Dasara elephants Complete details

Now read this both in Kannada & English

ಮೈಸೂರು ದಸರಾ ಆನೆಗಳ ಸಂಪೂರ್ಣ ಮಾಹಿತಿ :

Mysore Palace
Mysore Palace

ನಮಗೆಲ್ಲ ಗೊತ್ತಿರೋ ಹಾಗೆ ಮೈಸೂರು ದಸರಾ ಶುರು ಆಗಿ 400 ವರ್ಷಗಳೇ ಆಗಿವೆ . ಮೈಸೂರು ದಸರಾ ಅಂದ್ರೆ ಇಡೀ ನಮ್ಮ ಕರ್ನಾಟಕದಲ್ಲೇ ಒಂದು ದೊಡ್ಡ ಹಬ್ಬ. ಇದೆ ಕಾರಣಕ್ಕೆ ದಸರಾವನ್ನು ನಾಡಹಬ್ಬ ಅಂತಾನೆ ಕರೀತಾರೆ.

ದಸರಾ ಮೈಸೂರಿನಲ್ಲಿ ಜೋರಾದ್ರು ಮೈಸೂರು ದಸರಾ ನೋಡೋ ಸಂಭ್ರಮ ಇಡೀ ಕರ್ನಾಟಕಕ್ಕೆ. ಮೈಸೂರಿನಲ್ಲಿ ಇರೋರು ಅದೃಷ್ಟವಂತರು ಬಿಡಿ .  ಪ್ರತೀ ವರ್ಷಅದ್ದೂರಿ ದಸರಾ ನೋಡಬಹುದು. ಆದರೆ ಮೈಸೂರಿನಲ್ಲಿ ಇಲ್ಲದೆ  ಇರೋರಿಗೆ ಟಿವಿ ನೇ ಗತಿ.

ಮೈಸೂರು ದಸರಾದಲ್ಲಿ ಜಂಬೂ ಸವರಿ ಸೆಂಟರ್ ಆಫ್ ಅಟ್ರಾಕ್ಷನ್. ಚಿಕ್ಕ ಮಕ್ಳಳಿಂದ ಹಿಡಿದು ದೊಡ್ಡವರ ವರೆಗೂ ಜಂಬೂ ಸವಾರಿ ನೋಡೋದಂದ್ರೆ ಖುಷಿನೇ.ಹಾಗಿದ್ಮೇಲೆ 800ಕೆಜಿ ಇರೋ ಬಂಗಾರದ ಅಂಬಾರಿಯನ್ನ ಹೊರೋ ಆನೆಗಳ ಬಗ್ಗೆ ನಾವ್ ತಿಳ್ಕದುಕೊಳ್ಳಲೇ ಬೇಕು. ಆನೆಗಳಿಗೆ ಹೇಗ್ ತರಬೇತಿ ಕೊಡ್ತಾರೆ , ಎಲ್ಲಿತರಬೇತಿ ನಡಿಯತ್ತೆ , ಆನೆಗಳಿಗೆ ಏನ್ ಆಹಾರ ಕೊಡ್ತಾರೆ , ಎಷ್ಟು ದಿನ ಮುಂಚೆ ಮೈಸೂರಿಗೆ ಆನೆಗಳು ಬರ್ತವೆ, ಆನೆಗಳಿಗೆ ಯಾವ ಭಾಷೆ ಅರ್ಥ ಆಗುತ್ತೆ , ಅವುಗಳದಿನಚರಿ ಏನು ಇದನ್ನೆಲ್ಲಾ ನಾವು ತಿಳಿದುಕೊಳ್ಳಲೇ ಬೇಕು ಅಲ್ವ . ಹಾಗಾದ್ರೆ ಕೆಳಗ್ ಓದಿ

ಗಜಪಯಣ :

Gajapade

ಈ ಬಾರಿಯ ದಸರಾ ಶುರು ಆಗೋಕೆ ಇನ್ನೆರಡು ದಿನ ಬಾಕಿ ಇದೆ . ಅಕ್ಟೋಬರ್ 10ರಿಂದ 19ra ವರೆಗೆ ದಸರಾ ಕಾರ್ಯಕ್ರಮಗಳು ನಡೆಯುತ್ತವೆ. ಈಗಾಗಲೇಆನೆಗಳ 2 ತಂಡ ನಮ್ಮ ಮೈಸೂರಿನ ಅರಮನೆಯಲ್ಲಿ ಬೀಡುಬಿಟ್ಟಿವೆ.

