Lakshmi Narasimha Swamy Temple Bhadravathi

Shri Lakshmi Narasimha Swamy Temple Bhadravathi ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ: ಭದ್ರಾವತಿ  ಭದ್ರಾವತಿ ಅಂದ ತಕ್ಷಣ ಎಲ್ಲರಿಗು ನೆನಪಾಗೋದು MPM ಮತ್ತು VISL ಕಾರ್ಖಾನೆಗಳು . ಬೆಂಕಿಪುರ , ಉಕ್ಕಿನ ನಗರ ಅಂತಾನೆನಮ್ಮ ಭದ್ರಾವತಿ ಫೇಮಸ್ ಆಗಿರೋದು . ಹಾಗೇನೇ ಭದ್ರಾವತಿಯಲ್ಲಿ ಮತ್ತೊಂದು ಮುಖ್ಯ ಆಕರ್ಷಣೆ ಇದೆ, 13ನೇ ಶತಮಾನದಹೊಯ್ಸಳರ ಕಾಲದ ಶ್ರೀಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ ಇರುವುದು ನಮ್ಮ ಭದ್ರಾವತಿಯಲ್ಲಿ . ಹೌದು ಭದ್ರಾವತಿಯಹಳೆಯನಗರ ಅಂದರೆ old town ಏರಿಯಾ ನಲ್ಲಿರೋ ಈ ದೇವಸ್ಥಾನ ಹೊಯ್ಸಳರ ಕಾಲದ್ದು. ಇತಿಹಾಸ : ಭೂದೇವಿಯು ಹಿರಣ್ಯಾಕ್ಷ ಎಂಬ ರಾಕ್ಷಸನಿಂದ  ಅಪಹರಿಸಲ್ಪಟ್ಟಾಗ ಭೂದೇವಿಯನ್ನು ರಕ್ಷಿಸಲು ವಿಷ್ಣುವಿನ ಅವತಾರವಾದ ವರಾಹವುತನ್ನ ಎರಡು ಕೋರೆ ಹಲ್ಲುಗಳಿಂದ ಭೂಮಿಯನ್ನು ಅಗೆಯುತ್ತಾನೆ. ಹೀಗೆ ಅಗೆದಾಗ ಅವನ ಎರಡು ಹಲ್ಲುಗಳಿಂದ ಹುಟ್ಟಿರುವುದೇತುಂಗಾ ಮತ್ತು ಭದ್ರ ನದಿಗಳು ಎಂಬ ಸುಳ್ಳುಕಥೆ ಇದೆ. ಆದರೆ ಅದು ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ತಿಳಿದುಬಂದಿಲ್ಲ. 800ವರ್ಷಕ್ಕೂ ಹಳೆಯದಾದ ದುಷ್ಟ ನಾಶಕ ಶಿಷ್ಟ ರಕ್ಷಕ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಯ ದೇವಸ್ಥಾನವನ್ನು ಹೊಯ್ಸಳರ ರಾಜನಾದವಿಷ್ಣುವರ್ಧನನ ಮೊಮ್ಮಗನಾದ ವೀರನರಸಿಂಹನು ಈ ದೇವಸ್ಥಾನವನ್ನು ಕಟ್ಟಿಸಿದನು ಎಂದು ಇತಿಹಾಸ ಹೇಳುತ್ತದೆ. ವಾಸ್ತುಶಿಲ್ಪ: