Childhood# Gajanuru dam# Shivamogga

ಗಾಜನೂರು ಡ್ಯಾಂ-ಶಿವಮೊಗ್ಗ :

Gajanuru dam- Shimoga:

ತುಂಗಾ ಮೇಲ್ಡಂಡೆ ಯೋಜನೆ- ಗಾಜನೂರ

ಶಿವಮೊಗ್ಗ ಇಂದ 12 ಕಿ ಮೀ ದೂರದಲ್ಲಿ ಗಾಜನೂರು ಗ್ರಾಮ, ಹಳ್ಳಿ ಆದಮೇಲೆ ಬರೋದು ಗಾಜನೂರು ಡ್ಯಾಂ. ನಾವೆಲ್ಲ ಚಿಕ್ ಚಿಕ್ ಮಕ್ಕಳು, ಮೋಸ್ಟ್ಲಿ ಪ್ರೈಮರಿ ಸ್ಕೂಲ್ ಇರಬಹುದು, ವಾರ ಪೂರ್ತಿ ಸ್ಕೂಲ್ ಇರ್ತಾ ಇತ್ತು. ಭಾನುವಾರ ರಜೆ. ರಜೆ ಬಂತು ಅಂದ್ರೆ ಗಾಜನೂರ್ ಡ್ಯಾಂ ಗೆ ಹೊಗ್ಬೇಕು ಅನ್ನೊ ಆಸೆ.

ಒಂದು ಪಿಕ್ ನಿಕ್ ಸ್ಪಾಟ್ ಥರ ಆಗಿತ್ತು. ತುಂಗಾ ನೀರು ಅಲ್ಲಿ ಇದ್ದ ಪಾರ್ಕ್, ಡ್ಯಾಂ ಮೇಲಿಂದ ಭರ್ ಅಂತ ಬೀಳ್ತಾ ಇದ್ದ ನೀರು ನೋಡೊ ಹುಚ್ಚು.  ಯಾವಾಗ್ಲು ಅಪ್ಪಂಗೆ ಕೇಳ್ತಾ ಇದ್ದಿದ್ದು ಒಂದೆ ಪ್ರೆಶ್ನೆ, ಅಪ್ಪ, ಡ್ಯಾಂ ಗೆ ಬಾಂಬ್ ಇಟ್ರೆ ಏನಾಗತ್ತೆ ಅಂತ? ಅಪ್ಪ ಹೇಳೊರು ಇಡೀ ಶಿವಮೊಗ್ಗನೆ ನೀರಾಲ್ಲಿ ಮುಳುಗಿ ಹೊಗತ್ತೆ ಅಂತ. ಬಾಂಬ್ ಬೀಳ್ಲಿಲ್ಲ, ಆದ್ರೆ ನಾವ್ ಕೇಳೊದ್ ಬಿಡ್ತಿರ್ಲಿಲ್ಲ.

Also read TungaBhadra river origin https://shimogasiri.com/tungabhadra-river-shivamogga-district/

ಗಾಜನೂರು ಡ್ಯಾಂ

ಈ ಡ್ಯಾಂ ನ ಮೈಸೂರು ಕಸ್ಟ್ರಕ್ಷನ್ ಕಂಪೆನಿ ಕಟ್ಟಿದ್ದು 1972 ರಲ್ಲಿ. ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗೊ ದಾರೀಲಿ ಗಾಜನೂರು ಡ್ಯಾಂ ಇದೆ. ಇದರ ಉದ್ದ 770ಮಿ, ಸ್ಪಿಲ್  ವೇ 334ಮಿ ಮತ್ತು ಇದರ ಸಾಮರ್ಥ್ಯ 533.24ಮೀ. ಈ ಡ್ಯಾಂ ಗೆ 22 ಗೇಟ್ ಗಳು ಇವೆ. ಮಳೆಯಿಂದ ನೀರು ಜಾಸ್ತಿ ಆದ್ರೆ ಗೇಟ್ ಓಪನ್ ಮಾಡ್ತಾರೆ.ಶಿವಮೊಗ್ಗದ ನೀರಾವರಿ ಗೆ ಈ ನೀರನ್ನ ಹೆಚ್ಚಾಗಿ ಯುಸ್ ಮಾಡ್ತಾರೆ.