ಆನೆಗಳ ಪಯಣ ಶುರು ಆಗಿದ್ದು ಆಗಸ್ಟ್ 23ರಂದು ಹುಣಸೂರಿನ ನಾಗಪುರದಿಂದ. ಎಲ್ಲಆನೆಗಳಿಗೂ ಲೀಡರ್ ಆದ ಅರ್ಜುನ ಈ ಬಾರಿಯೂ ಅಂಬಾರಿನ ಹೊರುತ್ತಾನೆ. ಅರ್ಜುನ ಸೇರಿ 12 ಆನೆಗಳು ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಇರ್ತವೆ.

ಆನೆಗಳ ಹೆಸರು ಮತ್ತು ಕಂಪ್ಲೀಟ್ ಡೀಟೇಲ್ಸ್ :

Arjuna, Abhimany, Balarama
Arjuna, Abhimany, Balarama

ಅನುಭವ ಅನ್ನೋದು ನಮಗೆ ಮಾತ್ರ ಅಲ್ಲ ಆನೆಗಳಿಗೂ ಅನ್ವಯ ಆಗತ್ತೆ. ದಸರಾ ಮೆರವಣಿಗೆಯಲ್ಲಿ ಅನುಭವ ಇರುವ ಆನೆಗಳಿಗೆ ಮೊದಲ ಆದ್ಯತೆ. ಅವುಆರೋಗ್ಯವಾಗಿರಬೇಕು , ವಯಸ್ಸು 65 ದಾಟಿರಬಾರದು. ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಹಿರಿಯ ಅರಣ್ಯ ಅಧಿಕಾರಿಗಳು ಆಯ್ಕೆ ಮಾಡ್ತಾರೆ.

ಬಲರಾಮ ಮತ್ತು ದ್ರೋಣ ಆನೆಗಳು ತಾಯಿ ಚಾಮುಂಡೇಶ್ವರಿಯನ್ನ ಸತತ 30ವರ್ಷ ಹೊತ್ತಿದ್ದವು. 1998 ರಲ್ಲಿ ನಡೆದ ಕರೆಂಟ್ ಶಾಕ್ ನಿಂದ ದ್ರೋಣನನ್ನುಇದರಿಂದ ಹೊರಗಿಡಲಾಯಿತುಮತ್ತು ದ್ರೋಣನ ಜಾಗಕ್ಕೆ ಬಲರಾಮ ಬಂದಾಯಿತು. 13 ವರ್ಷಗಳ ನಂತರ ಬಲರಾಮನಿಗೆ ನಿವೃತ್ತಿ ಕೊಟ್ಟು 58  ವರ್ಷದ  ಅರ್ಜುನಅಂಬಾರಿಯನ್ನು ಹೊರುತ್ತಿದೆ.