ಭದ್ರಾವತಿಯ ಶ್ರೀಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ನರಸಿಂಹನು ತನ್ನ ಭಕ್ತನಾದ ಪ್ರಹ್ಲಾದನನ್ನು ಕಾಪಾಡುತ್ತಿರುವಂತೆಕುಳಿತಿರುವ ವಿಗ್ರಹವಿದೆ . ದೇವಸ್ಥಾನಕ್ಕೆ 3ಗೋಪುರಗಳಿದ್ದು ಒಂದು ದಕ್ಷಿಣ, ಉಳಿದ ಎರಡು ಗೋಪುರಗಳು ಉತ್ತರ ಮತ್ತುಪಶ್ಚಿಮದಲ್ಲಿದೆ. ದೇವಸ್ಥಾನದ ಮುಂದೆ ಧ್ವಜ ಸ್ಥಂಭವಿದ್ದು ದೇವಸ್ಥಾನದ ಸುತ್ತಲೂ ಹೊಯ್ಸಳರ ಶೈಲಿಯ ಪ್ರದಕ್ಷಿಣಾ ಪಥವಿದೆ . ದೇವಸ್ಥಾನದಲ್ಲಿ ವಿಶೇಷರೀತಿಯ ಲತೆ ಕಂಬಗಳಿದ್ದು 11  ನೇ ಮತ್ತು 13ನೇ ಶತಮಾನದ ಹೊಯ್ಸಳರ ವಾಸ್ತುಶಿಲ್ಪ ಎದ್ದು ಕಾಣುತ್ತದೆ. ದೇವಸ್ಥಾನದ ಒಳಗೋಡೆಯು ಸಾದವಾಗಿದ್ದು ಹೊರಗೋಡೆಗಳು, ಹೊರಗಿನ ಕೆತ್ತನೆಗಳು ನಕ್ಷತ್ರಾಕಾರದಲ್ಲಿದೆ. ಈ ದೇವಸ್ಥಾನದಲ್ಲಿಲಕ್ಷ್ಮಿ ನರಸಿಂಹ ಮಾತ್ರವಲ್ಲದೆ , ಶ್ರೀ ಕೃಷ್ಣ , ಗಣಪತಿ, ಪರಶುರಾಮ ಮತ್ತು ಶಾರದಾಂಬೆಯ ಮೂರ್ತಿಗಳು ಇದೆ. Know about Bhadravathi https://shimogasiri.com/bhadravathi-the-iron-city/ ಹಬ್ಬಗಳ ಆಚರಣೆ: ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ದಸರಾ , ನವರಾತ್ರಿ ಮತ್ತು ವೈಕುಂಠ ಏಕಾದಶಿಯಂದು ವಿಶೇಷ ಪೂಜೆ ನಡೆಯುತ್ತದೆ.ನವರಾತ್ರಿಯಲ್ಲಿ ದಿನವೂ ಸಹ ದೇವರಿಗೆ ವಿಶೇಷ ಅಲಂಕಾರವಿದ್ದು , ಪೂಜೆಯು ನಡೆಯುತ್ತದೆ. ಉತ್ತರಾಯಣ ಮತ್ತು ದಕ್ಷಿಣಾಯಣ ಪುಣ್ಯಕಾಲದಲ್ಲಿ ಸೂರ್ಯನ ಕಿರಣಗಳು ನೇರವಾಗಿ ನರಸಿಂಹ ದೇವರ ಮೇಲೆ ಬೀಳುತ್ತದೆಯಂತೆ. ಕೃಷ್ಣಜನ್ಮಾಷ್ಟಮಿಯಂದು ಶ್ರೀ ಕೃಷ್ಣನಿಗೆ ವಿಶೇಷ ಅಲಂಕಾರವಿರುತ್ತದೆ. ಸಮಯ : ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನವು ಬೆಳಿಗ್ಗೆ 6ರಿಂದ ರಾತ್ರಿ 9ರ ವರೆಗೆ ತೆರೆದಿರುತ್ತದೆ. ಈ ದೇವಸ್ಥಾನವು ವಾರ ಪೂರ್ತಿತೆರೆದಿರುತ್ತದೆ. ಈ ದೇವಸ್ಥಾನದ ನಿರ್ವಹಣೆಯನ್ನು  ಭಾರತ ಪುರಾತನ ವಸ್ತುಶಾಸ್ತ್ರ ಇಲಾಖೆಯು ಮಾಡುತ್ತದೆ. ಈ ದೇವಸ್ಥಾನದಲ್ಲಿ ಊಟದ ವ್ಯವಸ್ಥೆಇರುವುದಿಲ್ಲ ಹಾಗು ಪ್ರತಿದಿನ ಪೂಜೆಯ ನಂತರ ಪ್ರಸಾದವನ್ನು ಹಂಚಲಾಗುತ್ತದೆ. ತಲುಪುವುದು : ಭದ್ರಾವತಿಯ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ತಲುಪುವುದು ತುಂಬಾ ಸುಲಭ . ಸಿಟಿಯ ಮಧ್ಯದಲ್ಲೇ ಇರುವುದರಿಂದ ಹುಡುಕಲುಕಷ್ಟವಿಲ್ಲ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಾಕಷ್ಟು ಬಸ್ಗಳಿದ್ದು ಅವೆಲ್ಲವೂ ಭದ್ರಾವತಿಯ ಮೂಲಕವೇ ಹಾದು ಹೋಗುವುದರಿದ ಭದ್ರಾವತಿಯಲ್ಲಿಇಳಿದು ಅಲ್ಲಿಂದ ಆಟೋ ನಲ್ಲಿ ಸುಲಭವಾಗಿ ತಲುಪಬಹುದು. ಬೆಂಗಳೂರಿನಿಂದ ಮತ್ತು ಮೈಸೊರಿನಿಂದ ಶಿವಮೊಗ್ಗಕ್ಕೆ ಟ್ರೈನ್ಗಳಿದ್ದು ಅವು ಸಹ ಭದ್ರಾವತಿಯ ಮೇಲೆ ಹಾಡು ಹೋಗುವುದರಿಂದ ರೈಲ್ವೆಪ್ರಯಾಣ ಸುಲಭ. ಮತ್ತೊಂದು ರೈಲ್ವೆ ಹಾದಿಯೆಂದರೆ ಬೀರೂರು, ಬೀರೂರಿಗೆ ಬೇರೆ ಬೇರೆ ಕಡೆಗಳಿಂದ ಸಾಕಷ್ಟು ಟ್ರೈನ್ಗಳಿದ್ದುಬೀರೂರಿನಲ್ಲಿ ಇಳಿದು ಅಲ್ಲಿಂದ ಭದ್ರಾವತಿಗೆ ಕೇವಲ ಒಂದು ಘಂಟೆಯಲ್ಲಿ ತಲುಪಬಹುದು ಹತ್ತಿರದ ಏರ್ಪೋರ್ಟ್ ಎಂದರೆ ಹುಬ್ಬಳ್ಳಿ ಡೊಮೆಸ್ಟಿಕ್ ಏರ್ಪೋರ್ಟ್ ಮತ್ತು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ಹತ್ತಿರದ ಆಕರ್ಷಣೆಗಳು: ಭದ್ರ ವೈಲ್ಡ್ ಲೈಫ್ ಸ್ಯಾಂಚುರಿ ಭದ್ರ ಆಣೆಕಟ್ಟು [table id=11 /]

