Ameer Ahmad Circle Shivamogga

Ameer Ahmad Circle Shimoga

ಅಮೀರ್ ಅಹಮದ್ ಸರ್ಕಲ್- ಶಿವಮೊಗ್ಗ

Ameer Ahmad circle Shimoga
Ameer Ahmad circle Shimoga

ಅಮೀರ್ ಅಹಮದ್ ಸರ್ಕಲ್ ಶಿವಮೊಗ್ಗದ ಮೈನ್ ಸರ್ಕಲ್ ಮತ್ತು ದೊಡ್ಡದೂ ಹೌದು. ಶಿವಮೊಗ್ಗದ ಸೆಂಟರ್ ಅಂತನೂ ಹೇಳಬಹುದು. ಶಿವಮೊಗ್ಗದಲ್ಲಿ ಏನೇ ಪ್ರಮುಖ ಚಟುವಟಿಕೆಗಳು ನಡೆದರೂ ಅದು ಈ ಸರ್ಕಲ್ ಮೂಲಕನೇ ಹಾದು ಹೋಗೋದು. ಅದು ಪ್ರೊಟೆಸ್ಟ್ ಆಗಿರಬಹುದು, ಪ್ರೊಸೆಷನ್ ಆಗಿರಬಹುದು, ಸ್ಟೈಕ್ ಆಗಿರಬಹುದು. ಇದು ಶಿವಮೊಗ್ಗದ ಮೈನ್ ಮಾರ್ಕೆಟ್ ಏರಿಯಾ. ಶಿವಮೊಗ್ಗದ ಮುಖ್ಯ ರಸ್ತೆಗಳಾದ ನೆಹರೂ ರಸ್ತೆ, ಬಿ ಹೆಚ್ ರಸ್ತೆ ಗೆ ಇದು ಕನೆಕ್ಟೆಡ್. ಬಸ್ ಸ್ಟಾಂಡ್ ಇಂದ ಬಿ ಹೆಚ್ ರೋಡ್ ಮೇಲೆ ಬಂದ್ರೆ ಸುಮಾರು 1 ಕಿ ಮೀ ದೂರ. ಅಲ್ಲಿಂದ ಎಡಕ್ಕೆ ನೆಹರೂ ರೋಡ್ ಗೆ ಕನೆಕ್ಟ್ ಆಗತ್ತೆ. ಬಲಗಡೆ ಹೋದರೆ ಕೆ ಆರ್ ಪುರಂ, ಸ್ಟೈಟ್ ಹೋದ್ರೆ ಹೂವಿನ ಮಾರ್ಕೆಟ್ ಮತ್ತು ಗಾಂಧಿ ಬಜಾರ್. ಈಗಿನ ಹೂವುನ ಮಾರ್ಕೆಟ್ ಇರೋ ಜಾಗದಲ್ಲಿ ಮೊದಲು ತಾಲ್ಲೂಕ್ ಆಫೀಸ್ ಇತ್ತು.

Gandhi Bazar Flower Market
Gandhi Bazar Flower Market
Venkatesha Sweet house Shimoga
Venkatesha Sweet house Shimoga

ಸರ್ಕಲ್ ಪಕ್ಕದಲ್ಲೇ ಇರೋದು ವೆಂಕಟೇಶ ಸ್ವೀಟ್ ಹೌಸ್. ಇಲ್ಲಿ ಮೈಸೂರ್ ಪಾಕ್ ಶಿವಮೊಗ್ಗದಲ್ಲಿ ತುಂಬ ಫೇಮಸ್. ಇನ್ನು ಮುಂದೆ ಹೋದ್ರೆ ಗಾಂಧಿ ಬಜಾರ್. ಗಾಂಧಿ ಬಜಾರ್ ಬಗ್ಗೆ ಹೇಳೋದೆ ಬೇಡ. ಹಣ್ಣು ಹೂವು ತರಕಾರಿ ಬಟ್ಟೆ ಚಪ್ಪಲಿ ಮನೆ ಬಳಕೆ ವಸ್ತುಗಳು ಇಲ್ಲಿ ಹೋಲ್ಸೇಲ್ ದರದಲ್ಲಿ ಸಿಗುತ್ತದೆ.

