international mother language day- Feb 21st

ಭಾಷೆ ಎನ್ನುವುದು ಮನುಷ್ಯನ ದಿನನಿತ್ಯದ ಜೀವನದಲ್ಲಿ ಬಹಳಮುಖ್ಯವಾದದ್ದು. ಸಮಾಜದ ಏಕೀಕರಣದಲ್ಲಿ , ಶಿಕ್ಷಣದಲ್ಲಿ ಮತ್ತುಅಭಿವೃದ್ಧಿಯಲ್ಲಿ ಭಾಷೆಯ ಅಗತ್ಯ ಬಹಳ ಮುಖ್ಯ. ಪ್ರತೀ ಭಾಷೆಗೂ ಅದರದೇ ಆದ ಪ್ರಾಮುಖ್ಯತೆ ಇದೆ. Globalisation ಇಂದಮಾತೃ ಭಾಷೆಗಳು  ಇತ್ತೀಚಿನ ವರ್ಷಗಳಲ್ಲಿ ಜೀವ ಕಳೆದುಕೊಳ್ಳುತ್ತಿವೆ.  ಮಾತೃ ಭಾಷೆಯ ಉಳಿವಿಗಾಗಿ, ಮೂಲ ಶಿಕ್ಷಣದಲ್ಲಿಮಾತೃ ಭಾಷಯ ಕಡ್ಡಾಯ ಅಧ್ಯಯನ ಅವಶ್ಯವಿದೆ. ಮಾತೃ ಭಾಷೆಯನ್ನು ಉಳಿಸಬೇಕಾದರೆ ಬರೀ ಮಾತನಾಡುವುದುಮಾತ್ರವಲ್ಲದೆ, ಓದುವುದು ಮತ್ತು ಬರೆಯುವುದನ್ನು ಸಹ ಕಲಿಯಬೇಕು.

ಹೀಗೆ ಮಾತೃ ಭಾಷೆಯ ಉಳಿವಿಗಾಗಿ ಫೆ 21ರಂದು”ವಿಶ್ವ ಮಾತೃ ಭಾಷಾ ದಿನ”ವನ್ನು ಪ್ರಪಂಚದಾಧ್ಯಂತ ಆಚರಿಸಲಾಗುತ್ತದೆ.ತಮ್ಮ ತಮ್ಮ ಸಂಸ್ಕೃತಿಯನ್ನು ಉಳಿಸಲು ಹಾಗು ಬೆಳೆಸಲು ಮತ್ತು ಜನರಲ್ಲಿ ಭಾಷೆಯ ಉಳಿವಿಗಾಗಿ ಜಾಗ್ರತೆ ಮೂಡಿಸಲು ಫೆ 21ರಂದು ವಿಶ್ವ ಮಾತೃ ಭಾಷಾ ದಿನವನ್ನು 1999 ಇಸವಿ ಇಂದ ಆಚರಿಸಿಕೊಂಡು ಬರಲಾಗುತ್ತಿದೆ.

ಕನ್ನಡ ಭಾಷೆಯು ಭಾರತದ ಪುರಾತನ ಭಾಷೆಗಳಲ್ಲಿ ಒಂದು. ಕನ್ನಡ ನಮ್ಮ ಕರ್ನಾಟಕದ ಆಡಳಿತ ಭಾಷೆ . 2011 ಜನ ಗಣತಿಯಪ್ರಕಾರ  ಜಗತ್ತಿನಲ್ಲಿ 6.4ಕೋಟಿ ಜನರು ಕನ್ನಡ ಮಾತನಾಡುತ್ತಾರೆ. ಇವರಲ್ಲಿ 5.5ಕೋಟಿ  ಜನರ ಮಾತೃ ಭಾಷೆ ಕನ್ನಡವಾಗಿದೆ.

ಬ್ರಾಹ್ಮೀ ಲಿಪಿಯನ್ನು ಬಳಸಿ ಕನ್ನಡ ಬರೆಯಲಾಗುತ್ತದೆ. ಕನ್ನಡ ಭಾಷೆಯು  1500-1600ವರ್ಷಗಳಿಗೂ ಹಿಂದಿನದು. ತಮಿಳುಭಾಷೆಯಲ್ಲಿ ಬರೆಯಲ್ಪಟ್ಟ ಶಾಸನಗಳಲ್ಲಿ ಕನ್ನಡದ ಶಬ್ಧಗಳು ಬಳಕೆಯಾಗಿದೆ ಎಂದು ಸಾಬೀತುಪಡಿಸಿದ್ದಾರೆ. ಕನ್ನಡಕ್ಕೆ ಬಹಳಉಪಭಾಷೆಗಳಿವೆ. ಪದಗಳಲ್ಲಿ ಸ್ವಲ್ಪ ಬದಲಾವಣೆ ಇದ್ದರು “ಅರ್ಥ ಒಂದೇ ಕನ್ನಡ ಒಂದೇ”ಇಂಥ ಶ್ರೀಮಂತ ಭಾಷೆಯಾಗಿರುವ ,ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಮಾತೃ ಭಾಷೆ ಕನ್ನಡವನ್ನು ಬಳಸೋಣ, ಉಳಿಸೋಣ ಮತ್ತು ಬೆಳೆಸೋಣ.ಸ್ನೇಹಿತರೆಲ್ಲರಿಗೂ ವಿಶ್ವ ಮಾತೃ ಭಾಷಾ ದಿನದ ಶುಭಾಶಯಗಳು. ಜೈ ಕರ್ನಾಟಕ ಜೈ ಕನ್ನಡ

Leave a Comment

8 − seven =

ShimogaSiri

K R Puram

Shivamogga

Karnataka

577202

9611875511