ಅರ್ಜುನ – 58 ವರ್ಷ, 5250 ಕೆ ಜಿ,

ಬಲ್ಲೆ ಆನೆ ಬಿಡಾರ

ಮಾವುತ – ವಿನು , ಕಾವಡಿ – ಸಣ್ಣಪ್ಪ

ದಸರಾ ಅನುಭವ – 19ವರ್ಷ

ಅಭಿಮನ್ಯು – 52 ವರ್ಷ, 4870ಕೆ ಜಿ

ಮತ್ತಿಗೋಡು ಆನೆ ಬಿಡಾರ , ನಾಗರಹೊಳೆ ಡಿವಿಷನ್

ಮಾವುತ – ವಸಂತ, ಕಾವಡಿ – ರಾಜು

ದಸರಾ ಅನುಭವ- 19ವರ್ಷ

ದ್ರೋಣ – 39ವರ್ಷ

ಮತ್ತಿಗೋಡು ಆನೆ ಬಿಡಾರ , ನಾಗರಹೊಳೆ ಡಿವಿಷನ್

ಮಾವುತ- ಗುಂಡ, ಕಾವಡಿ – ರವಿ

ದಸರಾ ಅನುಭವ- NA

ಚೈತ್ರ – 47 ವರ್ಷ

ಎಂ ಹೊಳೆ , ಬಂಡೀಪುರ ಡಿವಿಷನ್

ಮಾವುತ- ಮಹದೇವ್, ಕಾವಡಿ- ಅಣ್ಣಯ್ಯ

ದಸರಾ ಅನುಭವ- 3ವರ್ಷ

ಬಲರಾಮ – 60ವರ್ಷ , 4990 ಕೆ ಜಿ

ಮತ್ತಿಗೋಡು ಆನೆ ಬಿಡಾರ , ನಾಗರಹೊಳೆ ಡಿವಿಷನ್

ಮಾವುತ – ತಿಮ್ಮ , ಕಾವಡಿ – ಪಾಪು

ದಸರಾ ಅನುಭವ – 22 ವರ್ಷ

ಗೋಪಾಲಸ್ವಾಮಿ – 36ವರ್ಷ, 3242 ಕೆ ಜಿ

ಮತ್ತಿಗೋಡು ಆನೆ ಬಿಡಾರ , ನಾಗರಹೊಳೆ ಡಿವಿಷನ್

ಮಾವುತ- ಶರಾಜನ್, ಕಾವಡಿ – ಮಂಜು

ದಸರಾ ಅನುಭವ- 7 ವರ್ಷ

ವರಲಕ್ಷ್ಮಿ – 62 ವರ್ಷ , 4970 ಕೆ ಜಿ

ಮತ್ತಿಗೋಡು ಆನೆ ಬಿಡಾರ , ನಾಗರಹೋಳೆ ಡಿವಿಷನ್

ಮಾವುತ- ರವಿ , ಕಾವಡಿ- ಮಾದೇಶ್

ದಸರಾ ಅನುಭವ – 9 ವರ್ಷ

ಧನಂಜಯ – 37 ವರ್ಷ

ದುಬಾರೆ ಆನೆ ಬಿಡಾರ , ಮಡಿಕೇರಿ

ಮಾವುತ- ಭಾಸ್ಕರ್, ಕಾವಡಿ – ಶೂನ್ಯ

ದಸರಾ ಅನುಭವ- NA

ಗೋಪಿ – 36 ವರ್ಷ , 3710 ಕೆ ಜಿ

ದುಬಾರೆ ಆನೆ ಬಿಡಾರ , ಮಡಿಕೇರಿ

ಮಾವುತ – ನವೀದ್ , ಕಾವಡಿ- ಅಪ್ಪಯ್ಯ

ದಸರಾ ಅನುಭವ – 8 ವರ್ಷ

ಕಾವೇರಿ – 40 ವರ್ಷ , 2820 ಕೆ ಜಿ

ದುಬಾರೆ , ಮಡಿಕೇರಿ

ಮಾವುತ – ದೋಬಿ

ದಸರಾ ಅನುಭವ – 7 ವರ್ಷ

ವಿಜಯ- 61 ವರ್ಷ , 2779 ಕೆ ಜಿ

ದುಬಾರೆ , ಮಡಿಕೇರಿ

ಮಾವುತ – ಭೋಜಪ್ಪ , ಕಾವಡಿ – ಭರತ್

ದಸರಾ ಅನುಭವ- 11 ವರ್ಷ

ವಿಕ್ರಮ – 45 ವರ್ಷ, 3820ಕೆ ಜಿ

ದುಬಾರೆ, ಮಡಿಕೇರಿ

ಮಾವುತ- ಪುಟ್ಟ, ಕಾವಡಿ – ಹೇಮಂತ್

ದಸರಾ ಅನುಭವ – 14 ವರ್ಷ

ಆನೆಗಳ ಭಾಷೆ :

