Lakshmi Narasimha Swamy Temple Bhadravathi
Shri Lakshmi Narasimha Swamy Temple Bhadravathi ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ: ಭದ್ರಾವತಿ ಭದ್ರಾವತಿ ಅಂದ ತಕ್ಷಣ ಎಲ್ಲರಿಗು ನೆನಪಾಗೋದು MPM ಮತ್ತು VISL ಕಾರ್ಖಾನೆಗಳು . ಬೆಂಕಿಪುರ , ಉಕ್ಕಿನ ನಗರ ಅಂತಾನೆನಮ್ಮ ಭದ್ರಾವತಿ ಫೇಮಸ್ ಆಗಿರೋದು . ಹಾಗೇನೇ ಭದ್ರಾವತಿಯಲ್ಲಿ ಮತ್ತೊಂದು ಮುಖ್ಯ ಆಕರ್ಷಣೆ ಇದೆ, 13ನೇ ಶತಮಾನದಹೊಯ್ಸಳರ ಕಾಲದ ಶ್ರೀಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ ಇರುವುದು ನಮ್ಮ ಭದ್ರಾವತಿಯಲ್ಲಿ . ಹೌದು ಭದ್ರಾವತಿಯಹಳೆಯನಗರ ಅಂದರೆ old town ಏರಿಯಾ ನಲ್ಲಿರೋ ಈ ದೇವಸ್ಥಾನ ಹೊಯ್ಸಳರ ಕಾಲದ್ದು. ಇತಿಹಾಸ : ಭೂದೇವಿಯು ಹಿರಣ್ಯಾಕ್ಷ ಎಂಬ ರಾಕ್ಷಸನಿಂದ ಅಪಹರಿಸಲ್ಪಟ್ಟಾಗ ಭೂದೇವಿಯನ್ನು ರಕ್ಷಿಸಲು ವಿಷ್ಣುವಿನ ಅವತಾರವಾದ ವರಾಹವುತನ್ನ ಎರಡು ಕೋರೆ ಹಲ್ಲುಗಳಿಂದ ಭೂಮಿಯನ್ನು ಅಗೆಯುತ್ತಾನೆ. ಹೀಗೆ ಅಗೆದಾಗ ಅವನ ಎರಡು ಹಲ್ಲುಗಳಿಂದ ಹುಟ್ಟಿರುವುದೇತುಂಗಾ ಮತ್ತು ಭದ್ರ ನದಿಗಳು ಎಂಬ ಸುಳ್ಳುಕಥೆ ಇದೆ. ಆದರೆ ಅದು ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ತಿಳಿದುಬಂದಿಲ್ಲ. 800ವರ್ಷಕ್ಕೂ ಹಳೆಯದಾದ ದುಷ್ಟ ನಾಶಕ ಶಿಷ್ಟ ರಕ್ಷಕ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಯ ದೇವಸ್ಥಾನವನ್ನು ಹೊಯ್ಸಳರ ರಾಜನಾದವಿಷ್ಣುವರ್ಧನನ ಮೊಮ್ಮಗನಾದ ವೀರನರಸಿಂಹನು ಈ ದೇವಸ್ಥಾನವನ್ನು ಕಟ್ಟಿಸಿದನು ಎಂದು ಇತಿಹಾಸ ಹೇಳುತ್ತದೆ. ವಾಸ್ತುಶಿಲ್ಪ: ಭದ್ರಾವತಿಯ ಶ್ರೀಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ನರಸಿಂಹನು ತನ್ನ ಭಕ್ತನಾದ ಪ್ರಹ್ಲಾದನನ್ನು ಕಾಪಾಡುತ್ತಿರುವಂತೆಕುಳಿತಿರುವ ವಿಗ್ರಹವಿದೆ . ದೇವಸ್ಥಾನಕ್ಕೆ 3ಗೋಪುರಗಳಿದ್ದು ಒಂದು ದಕ್ಷಿಣ, ಉಳಿದ ಎರಡು ಗೋಪುರಗಳು ಉತ್ತರ ಮತ್ತುಪಶ್ಚಿಮದಲ್ಲಿದೆ. ದೇವಸ್ಥಾನದ ಮುಂದೆ ಧ್ವಜ ಸ್ಥಂಭವಿದ್ದು ದೇವಸ್ಥಾನದ ಸುತ್ತಲೂ ಹೊಯ್ಸಳರ ಶೈಲಿಯ ಪ್ರದಕ್ಷಿಣಾ ಪಥವಿದೆ . ದೇವಸ್ಥಾನದಲ್ಲಿ ವಿಶೇಷರೀತಿಯ ಲತೆ ಕಂಬಗಳಿದ್ದು 11 ನೇ ಮತ್ತು 13ನೇ ಶತಮಾನದ ಹೊಯ್ಸಳರ ವಾಸ್ತುಶಿಲ್ಪ ಎದ್ದು ಕಾಣುತ್ತದೆ. ದೇವಸ್ಥಾನದ ಒಳಗೋಡೆಯು ಸಾದವಾಗಿದ್ದು ಹೊರಗೋಡೆಗಳು, ಹೊರಗಿನ ಕೆತ್ತನೆಗಳು ನಕ್ಷತ್ರಾಕಾರದಲ್ಲಿದೆ. ಈ ದೇವಸ್ಥಾನದಲ್ಲಿಲಕ್ಷ್ಮಿ ನರಸಿಂಹ ಮಾತ್ರವಲ್ಲದೆ , ಶ್ರೀ ಕೃಷ್ಣ , ಗಣಪತಿ, ಪರಶುರಾಮ ಮತ್ತು ಶಾರದಾಂಬೆಯ ಮೂರ್ತಿಗಳು ಇದೆ. Know about Bhadravathi https://shimogasiri.com/bhadravathi-the-iron-city/ ಹಬ್ಬಗಳ ಆಚರಣೆ: ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ದಸರಾ , ನವರಾತ್ರಿ ಮತ್ತು ವೈಕುಂಠ ಏಕಾದಶಿಯಂದು ವಿಶೇಷ ಪೂಜೆ ನಡೆಯುತ್ತದೆ.ನವರಾತ್ರಿಯಲ್ಲಿ ದಿನವೂ ಸಹ ದೇವರಿಗೆ ವಿಶೇಷ ಅಲಂಕಾರವಿದ್ದು , ಪೂಜೆಯು ನಡೆಯುತ್ತದೆ. ಉತ್ತರಾಯಣ ಮತ್ತು ದಕ್ಷಿಣಾಯಣ ಪುಣ್ಯಕಾಲದಲ್ಲಿ ಸೂರ್ಯನ ಕಿರಣಗಳು ನೇರವಾಗಿ ನರಸಿಂಹ ದೇವರ ಮೇಲೆ ಬೀಳುತ್ತದೆಯಂತೆ. ಕೃಷ್ಣಜನ್ಮಾಷ್ಟಮಿಯಂದು ಶ್ರೀ ಕೃಷ್ಣನಿಗೆ ವಿಶೇಷ ಅಲಂಕಾರವಿರುತ್ತದೆ. ಸಮಯ : ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನವು ಬೆಳಿಗ್ಗೆ 6ರಿಂದ ರಾತ್ರಿ 9ರ ವರೆಗೆ ತೆರೆದಿರುತ್ತದೆ. ಈ ದೇವಸ್ಥಾನವು ವಾರ ಪೂರ್ತಿತೆರೆದಿರುತ್ತದೆ. ಈ ದೇವಸ್ಥಾನದ ನಿರ್ವಹಣೆಯನ್ನು ಭಾರತ ಪುರಾತನ ವಸ್ತುಶಾಸ್ತ್ರ ಇಲಾಖೆಯು ಮಾಡುತ್ತದೆ. ಈ ದೇವಸ್ಥಾನದಲ್ಲಿ ಊಟದ ವ್ಯವಸ್ಥೆಇರುವುದಿಲ್ಲ ಹಾಗು ಪ್ರತಿದಿನ ಪೂಜೆಯ ನಂತರ ಪ್ರಸಾದವನ್ನು ಹಂಚಲಾಗುತ್ತದೆ. ತಲುಪುವುದು : ಭದ್ರಾವತಿಯ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ತಲುಪುವುದು ತುಂಬಾ ಸುಲಭ . ಸಿಟಿಯ ಮಧ್ಯದಲ್ಲೇ ಇರುವುದರಿಂದ ಹುಡುಕಲುಕಷ್ಟವಿಲ್ಲ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಾಕಷ್ಟು ಬಸ್ಗಳಿದ್ದು ಅವೆಲ್ಲವೂ ಭದ್ರಾವತಿಯ ಮೂಲಕವೇ ಹಾದು ಹೋಗುವುದರಿದ ಭದ್ರಾವತಿಯಲ್ಲಿಇಳಿದು ಅಲ್ಲಿಂದ ಆಟೋ ನಲ್ಲಿ ಸುಲಭವಾಗಿ ತಲುಪಬಹುದು. ಬೆಂಗಳೂರಿನಿಂದ ಮತ್ತು ಮೈಸೊರಿನಿಂದ ಶಿವಮೊಗ್ಗಕ್ಕೆ ಟ್ರೈನ್ಗಳಿದ್ದು ಅವು ಸಹ ಭದ್ರಾವತಿಯ ಮೇಲೆ ಹಾಡು ಹೋಗುವುದರಿಂದ ರೈಲ್ವೆಪ್ರಯಾಣ ಸುಲಭ. ಮತ್ತೊಂದು ರೈಲ್ವೆ ಹಾದಿಯೆಂದರೆ ಬೀರೂರು, ಬೀರೂರಿಗೆ ಬೇರೆ ಬೇರೆ ಕಡೆಗಳಿಂದ ಸಾಕಷ್ಟು ಟ್ರೈನ್ಗಳಿದ್ದುಬೀರೂರಿನಲ್ಲಿ ಇಳಿದು ಅಲ್ಲಿಂದ ಭದ್ರಾವತಿಗೆ ಕೇವಲ ಒಂದು ಘಂಟೆಯಲ್ಲಿ ತಲುಪಬಹುದು ಹತ್ತಿರದ ಏರ್ಪೋರ್ಟ್ ಎಂದರೆ ಹುಬ್ಬಳ್ಳಿ ಡೊಮೆಸ್ಟಿಕ್ ಏರ್ಪೋರ್ಟ್ ಮತ್ತು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ಹತ್ತಿರದ ಆಕರ್ಷಣೆಗಳು: ಭದ್ರ ವೈಲ್ಡ್ ಲೈಫ್ ಸ್ಯಾಂಚುರಿ ಭದ್ರ ಆಣೆಕಟ್ಟು [table id=11 /]