koodali Tunga-Bhadra Sangama Shivamogga

Koodali Tunga-Bhadra Sangama Shimoga: ಕೂಡಲಿ: ಕೂಡಲಿ ಶಿವಮೊಗ್ಗದಲ್ಲಿರುವ ಒಂದು ಚಿಕ್ಕ ಹಳ್ಳಿ . ಚಿಕ್ಕ ಹಳ್ಳಿಯಾದರೂ ಇದರ ಕೀರ್ತಿ ದೊಡ್ಡದು. ಕಾರಣ ಇಲ್ಲಿ ಸಂಗಮವಾಗುವತುಂಗಾ ಮತ್ತು ಭದ್ರ ನದಿಗಳು. ಹೌದು ತುಂಗಾ ಮತ್ತು ಭದ್ರ ನದಿಗಳ ಸಂಗಮವಾಗುವುದು ಇದೆ ಸ್ಥಳದಲ್ಲಿ. ಆದ್ದರಿಂದಲೇ ಕೂಡಲಿಎಂದು ಹೆಸರು ಬಂದಿದೆ. ತುಂಗಾ ಭದ್ರ ನದಿಗಳು ಪವಿತ್ರ ನದಿಗಳು ಎಂದೇ ಹೆಸರು ಪಡೆದಿವೆ. ಈ ಎರಡು ನದಿಗಳು ಸಂಗಮವಾಗುವನೀರಿನಲ್ಲಿ ಸ್ನಾನ ಮಾಡಿದರೆ ಮಾಡಿದ ಪಾಪ ಕರ್ಮಗಳು ತೊಳೆದು ಹೋಗುತ್ತದೆ ಎಂದು ಇಲ್ಲಿನ ಸ್ಥಳೀಯರ ನಂಬಿಕೆ. Also visit https://shimogasiri.com/shri-lakshmi-narasimha-swamy-temple-bhadravathi/ ಕೂಡಲಿಯಲ್ಲಿ ಶಾರದಾಂಬೆಯ ದೇವಸ್ಥಾನವಿರುವುದರಿಂದ ಇಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಸಹ ಮಾಡಿಸುತ್ತಾರೆ. ಇದನ್ನುದಕ್ಷಿಣದ ವಾರಾಣಸಿ ಎಂತಲೂ ಕರೆಯುತ್ತಾರೆ. ಕೂಡಲಿಯಲ್ಲಿರುವುದು 12ನೇ ಶತಮಾನದ ರಾಮೇಶ್ವರ, ಸಂಗಮೇಶ್ವರ , ಚಿಂತಾಮಣಿ ನರಸಿಂಹ ಸ್ವಾಮಿ  , ಋಷ್ಯಾಶ್ರಮ ಸ್ವಾಮಿದೇವಸ್ಥಾನಗಳು. ಈ ದೇವಸ್ಥಾನಗಳು ನಿರ್ಮಾಣವಾಗಿರುವುದು ಹೊಯ್ಸಳರ ಕಾಲದಲ್ಲಿ. ದೇವಸ್ಥಾನದ ಹತ್ತಿರ ಇರುವ ಕೆಲವು ಹಳೆಯಶಾಸನಗಳನ್ನು ಓದಿದರೆ ಈ ದೇವಸ್ಥಾನಗಳು ನಿರ್ಮಾಣವಾದ ಕಾಲವನ್ನ ತಿಳಿಯಬಹುದು. “ಪ್ರಹ್ಲಾದನು” (ಹಿರಣ್ಯಕಶ್ಯಪು ಮತ್ತುಕಯಾದುವಿನ ಮಗ ) ಈ ದೇವಸ್ಥಾನದ ಭಕ್ತನಾಗಿದ್ದನು ಎಂದು ಇತಿಹಾಸ ಹೇಳುತ್ತದೆ. ಕೂಡಲಿ ಇರುವುದು ಶಿವಮೊಗ್ಗದಿಂದ 14ಕಿ ಮೀ ದೂರದಲ್ಲಿ. ತುಂಗಾ ಮತ್ತು ಭದ್ರ ನದಿಗಳು ಇಲ್ಲಿ ಸಂಗಮವಾಗಿ ಮುಂದೆ ಒಟ್ಟಾಗಿಹರಿಯುತ್ತವೆ. ಈ ಎರಡು ನದಿಗಳು ಸೇರುವ ಜಾಗದಲ್ಲಿ  ಒಂದು ನಂದಿ ವಿಗ್ರಹವಿದೆ. ಕೂಡಲಿ ಮಠ: ಕೂಡಲಿಯಲ್ಲಿ  ಎರಡು ಮಠಗಳಿವೆ. ಒಂದು ಶಂಕರ ಮಠ ಮತ್ತೊಂದು ಶ್ರೀ ಅಕ್ಷೋಭ್ಯ ತೀರ್ಥ ಮಠ.  