Arjuna
Arjuna

ನಮ್ಮ ಆನೆಗಳು ಮಾತಾಡೋ ಭಾಷೆ ಯಾವ್ದು ಗೊತ್ತ ? ಇದೇನು ಆನೆಗಳು ಮಾತಾಡ್ತವಾ ಅಂತ ಯೋಚ್ನೆ ಮಾಡ್ತಿದೀರಾ, ಅಂದರೆ  ಆನೆಗಳಿಗೆ ಅರ್ಥ ಆಗೋ ಭಾಷೆಉರ್ದು ಅಂತೆ. ಮಾವುತರು ಆನೆಗಳಿಗೆ ಉರ್ದೂ ಭಾಷೇನಲ್ಲೇ ತರಬೇತಿ ಕೊಟ್ಟಿರೋದ್ರಿಂದ ಅವಕ್ಕೆ ಉರ್ದೂ ಭಾಷೆ ಮಾತ್ರ ಅರ್ಥ ಆಗತ್ತಂತೆ. ಉರ್ದೂ ಭಾಷೆನಅರ್ಥ ಮಾಡ್ಕೊಳೋಕೆ ಆನೆಗಳಿಗೆ 3 ತಿಂಗಳಿನಿಂದ ಒಂದು ವರ್ಷದವರೆಗೂ ಸಮಯ ಬೇಕಂತೆ

ಖರ್ಚು ವೆಚ್ಚ :

Balarama
Balarama

ದಸರಾ ಅಂದ ತಕ್ಷಣ ಕಣ್ಣ್ ಮುಂದೆ ಬರೋದು ಅಂಬಾರಿ ಹೊತ್ತಿರೋ ಆನೆ , ನಮ್ಮ ಈ ದಸರಾ ಆನೆಗಳಿಗೆ ಎಷ್ಟು ಖರ್ಚು ಮಾಡ್ತಾರೆ ಗೊತ್ತಾ ? ಬರೋಬ್ಬರಿ 25 ಲಕ್ಷರೂಪಾಯಿ. ಆನೆಗಳಿಗೆ ಆಹಾರ ,ಮಾವುತರ ಖರ್ಚು, ಬಟ್ಟೆಬರೆ , ಅವರ ಕುಟುಂಬ ಹೀಗೆ ಎಲ್ಲ ಸೇರಿ 25ಲಕ್ಷ ಖರ್ಚಾಗತ್ತಂತೆ. ಅರಣ್ಯ ಇಲಾಖೆ ಇಂದ ಆನೆಗಳಿಗೆ ,ಮಾವುತರಿಗೆ ಅವರ ಕುಟುಂಬಕ್ಕೆ 89ಲಕ್ಷ ಇನ್ಶೂರೆನ್ಸ್ ಪಾಲಿಸಿ ಇದ್ಯಂತೆ. ಅದರಲ್ಲಿ 35 ಲಕ್ಷ ಆನೆಗೆ , 30ಲಕ್ಷ ಏನಾದ್ರು ಪ್ರಾಪರ್ಟಿ ಡ್ಯಾಮೇಜ್ ಆದ್ರೆ ಮತ್ತು 24ಲಕ್ಷಮಾವುತರ ಕುಟುಂಬಕ್ಕೆ.

ಆನೆಗಳ ಮನೆ :