City centre mall Shimoga
City centre mall Shimoga

  ಇನ್ನು ಸರ್ಕಲ್ ನ ಮೈನ್ ಅಟ್ರಾಕ್ಶನ್ ಅಂದ್ರೆ ಶಿವಪ್ಪನಾಯಕ ಮಾರ್ಕೆಟ್ ಈಗ ಸಿಟಿ ಸೆಂಟರ್ ಮಾಲ್ ಆಗಿದೆ. ಮಾಲ್ ಆಗೋಕು ಮುಂಚೆ ಇಲ್ಲಿ ಹಣ್ಣು ಹೂವು ತರಕಾರಿ ಮಾರ್ಕೆಟ್ ಇದ್ದದ್ದು ಇಲ್ಲೇ. ಕಾಲ ಬದಲಾದಂತೆ ನಮ್ಮ ಶಿವಮೊಗ್ಗ ಕೂಡ ಬದಲಾಗ್ತಾ ಇದೆ. ಮಾರ್ಕೆಟ್ ಜಾಗದಲ್ಲಿ ಈಗ ಮಾಲ್ ಆಗಿದೆ. ಶಿವಮೊಗ್ಗದ ಮೋಸ್ಟ್ ಹ್ಯಾಪೆನಿಂಗ್ ಸ್ಪಾಟ್. ಇಲ್ಲಿ ಬಂದು ಸೆಲ್ಫಿ ತಗೊಂಡು ಫೆಸ್ ಬುಕ್ ಗೆ ಅಪಲೋಡ್ ಮಾಡೋ ಹುಚ್ಚು ನಮ್ ಹುಡುಗ್ರಿಗೆ.                                                              1

Crowd during Ganapathi Visarjan
Crowd during Ganapathi Visarjan

ಗಣಪತಿ ಹಬ್ಬ ಬಂತು ಅಂದ್ರೆ ಶಿವಮೊಗ್ಗ ಪೂರ್ತಿ ಕೇಸರಿಮಯ. ಹಿಂದಿನಿಂದಲೂ ಅಷ್ಟೇ ಭೀಮೇಶ್ವರ ದೇವಸ್ಥಾನದಲ್ಲಿ ಕೂರಿಸುವ ಹಿಂದೂ ಮಹಾಸಭೆ ಗಣಪತಿ ವಿಸರ್ಜನೆ ಮಾಡುವ ದಿನದಂದು ಈ ಸರ್ಕಲ್ ಸಂಪೂರ್ಣ ಕೇಸರಿ ಬಣ್ಣ. ಅದರಲ್ಲೂ ಈ ವರ್ಷ ಅಂತೂ ಹಿಂದಿನ ವರ್ಷಗಳಿಗೆ ಹೋಲಿಸಿದ್ರೆ ಆಚರಣೆ ಜೊರಾಗಿತ್ತು. ಈ ಸರ್ಕಲ್ ನಲ್ಲಿ ಅಂಡರ್ ಪಾಸ್ ಕೂಡ ಇದೆ. ಆದರೆ ಹೆಸರಿಗೆ ಮಾತ್ರ. ಕಟ್ಟಿದ್ದಷ್ಟೇ ಆದರೆ ಉಪಯೋಗ ಮಾಡಲಿಕ್ಕೆ ಓಪನ್ ಕೂಡ ಮಾಡಿಲ್ಲ. ಈ ಸರ್ಕಲ್ ಒಂಥರಾ ಸೂಪರ್ ಮಾರ್ಕೆಟ್ ಇದ್ದಂಗೆ. Everything available under one circle.

Gandhi park Shivamogga

Ameer Ahmad circle shimoga
Ameer Ahmad circle shimoga

ಅಮೀರ್ ಅಹಮದ್ ಸರ್ಕಲ್ ನಿಂದ ನೆಹರೂ ರೋಡ್ ಮೇಲೆ ಹೋದ್ರೆ ಸಿಗೋದು ಗೋಪಿ ಸರ್ಕಲ್. ಇದೂ ಕೂಡ ಶಿವಮೊಗ್ಗದ ಮೈನ್ ಸರ್ಕಲ್. ಬ್ಯಾಂಕ್ ಗಳು ಬಟ್ಟೆ ಅಂಗಡಿಗಳು. ಜ್ಯುವೆಲರಿ ಷೋರೂಂ ಗಳು. ಬುಕ್ ಸ್ಟೋರ್ಸ್, ಟಾಕೀಸ್ ಗಳು, commercial complex ಗಳು ಈ ಸರ್ಕಲ್ ಸುತ್ತಮುತ್ತ ಇರೋದು.

ಇಷ್ಟೆಲ್ಲಾ ಬರೆಯೋ ಅವಶ್ಯಕತೆ ಇಲ್ಲಾ ಅನ್ಸತ್ತೆ. ಯಾಕೆಂದರೆ ಶಿವಮೊಗ್ಗದಲ್ಲಿ ಇರೋರಿಗೆ ಇದೆಲ್ಲಾ ಗೊತ್ತಿರೋದೆ. ಆದರೆ ನಮ್ಮ ಶಿವಮೊಗ್ಗ ಬಗ್ಗೆ ಬೇರೆಯವರೂ ಒದಿ ತಿಳಿದುಕೊಳ್ಳಲಿ ಅನ್ನೋ ಆಸೆ. ನಮ್ಮ ಶಿವಮೊಗ್ಗದ ಬಗ್ಗೆ ಬರೆಯಲಿಕ್ಕೆ ಒಂದು ಚಿಕ್ಕ ವಿಷಯ ಸಿಕ್ಕರೂ ಸಾಕು. ಹಾಗೆನೇ ಇದೂ ಕೂಡ ಒಂದು.
❤love for namma Shivamogga❤

Leave a Comment

19 + 8 =

ShimogaSiri

K R Puram

Shivamogga

Karnataka

577202

9611875511