Barkaana falls: one among top 10 waterfalls of India

ಬರ್ಕಾನ ಫಾಲ್ಸ್ : ನಮ್ಮ ಶಿವಮೊಗ್ಗ
ಬರ್ಕಾನ ಫಾಲ್ಸ್ ಇರುವುದು ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ. ಆಗುಂಬೆಯಿಂದ 10ಕಿ ಮೀ ದೂರ. ಭಾರತದ 10 ಎತ್ತರದ ಜಲಪಾತಗಳಲ್ಲಿ ಇದು ಕೂಡ ಒಂದು. ಈ ಜಲಪಾತವು ಸಮುದ್ರ ಮಟ್ಟದಿಂದ 259ಮೀ ಎತ್ತರದಲ್ಲಿದೆ . ಈ ಜಲಪಾತದ ಎತ್ತರ 850ಅಡಿ.

ಈ ಪ್ರದೇಶದಲ್ಲಿ ಕಂಡು ಬರುವ ‘ಬರ್ಕ'( mouse deer) ಎಂಬ ಪ್ರಾಣಿಯಿಂದ ಈ ಜಲಪಾತಕ್ಕೆ ‘ ಬರ್ಕಾನ‘ ಎಂದು ಹೆಸರು ಬಂದಿದೆ.
ಬರ್ಕಾನ ಜಲಪಾತದಲ್ಲಿ ಹರಿಯುವುದು ಸೀತಾ ನದಿ. ಟ್ರೆಕಿಂಗ್ ಮಾಡಲು ಇದು ಸುಂದರ ಪ್ರದೇಶ. ಈ ಜಲಪಾತವು ಕಾಡಿನ ಮಧ್ಯದಲ್ಲಿರುವುದರಿಂದ ಇಲ್ಲಿಗೆ ಹೋಗಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು ಮತ್ತು ಸ್ಥಳೀಯ ಜನರ ಸಹಾಯ ಪಡೆದುಕೊಂಡರೆ ಒಳ್ಳೆಯದು. ಈ ಜಲಪಾತದಲ್ಲಿ ಹೈಡ್ರೊಎಲೆಕ್ಟ್ರಿ ಪವರ್ ಸ್ಟೇಷನ್ ಕೂಡ ಇದ್ದು, ಜಲವಿದ್ಯುತ್ ತಯಾರಿಸುತ್ತಾರೆ.

ಮಳೆಗಾಲದಲ್ಲಿ ಜಲಪಾತವು ತುಂಬಿ ಹರಿಯುವುದರಿಂದ ಜಲಪಾತದ ವೀಕ್ಷಣೆಗೆ ಸರಿಯಾದ ಕಾಲ.
ಈ ಜಲಪಾತಕ್ಕೆ ಬಂದರೆ ಇದರ ಸುತ್ತ ಮುತ್ತ ಇರುವ ಇನ್ನು ಕೆಲವು ಜಾಗಗಳನ್ನು ಸಹ ನೋಡಬಹುದು. ಗೋಪಿ ಕೃಷ್ಣ ದೇವಸ್ಥಾನ, ನಿಶಾನಿ ಗುಡ್ಡ, ಆಗುಂಬೆ ರೈನ್ ಫಾರೆಸ್ಟ್ ರಿಸರ್ಚ್ ಸ್ಟೇಷನ್, ಕುಂಚಿಕಲ್ ಜಲಪಾತ(https://shimogasiri.com/highest-water-fall-in-india-kunchikal-falls-shivamogga/) (ಇದು ಭಾರತದ ಅತಿ ಎತ್ತರದ ಜಲಪಾತ) ಇವು ಬರ್ಕಾನ ಜಲಪಾತದ ಸುತ್ತಮುತ್ತ ಇರುವ ಜಾಗಗಳು.

How to reach: ತೀರ್ಥಹಳ್ಳಿಯಿಂದ 80ಕಿ ಮೀ, ಆಗುಂಬೆಯಿಂದ 10ಕಿ ಮೀ
Height: 850ft, 259m above from sea level
Famed as: Barkaana falls
Best time to visit: July to September
Open all days, no entry fee
Visiting hours: 8am to 6pm
ಮಂಗಳೂರು ವಿಮಾನ ನಿಲ್ದಾಣದಿಂದ 135ಕಿ ಮೀ
ಉಡುಪಿ ರೈಲ್ವೆ ಸ್ಟೇಷನ್ ಇಂದ 35ಕಿ ಮೀ
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹಲವು ಟ್ರೈನ್ ಗಳಿದ್ದು, ಶಿವಮೊಗ್ಗದಿಂದ ಆಗುಂಬೆಯ ವರೆಗೆ ಬಹಳ ಬಸ್ ಗಳು ಇವೆ.

Leave a Comment

one + 2 =

ShimogaSiri

K R Puram

Shivamogga

Karnataka

577202

9611875511