Elephants at palace premises
Elephants at palace premises

ದಸರಾ ಸಮಯದಲ್ಲೇನೋ ನಮ್ ಆನೆಗಳಿಗೆ ಅರಮನೆಯೇ ಮನೆ , ಆದರೆ ದಸರಾ ಮುಗಿದಮೇಲೆ ಅವರವರ ಮನೆಗಳಿಗೆ ಹೋಗ್ಬೇಕಲ್ಲ . ದಸರಾ ನಂತರ ಈನಮ್ಮ ಆನೆಗಳು ಎಲ್ಲಿರ್ತವೆ ಗೊತ್ತ ? ಅವುಗಳ ಆನೆ ಬಿಡಾರದಲ್ಲಿ . ದಸರಾ ನಂತರ ವರ್ಷ ಪೂರ್ತಿ ಈ ಆನೆಗಳಿಗೆ ತರಬೇತಿ ಕೊಡ್ತಾರಂತೆ . ಅದಕ್ಕೊಸ್ಕರಣೆ ಕೆಲವುಆನೆ ಬಿಡಾರಗಳು ಅಂದರೆ elephant camp ಗಳು ಇವೆ. ದುಬಾರೆ , ಹೆಬ್ಬಾಳ , ಮೂರ್ಕಲ್ , ಕಲ್ಲಾಳ , ನಾಗರಹೊಳೆ , ವೀರನಹೊಸಹಳ್ಳಿ , ಮೆಥಿಕುಪ್ಪೆ ,ಸುಂಕದಕಟ್ಟೆ , ಬಂಡೀಪುರ , ಮೂಲೆಹೊಳೆ , ಕೆ ಗುಡಿ ಮತ್ತು ಭೀಮೇಶ್ವರಿ . 240 ಮಾವುತರು ಮತ್ತು ಕವಾಡಿಗಳು ಆನೆಗಳ ತರಬೇತಿ ಮತ್ತು ಯೋಗಕ್ಷೇಮನೋಡ್ಕೋತಾರೆ.

ರಾಯಲ್ ಆಹಾರ :

ಆನೆ ಬಿಡಾರದಲ್ಲಿ ಆನೆಗಳಿಗೆ ರಾಗಿ ಮುದ್ದೆ ಮತ್ತು ಕೆಲವು ಕಾಲುಗಳನ್ನ ಸೇರಿಸಿ ಆಹಾರ ಕೊಡಲಾಗುತ್ತೆ . ಆದರೆ ದಸರಾಕ್ಕೆ ಮೈಸೂರಿಗೆ ಬಂದಾಗ ಅವಕ್ಕೆಲ್ಲ ರಾಯಲ್ಟ್ರೀಟ್ಮೆಂಟ್. ರಾಯಲ್ ಊರು ಅಂದ್ರೆ ಕೇಳ್ಬೇಕಾ ಎಲ್ಲ ರಾಯಲ್ ಆಗೇ ಇರತ್ತೆ. ಉದ್ದಿನಬೇಳೆ, ಹೆಸರುಬೇಳೆ , ಅಕ್ಕಿ, ಗೋದಿ, ಈರುಳ್ಳಿ ಮತ್ತು ಬೇರೆ ರೀತಿಯತರಕಾರಿಗಳನ್ನು ನೀಡಲಾಗುತ್ತೆ. ದಿನ ತರಬೇತಿ ಮುಗಿದ ನಂತರ ಬೆಲ್ಲ, ಕಾಯಿ , ಕಡಲೆಬೀಜ , ಅನ್ನ , ಕಬ್ಬು ಮತ್ತು ಉಪ್ಪು ಸೇರಿಸಿ ಕೊಡಲಾಗುತ್ತೆ. ಈ ಆಹಾರಗಳನ್ನದಿನಕ್ಕೆ ಎರಡು ಬಾರಿ ಕೊಡಲಾಗುತ್ತೆ . ಅದಲ್ಲದೆ ಕೆಲವು ಮರದ ಎಲೆಗಳನ್ನು ಸಹ ಆಹಾರವಾಗಿ ನೀಡುತ್ತಾರೆ. ಬರಿ ಆಹಾರ ಮಾತ್ರವಲ್ಲದೆ ವಿಟಮಿನ್ಸ್ ನ ಸಹಇಂಜೆಕ್ಷನ್ ಮೂಲಕ ಆನೆಗಳಿಗೆ ಕೊಡಲಾಗುತ್ತೆ. ಕಾಡಿನಲ್ಲಿ ಒಂದು ಆನೆಯು ಪ್ರತಿ ದಿನಕ್ಕೆ 400ಕೆ ಜಿ ಆಹಾರವನ್ನು ಸೇವಿಸುತ್ತದೆಯಂತೆ. ಮೈಸೂರು ದಸರಾಕ್ಕೆಬಂದಾಗ ಅವು ತಿನ್ನುವ ಆಹಾರಕ್ಕಿಂತ ಹೆಚ್ಚಿನ ಪೌಷ್ಟಿಕಾಂಶ ಇರುವ ಆಹಾರವನ್ನು ಇಲ್ಲಿ ಕೊಡ್ತಾರೆ.

