Dasara elephants Complete details

Now read this both in Kannada & English ಮೈಸೂರು ದಸರಾ ಆನೆಗಳ ಸಂಪೂರ್ಣ ಮಾಹಿತಿ : ನಮಗೆಲ್ಲ ಗೊತ್ತಿರೋ ಹಾಗೆ ಮೈಸೂರು ದಸರಾ ಶುರು ಆಗಿ 400 ವರ್ಷಗಳೇ ಆಗಿವೆ . ಮೈಸೂರು ದಸರಾ ಅಂದ್ರೆ ಇಡೀ ನಮ್ಮ ಕರ್ನಾಟಕದಲ್ಲೇ ಒಂದು ದೊಡ್ಡ ಹಬ್ಬ. ಇದೆ ಕಾರಣಕ್ಕೆ ದಸರಾವನ್ನು ನಾಡಹಬ್ಬ ಅಂತಾನೆ ಕರೀತಾರೆ. ದಸರಾ ಮೈಸೂರಿನಲ್ಲಿ ಜೋರಾದ್ರು ಮೈಸೂರು ದಸರಾ ನೋಡೋ ಸಂಭ್ರಮ ಇಡೀ ಕರ್ನಾಟಕಕ್ಕೆ. ಮೈಸೂರಿನಲ್ಲಿ ಇರೋರು ಅದೃಷ್ಟವಂತರು ಬಿಡಿ .  ಪ್ರತೀ ವರ್ಷಅದ್ದೂರಿ ದಸರಾ ನೋಡಬಹುದು. ಆದರೆ ಮೈಸೂರಿನಲ್ಲಿ ಇಲ್ಲದೆ  ಇರೋರಿಗೆ ಟಿವಿ ನೇ ಗತಿ. ಮೈಸೂರು ದಸರಾದಲ್ಲಿ ಜಂಬೂ ಸವರಿ ಸೆಂಟರ್ ಆಫ್ ಅಟ್ರಾಕ್ಷನ್. ಚಿಕ್ಕ ಮಕ್ಳಳಿಂದ ಹಿಡಿದು ದೊಡ್ಡವರ ವರೆಗೂ ಜಂಬೂ ಸವಾರಿ ನೋಡೋದಂದ್ರೆ ಖುಷಿನೇ.ಹಾಗಿದ್ಮೇಲೆ 800ಕೆಜಿ ಇರೋ ಬಂಗಾರದ ಅಂಬಾರಿಯನ್ನ ಹೊರೋ ಆನೆಗಳ ಬಗ್ಗೆ ನಾವ್ ತಿಳ್ಕದುಕೊಳ್ಳಲೇ ಬೇಕು. ಆನೆಗಳಿಗೆ ಹೇಗ್ ತರಬೇತಿ ಕೊಡ್ತಾರೆ , ಎಲ್ಲಿತರಬೇತಿ ನಡಿಯತ್ತೆ , ಆನೆಗಳಿಗೆ ಏನ್ ಆಹಾರ ಕೊಡ್ತಾರೆ , ಎಷ್ಟು ದಿನ ಮುಂಚೆ ಮೈಸೂರಿಗೆ ಆನೆಗಳು ಬರ್ತವೆ, ಆನೆಗಳಿಗೆ ಯಾವ ಭಾಷೆ ಅರ್ಥ ಆಗುತ್ತೆ , ಅವುಗಳದಿನಚರಿ ಏನು ಇದನ್ನೆಲ್ಲಾ ನಾವು ತಿಳಿದುಕೊಳ್ಳಲೇ ಬೇಕು ಅಲ್ವ . ಹಾಗಾದ್ರೆ ಕೆಳಗ್ ಓದಿ ಗಜಪಯಣ : ಈ ಬಾರಿಯ ದಸರಾ ಶುರು ಆಗೋಕೆ ಇನ್ನೆರಡು ದಿನ ಬಾಕಿ ಇದೆ . ಅಕ್ಟೋಬರ್ 10ರಿಂದ 19ra ವರೆಗೆ ದಸರಾ ಕಾರ್ಯಕ್ರಮಗಳು ನಡೆಯುತ್ತವೆ. ಈಗಾಗಲೇಆನೆಗಳ 2 ತಂಡ ನಮ್ಮ ಮೈಸೂರಿನ ಅರಮನೆಯಲ್ಲಿ ಬೀಡುಬಿಟ್ಟಿವೆ. ಆನೆಗಳ ಪಯಣ ಶುರು ಆಗಿದ್ದು ಆಗಸ್ಟ್ 23ರಂದು ಹುಣಸೂರಿನ ನಾಗಪುರದಿಂದ. ಎಲ್ಲಆನೆಗಳಿಗೂ ಲೀಡರ್ ಆದ ಅರ್ಜುನ ಈ ಬಾರಿಯೂ ಅಂಬಾರಿನ ಹೊರುತ್ತಾನೆ. ಅರ್ಜುನ ಸೇರಿ 12 ಆನೆಗಳು ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಇರ್ತವೆ. ಆನೆಗಳ ಹೆಸರು ಮತ್ತು ಕಂಪ್ಲೀಟ್ ಡೀಟೇಲ್ಸ್ : ಅನುಭವ ಅನ್ನೋದು ನಮಗೆ ಮಾತ್ರ ಅಲ್ಲ ಆನೆಗಳಿಗೂ ಅನ್ವಯ ಆಗತ್ತೆ. ದಸರಾ ಮೆರವಣಿಗೆಯಲ್ಲಿ ಅನುಭವ ಇರುವ ಆನೆಗಳಿಗೆ ಮೊದಲ ಆದ್ಯತೆ. ಅವುಆರೋಗ್ಯವಾಗಿರಬೇಕು , ವಯಸ್ಸು 65 ದಾಟಿರಬಾರದು. ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಹಿರಿಯ ಅರಣ್ಯ ಅಧಿಕಾರಿಗಳು ಆಯ್ಕೆ ಮಾಡ್ತಾರೆ. ಬಲರಾಮ ಮತ್ತು ದ್ರೋಣ ಆನೆಗಳು ತಾಯಿ ಚಾಮುಂಡೇಶ್ವರಿಯನ್ನ ಸತತ 30ವರ್ಷ ಹೊತ್ತಿದ್ದವು. 1998 ರಲ್ಲಿ ನಡೆದ ಕರೆಂಟ್ ಶಾಕ್ ನಿಂದ ದ್ರೋಣನನ್ನುಇದರಿಂದ ಹೊರಗಿಡಲಾಯಿತುಮತ್ತು ದ್ರೋಣನ ಜಾಗಕ್ಕೆ ಬಲರಾಮ ಬಂದಾಯಿತು. 13 ವರ್ಷಗಳ ನಂತರ ಬಲರಾಮನಿಗೆ ನಿವೃತ್ತಿ ಕೊಟ್ಟು 58  ವರ್ಷದ  ಅರ್ಜುನಅಂಬಾರಿಯನ್ನು ಹೊರುತ್ತಿದೆ. ಅರ್ಜುನ – 58 ವರ್ಷ, 5250 ಕೆ ಜಿ, ಬಲ್ಲೆ ಆನೆ ಬಿಡಾರ ಮಾವುತ – ವಿನು , ಕಾವಡಿ – ಸಣ್ಣಪ್ಪ ದಸರಾ ಅನುಭವ – 19ವರ್ಷ ಅಭಿಮನ್ಯು – 52 ವರ್ಷ, 4870ಕೆ ಜಿ ಮತ್ತಿಗೋಡು ಆನೆ ಬಿಡಾರ , ನಾಗರಹೊಳೆ ಡಿವಿಷನ್ ಮಾವುತ – ವಸಂತ, ಕಾವಡಿ – ರಾಜು ದಸರಾ ಅನುಭವ- 19ವರ್ಷ ದ್ರೋಣ – 39ವರ್ಷ ಮತ್ತಿಗೋಡು ಆನೆ ಬಿಡಾರ , ನಾಗರಹೊಳೆ ಡಿವಿಷನ್ ಮಾವುತ- ಗುಂಡ, ಕಾವಡಿ – ರವಿ ದಸರಾ ಅನುಭವ- NA ಚೈತ್ರ – 47 ವರ್ಷ ಎಂ ಹೊಳೆ , ಬಂಡೀಪುರ ಡಿವಿಷನ್ ಮಾವುತ- ಮಹದೇವ್, ಕಾವಡಿ- ಅಣ್ಣಯ್ಯ ದಸರಾ ಅನುಭವ- 3ವರ್ಷ ಬಲರಾಮ – 60ವರ್ಷ , 4990 ಕೆ ಜಿ ಮತ್ತಿಗೋಡು ಆನೆ ಬಿಡಾರ , ನಾಗರಹೊಳೆ ಡಿವಿಷನ್ ಮಾವುತ – ತಿಮ್ಮ , ಕಾವಡಿ – ಪಾಪು ದಸರಾ ಅನುಭವ – 22 ವರ್ಷ ಗೋಪಾಲಸ್ವಾಮಿ – … Read moreDasara elephants Complete details

ShimogaSiri

K R Puram

Shivamogga

Karnataka

577202

9611875511