂಟೆ . ತಿನ್ನಲು ಕುಡಿಯಲು ಇಲ್ಲಿ ಏನು ಸಿಗುವುದಿಲ್ಲ . ಟ್ರೆಕಿಂಗ್ ಗೆ ಹೊರಡುವಾಗ ಏನು ಬೇಕೋ ಅದೆನ್ನೆಲ್ಲ ಪ್ಯಾಕ್ ಮಾಡಿ ಹೊರಟರೆ ಒಳ್ಳೆಯದು.

ಶಿವಮೊಗ್ಗದಿಂದ 81ಕಿ ಮೀ

ತೀರ್ಥಹಳ್ಳಿ ಇಂದ 17ಕಿ ಮೀ

ಬೆಂಗಳೂರಿನಿಂದ 352ಕಿ ಮೀ

ಮಂಗಳೂರಿನಿಂದ 141ಕಿ ಮೀ

ಸಮಯ : ಬೆಳಿಗ್ಗೆ 8.30ರಿಂದ

ಶಿವಮೊಗ್ಗ ಮತ್ತು ತೀರ್ಥಹಳ್ಳಿ ಇಂದ ಕವಲೇದುರ್ಗಕ್ಕೆ ಬಸ್ ಸೌಲಭ್ಯ ಚೆನ್ನಾಗಿದೆ.

ಸಲಹೆ ಏನೆಂದರೆ ಪ್ರೈವೇಟ್ ವೆಹಿಕಲ್ಸ್ ಮಾಡಿಕೊಂಡು ಬರುವುದು ಒಳ್ಳೆಯದು , ಕಾರಣ ಕೋಟೆಯ ಹತ್ತಿರ ಇರುವ ಇನ್ನು ಕೆಲವು ಜಾಗಗಳನ್ನು ಸಹ ನೋಡಬಹುದು.

ಶಿವಮೊಗ್ಗ ರೈಲ್ವೆ ಸ್ಟೇಷನ್ ಹತ್ತಿರದ ರೈಲ್ವೆ ಸ್ಟೇಷನ್(SMET)

ಮಂಗಳೂರು ಏರ್ಪೋರ್ಟ್ :ಮಂಗಳೂರು ಏರ್ಪೋರ್ಟ್

Photo Source:

www.enidhi.net

www.tripadvisor.com

www.rohitshetty143.blogspot.com

www.google.com

 

 

 

Leave a Comment

1 + 17 =

ShimogaSiri

K R Puram

Shivamogga

Karnataka

577202

9611875511