ಆನೆಗಳ ದಸರಾ ದಿನಚರಿ:

ಬೆಳಿಗ್ಗೆ 6.30 ಗಂಟೆ : ಬೆಳಗಿನ ತಿಂಡಿ , ಬೇಯಿಸಿದ ತರಕಾರಿ ಮತ್ತು ಬೇಳೆಕಾಳುಗಳು

7.30 ಗಂಟೆ :12 ಆನೆಗಳನ್ನು 5ಕಿ ಮೀ ವಾಕಿಂಗ್ ಕರೆದುಕೊಂಡು ಹೋಗುತ್ತಾರೆ , ಹಾಗೆ ಹೋಗುವಾಗ ಅವುಗಳ ಬೆನ್ನಮೇಲೆ ಭಾರವನ್ನು ಹೊರೆಸಿರುತ್ತಾರೆ.

Dasara elephant Balarama gets bath 
Dasara elephant Balarama gets bath

10.30 ಗಂಟೆ :ಆನೆಗಳಿಗೆ ತಣ್ಣೀರಿನಲ್ಲಿ ಸ್ನಾನ ಮಾಡಿಸಲಾಗುತ್ತದೆ . ನಂತರ ಹುಲ್ಲು ಮತ್ತು ಆಲದ ಎಲೆಗಳನ್ನು ತಿನ್ನಲು ಕೊಡಲಾಗುತ್ತದೆ. ಇದಾದ ನಂತರ ಅವುಚೆನ್ನಾಗಿ ನಿದ್ದೆ ಮಾಡುತ್ತವೆ.

ಸಂಜೆ 4ಗಂಟೆ: ಸಂಜೆ ಅವುಗಳಿಗೆ ಸ್ನಾಕ್ ಟೈಮ್ , ಹುಲ್ಲು ಮತ್ತು ಬೆಲ್ಲ ಮತ್ತು ತೆಂಗಿನಕಾಯಿಯನ್ನು ನೀಡಲಾಗುತ್ತದೆ.

ಸಂಜೆ 6 ಗಂಟೆ : ಮತ್ತೊಂದು ರೌಂಡ್ ವಾಕಿಂಗ್

7 ಗಂಟೆ: ರಾತ್ರಿ ಊಟ , ರಾಗಿ ಮುದ್ದೆ ಜೊತೆ ಧನ್ಯಸಹಿತ.

ಮಾವುತರು ಮತ್ತು ಕಾವಾಡಿಗಳು:

ದಸರಾ ಮೆರವಣಿಗೆಯ ಪ್ರಮುಖ ಆಕರ್ಷಣೆ ಜಂಬೂ ಸವಾರಿಯೇ ಆದರೂ ಅದರ ಪೂರ್ತಿ ಜವಾಬ್ದಾರಿ ಮತ್ತು  ಕ್ರೆಡಿಟ್ ಸಲ್ಲಬೇಕಾಗಿರುವುದು ಮಾವುತರು ಮತ್ತುಕಾವಾಡಿಗಳಿಗೆ . ಅವರು ಆನೆಗಳಿಗೆ ಚಿಕ್ಕದಿರುವಾಗಿನಿಂದಲೇ ತರಬೇತಿ ಆರಂಭಿಸಿರುತ್ತಾರೆ. ಆನೆಗಳು ಕೇಳುವುದು ಅದರ ಮಾವುತನ ಮಾತನ್ನು ಮಾತ್ರ .ಮಾವುತರು ಮತ್ತು ಕಾವಾಡಿಗಳು ಸಕ್ರೆಬೈಲು ಮತ್ತು ದುಬಾರಿಅಲ್ಲಿರುವ ಮುಸ್ಲಿಂ ಟ್ರೈಬಲ್ ಕಂಮ್ಯುನಿಟಿಗೆ ಸೇರಿದವರಾಗಿರುತ್ತಾರೆ.