ಹಳೇ ಡ್ಯಾಂ ಇದ್ದಾಗ ನೀರ್ ಹತ್ರ ಹೊಗೊಕೆ ಬಿಡ್ತಾ ಇದ್ರು. ಆದ್ರೆ ಹೊಸ ಡ್ಯಾಂ ಆದ್ಮೇಲೆ ಸುರಕ್ಷತೆ ದ್ರಿಷ್ಠಿಯಿಂದ ಬ್ರಿಡ್ಜ್  ಮೇಲೆ ಹೋಗೊದಕ್ಕೆ ಬಿಡ್ತಾಯಿಲ್ಲ. ಮೇಲಧಿಕಾರಿಯಿಂದ ಪರ್ಮಿಷನ್ ಇದ್ರೆ ಮಾತ್ರ ಬಿಡೊದು. ಈ ಕಾರಣಕ್ಕೆ ಬೇರೆ ಊರುಗಳಿಂದ ಪ್ರವಾಸಕ್ಕೆ ಬರೊ ಜನ ಇಲ್ಲಿ ಬರೋಕೆ ಇಷ್ಟ ಪಡ್ತಯಿಲ್ಲ. ಅಷ್ಟು ದೂರದಿಂದ ಬಂದಿದೀವಿ ಬ್ರಿಡ್ಜ್ ಮೇಲೆ ಹೋಗೋಕೆ ಬಿಡೊಲ್ಲ ಅಂತ. ಆದ್ರೆ ರೂಲ್ಸ್ ಮಾಡಿರೊದು ನಮ್ಮ ಸುರಕ್ಷತೆಗೆ ಅಲ್ವ.?

ಗಾಜನೂರು ಬ್ರಿಡ್ಜ್

ಇಷ್ಟೆಲ್ಲಾ ಇದ್ರೂನು ಶಿವಮೊಗ್ಗದ ಜನರಿಗೆ ಈ ಜಾಗ ಈಗ್ಲೂ ಇಷ್ಟ. ನಾವಂತು ಆ ದಾರೀಲಿ ಹೊದ್ರೆ ಡ್ಯಾಂ ನೋಡೀನೆ ಮುಂದೆ ಹೋಗೋದು. ನಮ್ಮ ಬಾಲ್ಯದ ನೆನಪು ಹೇಗ್ ತಾನೆ ಮರೆಯೊಕೆ ಆಗುತ್ತೆ?

Gajanuru Dam Shimoga:

Gajanuru Dam Shimoga
Gajanuru Dam Shimoga

Gajanuru is a small village 12 kms from Shivamogga. Gajanuru dam is comes after the village premises. Personally I have lot of memories with Ganajuru dam Shimoga. Being local I spent my childhood in Shimoga. So our routine was to visit Gajanuru once in two weeks atleast. My dad used to take us to the Dam on Sundays. Gajanuru dam Shimoga was a great picnic spot also a weekend spot for shimoga people. Even now also Gajanuru is a good weekend spot near Shimoga.

Dam is constructed over the river Tunga-considered as sweetest water in the world.

Also read TungaBhadra river origin  https://shimogasiri.com/tungabhadra-river-shivamogga-district/

We used to ask our father, ofcourse a stupid question,Papa what happens if a bomb blasts over the dam? My father used to tell me the same answer whenever I ask the same question. His answer was entire shimoga city will get drown under water. Such a stupid question!! Isn’t it?

Well Gajanuru dam was constructed by Mysore Construction company in  the year 1972. The length of the dam is 770m, still way is 334m & capacity of the dam is 533.24m .

Gajanuru Dam Bridge

Gajanuru dam has 22 gates. Usually gates will open during mansoon if the flow of water is more due to rain. Dam water is mostly used for irrigation purpose.

Recently dam is renovated and the entry is restricted due to safety purpose. If you have permission from higher officers you can get an entry to the dam. So the number of tourists who were visiting the dam has been reduced due to the restriction.

But still we people of Shimoga, visit Gajanuru dam once in a month atleast. How can we forget our memory? Right?

If you are passing by Gajanuru village, Take a break & visit the dam, The entry is restricted only to go on the bridge. But can spend one hour as the dam surrounding is maintained well.

Timings to visit the dam:

Morning 10am to 6pm.

Leave a Comment

eighteen + 3 =

ShimogaSiri

K R Puram

Shivamogga

Karnataka

577202

9611875511