ಶಂಕರ ಮಠವನ್ನುಸ್ಥಾಪಿಸಿದವರು ಶೃಂಗೇರಿ ಸ್ವಾಮಿಗಳು. ಇಲ್ಲಿನ ಶಂಕರ ಮಠದ ಸ್ಥಾಪನೆಯ ಹಿಂದೆ ಒಂದು ಕಥೆ ಇದೆ. 15ನೇ ಅಥವಾ 16ನೇಶತಮಾನದಲ್ಲಿ ಶೃಂಗೇರಿಯ ಸ್ವಾಮಿಗಳು ತೀರ್ಥಯಾತ್ರೆಗೆಂದು ಕಾಶಿಗೆ ಹೋಗಿದ್ದರಂತೆ. ಬಹಳ ದಿನಗಳ ಕಾಲ ಮರಳಿ ಬರದೇ ಇದ್ದಕಾರಣ ಸ್ವಾಮಿಗಳ ಶಿಷ್ಯರಾದ ಮರಿಸ್ವಾಮಿಗಳು ಪೀಠಾರೋಹಣ ಮಾಡಿದ್ದರು. ಇದಾದ ಸ್ವಲ್ಪ ದಿನಗಳ ನಂತರ ಹಿಂತಿರುಗಿದ ಹಿರಿಸ್ವಾಮಿಗಳು ವಿಷಯ ತಿಳಿದು ಶೃಂಗೇರಿಯನ್ನು ಬಿಟ್ಟು ಕೂಡಲಿಗೆ ಬಂದು ಇಲ್ಲಿ ಶಂಕರ ಮತವನ್ನು ಸ್ಥಾಪಿಸಿದರು. ನಂತರ ಮೈಸೂರಿನಮಹಾರಾಜರಾದ ಕೃಷ್ಣರಾಜ ಒಡೆಯರ್ರವರ ಸಹಾಯದಿಂದ ಈ ಮಠವು ಒಳ್ಳೆಯ ಹೆಸರು ಮಾಡಿತು. ಶಂಕರಾಚಾರ್ಯರಸಿದ್ದಂತವನ್ನು ಇಲ್ಲಿ ಹೇಳಿಕೊಡಲಾಗುತ್ತಿತ್ತು. ಶ್ರೀ ಆರ್ಯ ಅಕ್ಷೋಭ್ಯ ತೀರ್ಥ ಮಠ :ಶ್ರೀ ಅಕ್ಷೋಭ್ಯ ತೀರ್ಥ (ಮದ್ವಾಚಾರ್ಯರ ಪ್ರತಿಪಾದಿ ) ರವರು 13ನೇ ಅಥವಾ 14ನೇ ಶತಮಾನದಲ್ಲಿ ಈ ಮತವನ್ನು ಸ್ಥಾಪಿಸಿದರು.ಈ ಮಠದಲ್ಲಿ ಸಂಸ್ಕೃತ ಮತ್ತು ಮದ್ವಾಚಾರ್ಯರ ಸಿದ್ದಂತಗಳನ್ನು ಪಾಲಿಸಲಾಗುತ್ತದೆ. ಇಲ್ಲಿನ ಸ್ವಾಮೀಜಿಗಳನ್ನು ಭೇಟಿ ಮಾಡಬೇಕೆಂದರೆ ಮೊದಲೇ ಅನುಮತಿ ಪಡೆಯಬೇಕು. ಶಿವಮೊಗ್ಗದಿಂದ ಕೇವಲ 14ಕಿ ಮೀ ಇರುವ ಈ ಪವಿತ್ರ ಕ್ಷೇತ್ರ ಕೂಡಲಿ, ತುಂಗಾ ಮತ್ತು ಭದ್ರ ನದಿಗಳು ಸಂಗಮಿಸುವ ಸ್ಥಳವಾಗಿದೆ.ಶಿವಮೊಗ್ಗದಿಂದ ಇಲ್ಲಿಗೆ ಬಸ್ ಅನುಕೂಲ ಚೆನ್ನಾಗಿದ್ದು, ಮಳೆಗಾಲದಲ್ಲಿ ಬಂದರೆ ಈ ಎರಡು ನದಿಗಳು ತುಂಬಿ ಹರಿಯುವುದನ್ನುನೋಡಬಹುದು.   ಭಾರತದ ಪುರಾತನ ವಸ್ತುಶಾಸ್ತ್ರ  ಇಲಾಖೆಯು ಕೂಡಲಿಯಲ್ಲಿರುವ ಹೊಯ್ಸಳರ ಕಾಲದ ದೇವಸ್ಥಾನವನ್ನು ನಿರ್ವಹಿಸುತ್ತಿದೆ. ಆದರೆಒಂದು ದುಃಖದ ವಿಷಯ ಎಂದರೆ ಕೆಲವು ಹಳೆಯ ಶಾಸನಗಳು ಮತ್ತು ದೇವರ ಮೂರ್ತಿಗಳನ್ನು ಹಾಗೆ ಬಿಸಾಡಲಾಗಿದೆ. ವಸ್ತುಶಾಸ್ತ್ರಇಲಾಖೆಯು ಇದರ ಬಗ್ಗೆ ಗಮನ ಹರಿಸಬೇಕಾಗಿದೆ. ನೋಟ್ : ನದಿಗಳು ಸಂಗಮಿಸುವ ಜಾಗಕ್ಕಿಂತ ಮುಂದೆ ಹೋಗಿ ಈಜುವುದು ಸ್ನಾನ ಮಾಡುವುದು ಅಪಾಯಕರ . ಸಂಗಮದಜಾಗದಲ್ಲಿರುವ ನಂದಿ ವಿಗ್ರಹವನ್ನು ದಾಟಿ ಹೋಗದೆ ಇದ್ದಾರೆ ಒಳಿತು.        