ಆನೆಗಳನ್ನ ಪಳಗಿಸೋದು ಸುಲಭದ ಕೆಲಸವಲ್ಲ . ಅಷ್ಟು ದೊಡ್ಡ ಗಾತ್ರದ ಪ್ರಾಣಿಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕಾದರೆ ಮಾವುತರ ಪ್ರಾಣಕ್ಕೆ ಅಪಾಯ ಅಂತೂ ಇದ್ದೆಇರುತ್ತೆ. ಆನೆ ಗಳನ್ನ ಪಳಗಿಸೋ ಕಲೆ ಅವರ ರಕ್ತದಲ್ಲೇ ಬಂದಿರುತ್ತದೆ. ಆದರೆ ಇದಕ್ಕೆ ಅವರಿಗೆ ಸಿಗುವ ವೇತನವು ತುಂಬಾ ಕಡಿಮೆಯೇ.

English Version:

Dasara elephants: complete details:

Well We all know that The center of attraction in Mysore Dasara from 400years is the elephants that carry “Hawda” in Kannada its “Ambari” during Vijayadashami. We all usually see the procession in TV & some lucky people will get to watch directly.

But now here we will know about the elephants which performs in Dasara procession. We will know about elephants food habits, about its training, how & where elephants are trained & brought to mysore and not the least about the Mawuths who takes care of elephants.

Gajapayana :

This year Dasara is from Oct 10th to 19th. For mysore Dasara celebration  Gajapayana started from Aug 23rd.   Arjuna, the leader of the 12 elephants which will be participating in this year’s Dasara festivities, is among the six elephants left from Nagapura Tribal Hamlet in Hunsur taluk.

On Aug.23, cultural programmes were held at Nagapura Tribal hamlet from where the Gajapayana started with tribal children and Tibetans presenting their traditional dance. Apart from Arjuna, Balarama, Abhimanyu, Cauvery, Chaitra and Gopi or Vikram left for Mysuru in the first batch as these six elephants have more responsibilities during Dasara festivities. Chaitra, which is housed in Bandipur Elephant Camp directly came to Mysuru, while the other elephants are left  from Nagapura.

Money spent of elephants:

Approximately Rs 25 lakh is spent on food, clothing, accommodation and miscellaneous expenditure of elephants, their mahouts and families for 2 months. The Forest department takes an insurance policy worth Rs 89 lakhs – Rs 35 lakhs for elephants, Rs 30 lakhs for property damages and Rs 24 lakhs for mahouts

The elephants:

The elephants are named in Kannada and usually have the names of Hindu mythological and historical figures. Elephants Drona and Balarama carried the idol of deity Chamundeshwari housed in the Golden Howdah for a combined total of 30 years. Balarama took up the responsibility after Drona was electrocuted in 1998 at Nagarahole National Park. Balarama has been granted retirement after 13 years. The 52-year-old Arjuna replaced Balarama and carried the Golden Howdah during the Dasara 2012 Jamboo Sawari procession at Mysore on 24 October 2012. The other elephants participating in the event are Bharatha, Kanthi, Gayathri, Kokila, Sri Rama, Abhimanyu, Gajendra, Biligiriranga, Vikram, Varalakshmi, and Sarojini.

The abode:

The abode of the elephants during the rest of the year is usually their training camps and the surrounding National Parks. There are around 70 tamed elephants in exclusive camps at Dubare, Hebballa, Moorkal, Kallalla, Nagarahole, Veeranahosahalli, Metikuppe, Sunkadakatte, Bandipur, Moolehole, K. Gudi and Bheemeshwari. About 240 mahouts and kavadis take care of the needs of these elephants and develop a bond with them.

Dasara elephants & Urdu:

Urdu is the language used to communicate with the tuskers. An elephant takes 3 months to a year to pick up the language. Some terms used by handlers are,

2018 Jambo savari:

Experience is the most important part when it comes to selecting the tuskers. Also they need to be healthy, have a calm mind, and cannot be older than 65. The final selection of elephants is done by a committee comprising directors of National Parks and regional senior forest officers.

