Branded Gold Jewellery Showrooms Shivamogga

    ಚಿನ್ನ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ, ಅದ್ರಲ್ಲೂ ಹೆಣ್ ಮಕ್ಕಳಿಗಂತು ಕೇಳೋದೆ ಬೇಡ. ಎಲ್ಲಾ ಜ್ಯುವೆಲರಿ ಶೋರೂಂಗಳಲ್ಲೂ ಅವರೇ ಇರ್ತಾರೆ.
ಒಂದು ಕಾಲ ಇತ್ತು ಚಿನ್ನ ತಗೋಬೇಕು ಅಂದ್ರೆ ಅಥವಾ ಚಿನ್ನದ ಒಡವೆ ಮಾಡಿಸ್ಬೇಕು ಅಂದ್ರೆ ಅಕ್ಕಾಸಾಲಿಗನ ಹತ್ತಿರ ಹೋಗಬೇಕಿತ್ತು. ಯಾವ ಡಿಸೈನ್ ಬೇಕು ಅಂತ ಹೇಳಿ ಆರ್ಡರ್ ಕೊಟ್ಟು ದುಡ್ಡು ಕೊಟ್ಟು ಅವರು ಮಾಡಿಕೊಡೋವರೆಗೂ ಕಾಯಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ. ಜನ ಬ್ರಾಂಡೆಡ್ ಜ್ಯುವೆಲರಿ ಮೊರೆ ಹೊಗುತ್ತಿದ್ದಾರೆ. ತಮಗೆ ಯಾವಾಗ ಬೇಕೊ ಆವಾಗ ಹಾಗೂ ತಕ್ಷಣದಲ್ಲಿ ಚಿನ್ನವನ್ನು ಈ ಬ್ರಾಂಡೆಡ್ ಶೋರೂಂಗಳಲ್ಲಿ ಖರೀದಿ ಮಾಡಬಹುದು. ಕಾರಣ ಇದೊಂದೆ ಅಲ್ಲ. ಗ್ರಾಹಕರು ಎಚ್ಚೆತ್ತು ಕೊಳ್ಳುತ್ತಿದ್ದಾರೆ.
ಜನರ ಅಭಿರುಚಿ ಬದಲಾದಂತೆ ನಮ್ಮ ಶಿವಮೊಗ್ಗದಲ್ಲಿ ಕೂಡ ಬ್ರಾಂಡೆಡ್ ಜ್ಯುವೆಲರಿ ಶೋರೂಂಗಳಾಗಿದೆ. ಶಿವಮೊಗ್ಗದಲ್ಲಿ ಮೊದಲು ಬ್ರಾಂಡೆಡ್ ಶೋರೂಂ ಅಂತ ಇದ್ದದ್ದು ಆಭರಣ್ ಜ್ಯುವೆಲರ್ಸ್ ಮಾತ್ರ. ನಂತರದಲ್ಲಿ ಬಂದಿದ್ದು ಟಾಟಾ ಗೋಲ್ಡಪ್ಲಸ್( ಈಗ ಅದು ತನಿಷ್ಕ್ ಆಗಿದೆ) , ಜೊಯ್ ಅಲುಕಾಸ್, ಸುಲ್ತಾನ್ ಗೋಲ್ಡ್ಸ್ ಅಂಡ್ ಡೈಮಂಡ್ಸ್, ಮಲಾಬರ್ ಗೋಲ್ಡ್ , ಕಲ್ಯಾಣ್ ಜ್ಯುವೆಲರ್ಸ್.

      ಇದೇನು ಹೊಸದಾಗಿ ಬ್ರಾಂಡೆಡ್ ಜ್ಯುವಲರಿ ಅಂತೀರ? ಬ್ರಾಂಡೆಡ್ ಜ್ಯುವಲರಿ ಖರೀದಿ ಮಾಡಲು ಬಹಳಷ್ಟು ಕಾರಣಗಳಿವೆ.
1. Brand name
2. Purity
3. Services offered
4. Written lifetime guarantee
5. BIS Hallmark
6. Offers & Discounts they give

ಹಾಗಂತ unbranded ಜ್ಯುವಲರಿನಲ್ಲಿ purity ಇರೋದಿಲ್ಲ ಅಂತ ಅಲ್ಲ. ಈಗಿನ ಕಾಲದಲ್ಲಿ ಬ್ರಾಂಡ್ ನೇಮ್ ತುಂಬ ಮುಖ್ಯ ಆಗತ್ತೆ. ಕಾಲ ಬದಲಾದ ಹಾಗೆ ಜನರ preference ಕೂಡ ಬದಲಾಗಿದೆ. ಕೊಡೋ ದುಡ್ಡಿಗೆ ಸರಿಯಾಗಿ purity ಸಿಗಬೇಕು ಅಂತ expect ಮಾಡ್ತಾರೆ. ಆದ್ರೆ ಅದರಲ್ಲಿ ತಪ್ಪೇನಿಲ್ಲ.
ಇದೆಲ್ಲಾ ಕಾರಣಗಳಿಂದಾಗಿ ನಮ್ಮ ಶಿವಮೊಗ್ಗ ಕೂಡ ಬೆಳೀತಾ ಇದೆ. 10 ವರ್ಷಗಳ ಹಿಂದೆ ಕೇವಲ ಒಂದೇ ಒಂದಿದ್ದ ಬ್ರಾಂಡೆಡ್ ಜ್ಯುವೆಲರಿ ಶೋರೂಂ ಈಗ 7 ಕ್ಕೇರಿದೆ.
ಈ ಶೋರೂಂಗಳೆಲ್ಲಾ ಇರೋದು ನಮ್ಮ ಗೋಪಿ ಸರ್ಕಲ್ ಸುತ್ತಮುತ್ತ.
ಬ್ರಾಂಡೆಡ್ ಜ್ಯುವಲರಿ ಶೋರೂಂ ವಿಳಾಸ:
1. ಆಭರಣ್ ಜ್ಯುವೆಲರ್ಸ್, ಜೆ ಪಿ ಎನ್ ರೋಡ್
2. ತನಿಷ್ಕ್, ಬಾಲ್ ರಾಜ್ ಅರಸ್ ರೋಡ್
3. ಜೊಯ್ ಅಲುಕ್ಕಾಸ್, ಬಾಲ್ ರಾಜ್ ಅರಸ್ ರೋಡ್
4. ಸುಲ್ತಾನ್ ಗೋಲ್ಡ್ಸ್ ಅಂಡ್ ಡೈಮಂಡ್ಸ್ , ದುರ್ಗಿ ಗುಡಿ
5. ಮಲಾಬರ್ ಗೋಲ್ಡ್, ಬಿ ಹೆಚ್ ರೋಡ್
6. ಕಲ್ಯಾಣ್ ಜ್ಯುವೆಲರ್ಸ್, ನೆಹರು ರೋಡ್

7.ಮೈತ್ರಿ ಜ್ಯುವೆಲರ್ಸ್ , ಮಥುರಾ  ಆರ್ಕೇಡ್  ಬಾಲ್ ರಾಜ್ ಅರಸ್ ರೋಡ್

8. Bhima jewellars, BH Road

#ನಮ್ಮ ಶಿವಮೊಗ್ಗ

Leave a Comment

13 − 3 =

ShimogaSiri

K R Puram

Shivamogga

Karnataka

577202

9611875511