Keladi & Ikkeri- Historic places in Shivamogga

Keladi & Ikkeri temples: ಕೆಳದಿ: ಕರ್ನಾಟಕದ ಇತಿಹಾಸದಲ್ಲಿ ಕೆಳದಿ ನಾಯಕರ ಪಾತ್ರ ಪ್ರಮುಖವಾದದ್ದು . ಮಲೆನಾಡಿನ , ಕರಾವಳಿಯ ಮತ್ತು ಕರ್ನಾಟಕದ ಈಗಿನ ಪಶ್ಚಿಮ ಘಟ್ಟಗಳಲ್ಲಿ ಆಡಳಿತವನ್ನು ನಡೆಸಿದ್ದ ಕೀರ್ತಿ ಕೆಳದಿ ನಾಯಕರದ್ದು. ಅದಲ್ಲದೆ ಕೇರಳದ ಉತ್ತರ ಭಾಗ ಮತ್ತು ಮಲಬಾರ್ ಪ್ರಾಂತ್ಯಗಳಲ್ಲಿಯೂ ಇವರ ಆಡಳಿತವಿತ್ತು. ಕೆಳದಿಯನ್ನು ಆಳಿದವರು ಹಲವಾರು ನಾಯಕರೇ ಆದರೂ , ಶಿವಪ್ಪನಾಯಕನ ಕೊಡುಗೆ ಅಪಾರ. ಶಿವಪ್ಪನಾಯಕನು ಕೆಳದಿಯನ್ನು 1645-1660 ರ ವರೆಗೆ ಆಳಿದನು. ಅವನು ಸಾಹಿತ್ಯ ಮತ್ತು ಲಲಿತಕಲೆಗಳಲ್ಲಿ ಆಸಕ್ತಿಯನ್ನು ಹೊಂದಿದ್ದನು. … Read moreKeladi & Ikkeri- Historic places in Shivamogga

ShimogaSiri

K R Puram

Shivamogga

Karnataka

577202

9611875511