List of elephants & details:

  • Arjuna- 58 years, 5250kgs

Balle elephant camp,

Mahout- Vinu, Kavadi- Sannappa

Years of experience- 19years

  • Abhimanyu-52 years, 4870kgs

Mattigodu elephant camp, Nagarahole division

Mahout- Vasanta, Kavadi- Raju

Years of experience- 19years

  • Balarama- 60years, 4990kgs

MAttigodu elephant camp, Nagarahole division

Mahout- Thimma, KAvadi- Papu

Years of experience- 22years

  • Drona- 39years,

Mattigodu elephant camp, NAgarahole div

Mahout- Gunda, Kavadi- Ravi

Years of experience-NA

  • Chaitra- 47years

M Hole Bandipura div

Mahout- Mahadev, Kavadi- Annayya

Years of experience- 3years

  • Gopala Swamy- 36years, 3242kgs

Mattigodu elephant camp, Nagarahole div

Mahout- Shrajan, KAvadi-  Manju

Years of experience- 7years

  • Varalakshmi- 62years, 4970kgs

Mattigodu elephant camp, Nagarahole div

Mahout- Rani J K, Kavadi- Madesh

Years of experience- 9years

  • Dhanjaya-37years,

Dubare elephant camp, MAdikeri

Mahout- Bhaskar J C, Kavadi- Shoonya J B

Years of experience- NA

  • Gopi- 36years, 3710kgs

Dubare elephant camp, Madikeri

Mahout- Naveed, Kavadi- Appayya

Years of experience- 8years

  • Kaveri-40years, 2820kgs

Dubare elephant camp, Madikeri

Mahout- Dhobi

Years of experience- 7years

  • Vijaya-61 years, 2770kgs

Dubare elephant camp. Madikeri

Mahout- Bhojappa, Kavadi-Bharath BP

Years of Experience- 11years

  • Vikrama- 45years, 3820kgs

Dubare elephant camp, Madikeri

Mahout- Putta, Kavadi- Hemanth

Years of experience- 14years

Royal Food:

At elephant camps elephants usually eat ‘Ragi mudde’, A mixture of ragi , horse gram & fodder branches. But when they are royal guests in the royal city of Mysore preparing for Dasara, they are served with ‘royal’ food till the grand Dasara finale – Jamboo Savari.

The elephants get to eat urud dal, green gramwheat, boiled riceonion and vegetables in the mornings and evenings. They get ricegroundnutcoconutjaggery and sugarcane with some salt to add taste to the diet after they return from their regular rehearsals. This food is served twice a day. They also get branch fodder like banyan leaves.

Extra care is taken while serving food to the jumbos. High-calorie and protein-rich food is served to the elephants to improve their physical fitness. They carry a lot of weight at the procession and for that, they need strength. Hence they are fed with rich food. The food served in the morning is laced with pure butter for flavour.

 Besides nutritious food, vitamin doses are also injected so as to balance the diet. An elephant eats 400 kilograms of fodder in a day in the forests. The food served to them in Mysorecontains high calories and is more than what they eat in the jungles.

A Day In The Life of Dasara Elephants

  • 6:30 am: Breakfast of special ration of boiled vegetables and cereals with dietary supplements.
  • 7:30 am: The 12 elephants are taken for a walk around a 5 km long route. All the elephants, including Arjuna, carry heavy weights on their backs.
  • 10:30 am: The tuskers are given a cold water bath before being served a meal of paddy-filled haystack balls and banyan leaves. They have a good sleep after this meal.
  • 4 pm: It’s snack time with paddy-filled haystack balls along with jaggery and coconut.
  • 6 pm: The procession leaves for their second route rehearsal.
  • 7 pm: Dinner is a meal comprising few kilos of special ration balls.

Mahouts and Kawadis

These are the real men behind the success of the pachyderm at the Dasara. The elephant trainer/Mahouts and his assistant/Kawadi train the animals since childhood, and handle them with ease.  They belong to the tribal Muslim community from Sakrebailu and Dubare forest areas.

One can say that the skill of taming and controlling them is in their genes. This hard working and risky job does not pay them much. Many of them are on daily wages, meagerly paid and no safe conditions. Handling  the big jumbos and training them to perform during the crowded Dasara is not easy, there is an acute shortage of the mahouts.

Leave a Comment

two × one =

ShimogaSiri

K R Puram

Shivamogga

Karnataka

577202

9611875511